ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 July, 2014

ಚಂದದ ಹಕ್ಕಿಯ ವ್ಯಥೆ!

ಒಲವೇ,

ಚಂದದ ಹಕ್ಕಿಯೊಂದು ಅರಮನೆಯಲಿತ್ತು..
ಆಗಸದತ್ತಲೇ ದಿಟ್ಟ ದೃಷ್ಟಿಯನಿಟ್ಟಿತ್ತು..
ಪಂಜರದ ಬಾಗಿಲು ತೆರೆದೇ ಇತ್ತು..
ಆದರೂ ಹಾರಲು ಒಲ್ಲೆಯೆನುತಿತ್ತು..
ನೋಡಿದರೆ ರೆಕ್ಕೆಯೇ ಮುರಿದಿತ್ತು!

ಓಂಕಾರ ನಾದದ ಸೆಳೆತವೇ..

ಮುಂಗಾರು ಮುಗಿಲಿನ  ಆರ್ಭಟಕೆ ಬೆದರಿಯೇ,
ಸಾಗರನ ಶಂಖನಾದದ ಓಂಕಾರದ ಸೆಳೆತವೇ,
ಎಂದಿಗಿಂತ ತುಸು ಬೇಗ ಹಾಜರಿ ಹಾಕಿರುವಿಯಲೇ
ಹೊನ್ನಂಚಿನ ಬೂದುಬಣ್ಣದ ಸೀರೆಯನ್ನುಟ್ಟ ಮುಂಜಾವೇ

30 July, 2014

ಹೊನ್ನ ಚೆಲುವೆ! (ಫೋಟೊಗ್ರಾಫಿ)

           

                                                                Yellow Grass Butterfly

ಸುಪ್ರಭಾತ!


ಸುಪ್ರಭಾತ
________________

ಕೊಳಲ ನಾದದ ಝುಳು ಝುಳು…
ಗುಡಿಯ ಗಂಟೆಯ ಢಣ ಢಣ
ತೊಟ್ಟಿಲಲ್ಲಿ ಕಂದನ ಮುಸು ಮುಸು...
ಸುಶ್ರಾವ್ಯವಾಗಿ ಸುಪ್ರಭಾತ ಗುನುಗುತ್ತಾ
ಬಿಳಿ ಚುಕ್ಕಿಯನ್ನಿಕ್ಕುತ್ತಿರುವ ನೀರೆ..
ಅವಳ ಸೆರಗು ಹಿಡಿದು ಹೊಸಿಲು ದಾಟಿ
ಮೊದಲ ಬಿಸಿ ಬಿಸಿ ಬೆಣ್ಣೆದೋಸೆ 
ತಿನ್ನುವ ಕಾತುರದಲ್ಲಿರುವ ಮುಂಜಾವು ಬಾಲೆ! 

ಮುಂಜಾವು ನಗು ಮತ್ತು ಜಂಬ!



 ಮಂಜಿನ ಹನಿಗಳಲ್ಲಿ ಮುಂಜಾವಿನ ನಗೆ ಮೊಗದ ಬಿಂಬ


ಕತ್ತಲು ಅಳಿಸಿ ಜಗಕೆ ಹೊಸ ಬೆಳಗಿನ ಸುಖವಿತ್ತ ಜಂಬ!

29 July, 2014

ಭಕ್ತಿ-ನಂಬುಗೆ!


ಭಕ್ತಿ-ನಂಬುಗೆ!
------------

ವರ್ತಮಾನ ಪತ್ರಿಕೆಯಲ್ಲಿ ಸುಬ್ರಮಣ್ಯದ ಮಡೆಸ್ನಾನದ ಬಗ್ಗೆ ಅಮ್ಮ ಓದುತ್ತಿದ್ದರು..

ಅಲ್ಲಿಗೆ ಬಂದ ನನ್ನ ಕಂಡು ತಲೆ ಎತ್ತಿ ಒಂದು ಮುಗುಳುನಗೆ ಚೆಲ್ಲಿದರು.

“ಯಾಕೆ ನಗ್ತಿ ಅಮ್ಮ?”

“ಅಲ್ವೆ, ನೀವು ಆಧುನಿಕ ಮನದವರು. ಇದೆಲ್ಲ ನೋಡಿ ನೀವು ಏನೆಲ್ಲ ಚರ್ಚೆಮಾಡ್ತಿರ್ಬಹುದೆಂದು ನೆನೆದು ನಗುಬಂತು!”

“ಹೌದಲ್ವಾ ಅಮ್ಮ, ಎಂಜೆಲೆಗಳ ಮೇಲೆ ಉರುಳುವುದು.. ಅಂದರೆ!”

“ನೆನಪಿದೆಯಾ ಶೀಲಾ ನಿಂಗೆ, ಯುಧಿಷ್ಟಿರನ ರಾಜಸೂಯ ಯಾಗದ ಕತೆ, ಅದೇ ಶುಕ, ಮುಂಗೂಸಿ..!”

ತಟ್ಟನೆ ನೆನಪಿಗೆ ಬಂತು.

ಪಾಂಡುವಿನ ನರಕಯಾತನೆಯ ವೀಕ್ಷಣೆಯನ್ನು ತಪ್ಪಿಸಲು ರಾಜಸೂಯ ಯಜ್ಞಮಾಡಿದನು ಧರ್ಮರಾಯ. ಕೃಷ್ಣ, ಸ್ವತಃ ಬ್ರಹ್ಮಾಂಡದ ಒಡೆಯನಾಗಿದ್ದರೂ ತಾನು ಉಚ್ಛಿಷ್ಠವನ್ನು ತೆಗೆಯುವ ಕಾರ್ಯವನ್ನು ನಿರ್ವಹಿಸಿದ್ದನು. ತೊಂಡರಿಗೆ ತೊಂಡನಾಗುವ ಅವನಿಗೆ ದೊಡ್ಡಸ್ತಿಕೆ ಯಾಕಿಲ್ಲ!!!

ಬ್ರಾಹ್ಮಣರ ಸಂಖ್ಯೆ ಕೋಟಿ ದಾಟಿದಾಗ ಸ್ವರ್ಗದ ಗಂಟೆ ಒಂದು ಸಾರೆ ಢಣ್ ಎಂದು ಬಾರಿಸಿತು... ಧರ್ಮನು ಸಂತುಷ್ಟನಾದನು! ಸ್ವಲ್ಪ ಸಮಯದಲ್ಲೇ ಮತ್ತೊಮ್ಮೆ ಢಣ್.. ಮೇಲೆ ಮೇಲೆ ಗಂಟೆ ಬಾರಿಸುತ್ತಿದೆ. ಅರೇ, ಏನಿದು ವಿಚಿತ್ರ! ಉಚ್ಛಿಷ್ಠ ಪತ್ರಾವಳಿಗಳನ್ನು ಬಿಸುಟ ಎಲೆಗಳ ಗುಡ್ದದಲ್ಲಿದ್ದ ಅಗುಳುಗಳನ್ನು ಮುಕ್ಕುತ್ತಿದ್ದ ಗಿಳಿಯನ್ನು ಕಂಡರು.

ಕೇಶವನಿಗೆ ಶುಕಮುನಿಯ ಗುರುತು ಹತ್ತಿ ಪರಿಚಯಿಸಿದನು. ಕಪಿಲ ಮಿನಿ, ಯಾಜ್ಞವಲ್ಕ, ದತ್ತಾತ್ರೇಯ ಮತ್ತು ಶುಕ ಮುನಿ ಇವರೆಲ್ಲರೂ ಮುನಿಶ್ರೇಷ್ಟರೆಂದು ಮಾಧವನು ಧರ್ಮನಿಗೆ ತಿಳಿಸಿದನು!

ಹೌದಮ್ಮಾ! ನನಗೀಗ ಅರ್ಥವಾಯಿತು. ಸ್ವತಃ ತಪೋವರೇಣ್ಯರಾದ ಶುಕ ಮುನಿಗಳಿಗೆ ಆ ಅಹಂ ಇರಲಿಲ್ಲ. ಅವರಲ್ಲಿದ್ದದ್ದು ಬರೇ ಭಕ್ತಿಭಾವ, ನಂಬುಗೆ.. ಅವೆರಡು ಇದ್ದರೆ ಸಾಕು, ಹರಿಯು ಪ್ರಾಪ್ತಿಯಾಗುವನು!!! ಜನುಮಗಳ ಬವಣೆ ನೀಗುವುದು!

ಭಲೆ ಭಲೆ.. ಜೇಡ, ನೀ ಕಟ್ಟಿದ ಬಲೆ! (ಫೋಟೊಗ್ರಾಫಿ)





28 July, 2014

ಇರುಳೆಂದರೆ ಈಗ...

ಇರುಳೆಂದರೆ ಈಗ-

ಒಲವು ಹಾಡುವ ಸವಿ ಜೋಗುಳ...

ಕಣ್ಣೆವೆಗಳು ಅಪ್ಪುತ, ಗೆಜ್ಜೆ ಕಟ್ಟುತ,


ಕನಸಿನ ಲೋಕದ ಅಂಗಣದಲಿ ಬಣ್ಣಗಳನು ಎರಚುತ,

 ಕೋಲಾಟವಾಡುವ ಸುಸಮಯ!

ಪತಂಗ ಲೋಕ... (ಫೋಟೊಗ್ರಾಫಿ)





ಸಂಕಟವಾಗ್ತಿದೆ!




ಸಂಕಟವಾಗ್ತಿದೆ.. !
-------------

ಇನ್ನು ಮುಂದೆ ಟೀಚರ್ ಹತ್ರ ಕಂಪ್ಲೈಂಟ್ ಮಾಡಿದ್ರೆ ರೇಪ್ ಮಾಡಿ ಬಿಡ್ತೇನೆ.”

ಒಂಬತ್ತನೆಯ ತರಗತಿಯ ಹುಡುಗ ತನ್ನದೇ ತರಗತಿಯ ಹುಡುಗಿಗೆ ತನ್ನ ವಿರುದ್ಧ ದೂರು ಕೊಟ್ಟದಕ್ಕೆ ಕೊಟ್ಟ ಎಚ್ಚರಿಕೆ.

ನಾಲ್ಕು ತಿಂಗಳ ಹಿಂದೆ ಕೆಲ ಹುಡುಗಿಯರು ನನ್ನ ಬಳಿ ಹೇಳಿ ಹಂಚಿಕೊಂಡಿದ್ದರು. ತುಂಬ ಸಂಕಟ ಪಟ್ಟಿದ್ದೆ. ನಮ್ಮ ಸಮಾಜ ತೀವ್ರ ವೇಗದಲ್ಲಿ ಬದಲಾಗುತ್ತಿದೆ. ಹೆಣ್ಣಿಗೆ ಸಮಾನ ಸೌಲಭ್ಯ ಕೊಡುತ್ತಲೇ ತನ್ನ ಸರಿಸಮಾನಳಾಗದ ಹಾಗೆ ಅವಳ ದೌರ್ಬಲ್ಯವನ್ನೇ ತನ್ನ ಗುರಾಣಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಪುರುಷರು!

“ಹೆಚ್ಚು ಮಾತನಾಡಿದರೆ ಹಲ್ಲುದುರಿಸಿಬಿಡ್ತೇನೆ, ಮುಖದ ಶೇಪೇ ಬದಲಾಯಿಸ್ತೇನೆ.. !”

ರೋಪ್ ಹಾಕುತ್ತಿದ್ರು.. ಆದ್ರೆ ಈಗ ದೇಶದ ಎಲ್ಲೆಡೆ ನಡೆಯುವ ಅತ್ಯಾಚಾರಗಳಿಂದ ಪ್ರೇರಿತರಾಗಿ ದಮ್ಕಿ ಕೊಡುವ ಹೊಸ ಮಾರ್ಗ!

ಹೆಣ್ಣಿಗೆ ಬುದ್ಧಿ ಕಲಿಸಲು, ಮತ್ತೆ ಎಂದೂ ಏಳದಂತೆ ಪಾತಾಳಕ್ಕೆ ತಳ್ಳಲು ಅತೀ ಸುಲಭ ಮಾರ್ಗ ಅತ್ಯಾಚಾರ.

ದುರ್ಯೋಧನನು ತನ್ನನ್ನು ಪರಿಹಾಸ್ಯ ಮಾಡಿದ ದ್ರೌಪದಿಗೆ ಬುದ್ಧಿ ಕಲಿಸಲು ಆರಿಸಿದ ಮಾರ್ಗ ಇಂದಿಗೂ ಪ್ರಚಲಿತ.

ಹೆಣ್ಣೊಬ್ಬಳು ತನಗೆ ಹಿಡಿಸದ ಬರಹ ಅಥವಾ ತನಗೆ ವಿರುದ್ಧವಾಗಿ ದನಿಯೆತ್ತಿದರೆ ಮತ್ತೆ ಅದೇ ಅಸ್ತ್ರ!

ತತ್ವಶಾಸ್ತ್ರಗಳನ್ನು ಅರೆದು ಓದಿ ಅನೇಕ ಪುಸ್ತಕಗಳನ್ನು ಬರೆದವರೂ ಕೋಪದ ತಾಪಕ್ಕೆ ಬಲಿಯಾಗಿ ಕೇವಲವಾಗಿ ಮಾತನಾಡುವಷ್ಟು ಇಳಿದುಬಿಟ್ಟರಲ್ಲವೇ!!!



ತೀವ್ರಕಾಮಿಗಳಿಂದ ನಡೆಯುತ್ತಿರುವ ಅತ್ಯಾಚಾರಗಳ ಜತೆ ಪುರುಷ ಅಹಂನ್ನು ವಿರೋಧಿಸಿದರೆ ಎಚ್ಚರ ಸ್ತ್ರೀಯರೇ! ನಮ್ಮ ಬರಹ, ಕಮೆಂಟುಗಳ ಬಗ್ಗೆ ನಾವಿನ್ನು ತುಂಬಾ ಎಚ್ಚರದಲ್ಲಿರಬೇಕಾಗುತ್ತದೆ. ಇಲ್ಲ ಅವಮಾನಗಳನ್ನು ಎದುರಿಸಿ ನಿಲ್ಲುವಂತಹ ವಿಶೇಷ ಶಕ್ತಿ ಪಡೆಯಬೇಕಾಗುತ್ತೆ. 

25 July, 2014

ನೆನಪುಗಳು ಕಾಡುತಿವೆ..

ನಿನ್ನೆಯ ಸವಿ ನೆನಪುಗಳು ನಾಳಿನ ಉಸಿರಿಗಾಸರೆ!

ಮಂಗಳೂರು ಮುಂಜಾವು.. :-)

ಮುಂಗಾರು ಮಂಜು, ಜಗದ ನಂಜಿಗೆ ಮದ್ದು!

23 July, 2014

ಅಪೂರ್ಣ ಕುಂದುಕೊರತೆಗಳ ಪ್ರಕೃತಿಯವಳು ನಾನು.. ಪರಿಪೂರ್ಣ ಒಲವು!

ಮಣ್ಣಿನ ಹಂಟೆಗಳಲೊಂದು ಹೊಳೆಯುವ ಹೊನ್ನಾಯಿತು
ಮನುಜರ ಜನಾಂಗಕೆ ಕಾರಣವಾಯಿತು ಇನ್ನೊಂದು..
ಒಲವೇ,
ನಿನ್ನ ಉದಾತ್ತ ದೇಣಿಗೆ
ಜಗದ ಮೂಲ ತತ್ವಕೆ ನಾಂದಿಯಾಯಿತು..
ಮರೆವು ಮತ್ತು ತಪ್ಪುಗಳೋ ನನ್ನ ದೇಣಿಗೆ
ಬದಲಾಗಲಿ ಅವು ಆಗಿ ತಿಳಿವಳಿಕೆ..
ಅಪೂರ್ಣ, ಕುಂದುಕೊರತೆಗಳ ಪ್ರಕೃತಿಯ ನಾನು
ತಾಳಿಕೆ ಮತ್ತು ಸಹಿಷ್ಣುತೆ ಪಡೆಯಲಿ!

#ರೂಮಿ (ಭಾವಾನುವಾದ) 

ಪುಟ್ಟ ಪುಟ್ಟ ಹೆಜ್ಜೆ.. (ಫೋಟೊಗ್ರಾಫಿ)


ಕಿತ್ತಳೆ ಪೆಪ್ಪರ್ ಮಿಂಟ್! (ಫೋಟೊಗ್ರಫಿ)


ಡ್ರ್ಯಾಗನ್ ಫ್ಲೈ.. (ಫೋಟೊಗ್ರಾಫಿ)


ಈ ಸಮಯ ಶೃಂಗಾರದ ಸಮಯ, ನೂತನ ಬಾಳಿನ ಶುಭೋದಯ.. (ಫೋಟೊಗ್ರಾಫಿ)


22 July, 2014

ಕಬೀರ.. (ಭಾವಾನುವಾದ)

ಪ್ರಾಯ ಏರುತಿದರೇನು ಪ್ರಯೋಜನ, ಖರ್ಜೂರ ಮರದಂತೆ ಅನಿಸುವುದಲ್ಲ
ನಾಡಾಡಿಗೆ ನೆರಳೂ ನೀಡಲ್ಲ, ಕೈಗೆಟುಕದೆತ್ತರದಲಿ ಫಲ ನೇತಾಡುವುದಲ್ಲ!
-ಕಬೀರ (ಭಾವಾನುವಾದ)

ನಾಡಾಡಿ-ಯಾತ್ರಿಕ
. Buda hua to kya hua, jaise ped khajoor
Panti ko chaya nahin, phal laage atidoor!

ಅನುಭವಕ್ಕೆ ದಕ್ಕುವುದು..

ಎಷ್ಟೋ ಸಂಗತಿಗಳು ಕಣ್ಣಿಗೆ ಕಾಣಿಸುವುದಿಲ್ಲ. ಅನುಭವಕ್ಕೆ ಮಾತ್ರ ದಕ್ಕುತ್ತದೆ.
ಉದಾಹರಣೆ:-ಗಾಳಿ, ಸೃಷ್ಟಿಕರ್ತ ಮತ್ತು ಒಲವು

-ಎಲ್ಲಿಯೋ ಓದಿದ್ದು

21 July, 2014

ತೆರೆದುಕೊಳ್ಳು ಒಲವೇ...

ತೆರೆದುಕೊಳ್ಳು ಒಲವೇ,

ನಾನೂ ಅರಿವೆ ಬಯಲಾಗಲು..

ಪ್ರೇರಣೆಯಾಗು ಒಲವೇ,

ನನ್ನಲ್ಲಿ ಚೈತನ್ಯ ಹೊಮ್ಮಲು..

ಆತ್ಮಗಳ ಸಂದೇಶ.

||Don’t go on the wrong path for just a few years of temporary happiness on earth, for this will make you go through hundreds of years of suffering in the lower realms of the spirit world||


-The laws of the spirit world by Khorshed Bhavngri.

ಆತ್ಮಗಳ ಸಂದೇಶ..

|| True freedom means you are free to do the right thing||

-The laws of the spirit world by Khorshed Bhavngri.

20 July, 2014

ಕಬೀರ... (ಭಾವಾನುವಾದ)

ಚಿಂತೆ ಎಂಬ ಪಿಶಾಚಿ ಕಿತ್ತು ತಿನ್ನಲು ಜೀವವನು
ಅರೆದರೆದು ಮದ್ದನು ವೈದ್ಯನು ಹೈರಾಣಾದನು!

ಕಬೀರ (ಭಾವಾನುವಾದ) 

Chinta aisee dakini, kat kaleja khaye

Vaid bichara kya kare, kahan tak dawa lagaye

ಶ್ರೀಮದ್ಭಗವದ್ಗೀತಾ!

ಶ್ರೇಯೋ ಹಿ ಜ್ಞಾನಮಭ್ಯಾಸಾಜ್‌ಜ್ಞಾನಾದ್‌ಧ್ಯಾನಂ ವಿಶಿಷ್ಯತೆ|
ಧ್ಯಾನಾತ್‌ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್||

ಅರಿವಿಲ್ಲದ ಅಭ್ಯಾಸಕ್ಕಿಂತ ಅರಿವು ಮಿಗಿಲು. ಬರಿದೆ ಅರಿವಿಗಿಂತ ಅರಿತು ಧ್ಯಾನಿಸುವುದು ಮಿಗಿಲು. ಬರಿದೆ ಧ್ಯಾನಕ್ಕಿಂತ ಕರ್ಮಫಲದ ನಂಟಿರದ ಧ್ಯಾನ ಮಿಗಿಲು. ಅಂತಹ ಧ್ಯಾನದ ಮುಂದಿನ ಮಜಲೇ ಮುಕ್ತಿ.

-ಶ್ರೀಮದ್ಭಗವದ್ಗೀತಾ ಹನ್ನೆರಡನೆಯ ಅಧ್ಯಾಯ

19 July, 2014

ಶ್ರೀಮದ್ಭಗವದ್ಗೀತಾ

ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ|
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋSಭಿಜಾಯತೇ||
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ|
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಭುದ್ಧಿನಾಶಾದ್ ವಿನಶ್ಯತಿ||
ವಿಷಯಗಳನ್ನೇ ನೆನೆಯುತ್ತಿರುವ ಮನುಷ್ಯರಿಗೆ ಅವುಗಳ ನಂಟು ಬೆಳೆಯುತ್ತದೆ. ನಂಟಿನಿಂದ ಆಸೆ ಕುದುರುತ್ತದೆ. ಆಸೆಗೆ ಅಡ್ಡಿಯಾದಾಗ ರೊಚ್ಚು ಮೂಡುತ್ತದೆ.
ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂತಹ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು, ಮರೆವಿನಿಂದ ತಿಳಿಗೇಡಿತನ. ತಿಳಿಗೇಡಿತನದಿಂದ ಸರ್ವನಾಶ!


-ಭಗವದ್ಗೀತೆ ಎರಡನೆಯ ಅಧ್ಯಾಯ

18 July, 2014

ಗಂಗಸರದ ಪ್ರಭಾವ,, (ಫೋಟೊಗ್ರಾಫಿ)


The result of intoxication of photography!


ಕಬೀರ.. (ಭಾವಾನುವಾದ)


ಹೇಳಲಾಗದ ಮಹಾಕಾವ್ಯ ಒಲವು, ಸುಮ್ಮನಿರುವುದೆ ಒಳಿತು
ಹೋಳಿಗೆ ಮೆದ್ದ ಮೂಕ ಸುಮ್ಮನೆ ಹಲ್ಲು ಕಿಸಿದನಂತೆ ಅರಿತು!

-ಕಬೀರ (ಭಾವಾನುವಾದ)

Akath kahani prem ki, kuch kahi na jaye
Goonge keri sarkara, baithe muskae!

15 July, 2014

ನೊಣಗಳು .. ನೊಣಗಳು! (ಫೋಟೊಗ್ರಾಫಿ)






ಕಬೀರ.. (ಭಾವಾನುವಾದ)



ರಭಸದಿ ತಿರುಗುತಿದೆ ಬೀಸುಗಲ್ಲು, ಕಬೀರನ ಕಣ್ಣಲ್ಲಿ ನೀರು

ಅಯ್ಯೋ, ದ್ವಂದ್ವ ಚಕ್ರಗಳೆಡೆಯಲಿ ಬದುಕು ನುಚ್ಚುನೂರು!


Chalti chakki dekh, diya Kabir roye

Dui paatan ke beech mein, sabit bacha na koye

ಕಬೀರ..

ಕಾಳಿನೊಳಗೆ ಎಣ್ಣೆ, ಕಲ್ಲಿನೊಳಗೆ ಬೆಂಕಿ ಕಂಡವನು

ನಿನ್ನೊಳಗಿರುವ ಅವನನೂ ಕಾಣಬಲ್ಲೆ ಏನು!


-ಕಬೀರ್ (ಭಾವಾನುವಾದ)

ಕಬೀರ...



ತಾಳ್ಮೆ ಇರಲಿ ಮನವೇ, ಕಾಲ ನಿರ್ಣಯದಂತೆ ಜರುಗಲಿ ಎಲ್ಲವು



ಕೊಡಗಟ್ಟಲೆ ನೀರು ಹೊಯ್ದರೂ ವಸಂತನಾಗಮನವಾಗದೇ ದೊರೆಯುವುದೇ ಮಾವು!


Dheere dheere re mana, dheere sab kuch hoye
Mali seenche so ghara, ritu aaye phal hoye

14 July, 2014

ಗುಲ್ಜಾರ್ ಸಾಬ್.. (ಭಾವಾನುವಾದ)

ಹಾರುವ ಕನಸುಗಳು…

ಬದುಕು ಕಟ್ಟಲು ಸಾಧ್ಯವೇ!!!


-ಗುಲ್ಜಾರ್ (ಭಾವಾನುವಾದ)

ಗುಲ್ಜಾರ್ ಸಾಬ್.. (ಭಾವಾನುವಾದ)

ಚಂಚಲ ಜಲ..

ರಚಿಸಿದೆ ಚಿತ್ತಾರ

ಅಲ್ಪ ಆಯುಷ್ಯ!

-       ಗುಲ್ಜಾರ್ (ಭಾವಾನುವಾದ)

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...