ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

08 July, 2014

ಒಲವು ಅವರಿಬ್ಬರನು ಒಂದಾಗಿಸಿತು.. (ಭಾವಾನುವಾದ)

ನಲ್ಬೆಳಗಿನ ಹೊತ್ತದು
ಬೆಸೆದು ಬೆರಳಿಗೆ ಬೆರಳು 
ಹಾದಿಯಲಿ ನಡೆದೆವು
ಕಾಣಿಸಿತಲ್ಲಿ ಒಲವು!

ಮಧುರ ನಗೆ ಉತ್ಕಟ ಹಂಬಲ;
ಬೆಚ್ಚ ಹೊದಿಕೆಯ ಒಲವು;
ಪಿಸುನುಡಿಯ ಸಿಹಿ ಅಮಲು;
ದೈವಿಕ ಮೌನದ ಹೊಳಲು;
ಕರಗಿ ನದಿಯಾಗಿ ಹರಿದೆವು!

ಒಲವಿನ ರೂಪ ರೇಖೆ ಹುಡುಕುತ
ಸೋತು ಸುಣ್ಣವಾಗಿ ಶರಣು!
ನಿತ್ಯ, ಸತ್ಯ, ನೋವು, ನಲಿವು
ಒಲವಿಗೆ ರೂಪ ಹಲವು!.

ಬಿರುಗಾಳಿ ಬೀಸಿತು, 
ಕಾಲ್ಕೆಳಗೆ ಬಿರುಕು!
ಕತ್ತಲು ರೆಕ್ಕೆ ಬಿಚ್ಚಿತು,
ಬೆಳಕು ನೆರಳಿಗೆ ಶರಣು!
ಸೊರಗಿ ಒಣಗಿ ಹಗಲು,
ಎಳೆಯಿತು ಕೊನೆಯ ಉಸಿರು!

ಅಗಲವಾಗಿ ಹರಡಿದ ಹೆದ್ದಾರಿ;
ಕೊನೆಯಲ್ಲಿ ಸನಾತನ ಗುಡಿ;
ಮುಸ್ಸಂಜೆ ಗಂಟೆ ಬಾರಿಸಿತು;
ಭೌತಿಕ ಕಾಯಗಳು ಅಳಿದವು! 

ನಾವು ಹಾದಿಯಲೇ ಉಳಿದೆವು!
ಬಲಶಾಲಿ ಬೆಸುಗೆಯ ಒಲವು
ಒಂದಾದ ಪ್ರಜ್ಞೆ ಸಾಕ್ಷಿಯಾಯಿತು.
ನಾವೀಗ ನಾವಲ್ಲ, ಬರೇ ನಾನು!




Here, on this path,
Had we stood 
Holding each other's hands,
When love visited us at the dawn..
Those sweet smiles and longing,
Wrapped in the warmth of love,
The sweetness of whispers
Multifolded in divine silence..
Melted our hearts and bodies..
The efforts of defining love
Were all in vain..
We discovered, that it was beauty,
it was truth, it was pain and it was eternal..
When the steps had vanished from the 
Blows of the wind,
When the night spread its wings
And the light dissolved..
When the leaves of days
Fell dry and dead..
The distant path beckoned towards
The eternal home..

Though our mortal selves vanished..
Still we stand, here, on this path..
With the merging consciousness
Of we are not two, but ONE..
-Vidya

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...