ಅರಿತೆ ನಾ ಒಲವಿನ ಕೊಳವಿದು!
_______________________
ಸ್ಫಟಿಕದಂತೆ ಹೊಳೆಯುತ್ತಿತ್ತಲ್ಲ
ಆ ಕೊಳ!
ರಂಗು ರಂಗಿನ ಜಲಚರಗಳು
ಅಲೆಗಳ ಮಧುರ
ನಾದಕ್ಕೆ ತಲೆದೂಗುತ್ತಾ
ಕಿಲ ಕಿಲ ನಗುತ್ತಾ
ಅದೇನೋ ಪಿಸುಗಟ್ಟುತ್ತ
ಮುಗುಳ್ನಗುತ್ತ ನನ್ನತ್ತ
ಕೈ ಬೀಸಿದವು
ಈಜಲೇ ಬರದ
ನಾ ಮೋಡಿಗೊಳಗಾಗಿ
ಕಣ್ಮುಚ್ಚಿ ಧುಮುಕಿಯೇ
ಬಿಟ್ಟೆ ತೇಲುತ್ತಲೇ
ಅರಿತೆ ಇದುವೇ
ಒಲವಿನ ಕೊಳ!
No comments:
Post a Comment