ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ|
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋSಭಿಜಾಯತೇ||
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ|
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಭುದ್ಧಿನಾಶಾದ್
ವಿನಶ್ಯತಿ||
ವಿಷಯಗಳನ್ನೇ ನೆನೆಯುತ್ತಿರುವ ಮನುಷ್ಯರಿಗೆ ಅವುಗಳ ನಂಟು
ಬೆಳೆಯುತ್ತದೆ. ನಂಟಿನಿಂದ ಆಸೆ ಕುದುರುತ್ತದೆ. ಆಸೆಗೆ ಅಡ್ಡಿಯಾದಾಗ ರೊಚ್ಚು ಮೂಡುತ್ತದೆ.
ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ (ತಪ್ಪು
ಗ್ರಹಿಕೆ). ಅಂತಹ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು, ಮರೆವಿನಿಂದ ತಿಳಿಗೇಡಿತನ.
ತಿಳಿಗೇಡಿತನದಿಂದ ಸರ್ವನಾಶ!
-ಭಗವದ್ಗೀತೆ ಎರಡನೆಯ ಅಧ್ಯಾಯ
No comments:
Post a Comment