|| ನೀ ಗುಡಿಯಲ್ಲ, ಅರಮನೆ ||
|| ನೀ ಕತ್ತಲೆಯಲ್ಲ, ಅಮವಾಸ್ಯೆ ||
|| ನಾ ಗಾಯಕಿಯಲ್ಲ, ಕೋಗಿಲೆ ||
|| ನೀ ಮಲ್ಲಿಗೆಯಲ್ಲ, ಸುಗಂಧ ||
|| ನೀ ಅಪ್ಪಯ್ಯನಲ್ಲ, ನೀಲಕಂಠ ||
|| ನೀ ಪ್ರೇಮವಲ್ಲ, ಪರಮಾತ್ಮ ||
|| ನೀ ಒಲವಲ್ಲ, ಅಮೃತ ||
|| ನೀ ಪುಟ್ಟ ಹಣತೆಯಲ್ಲ, ಸೂರ್ಯ ||
|| ನೀ ಚಿಪ್ಪಲ್ಲ, ಸಾಗರ ||
|| ನೀ ಭಾವವಲ್ಲ, ಕಾವ್ಯ ||
|| ನೀ ಸ್ತ್ರೀಯಲ್ಲ, ಸೃಷ್ಟಿ ||
|| ನೀ ನಲ್ಲೆಯಲ್ಲ, ಬೆಳದಿಂಗಳು ||
|| ನೀ ವೈಣಿಕನಲ್ಲ, ವೀಣೆ ||
|| ನೀ ಆಕಾಶ ದೀಪವಲ್ಲ, ಚಂದಿರ ||
|| ನೀ ಪಾತರಗಿತ್ತಿಯಲ್ಲ, ರಂಭೆ ||
|| ನೀ ರತ್ನವಲ್ಲ, ನಕ್ಷತ್ರ ||
|| ನೀ ಕೊಳವಲ್ಲ, ಮಾನಸ ಸರೋವರ ||
|| ನೀ ಕಂದನಲ್ಲ, ಮುತ್ತು ಮಾಣಿಕ್ಯ||
|| ನಿ ಹೂವಲ್ಲ, ಪಾರಿಜಾತ ||
|| ನೀ ಒಲವಲ್ಲ,
ಬದುಕು ||
|| ನೀ ಸಖನಲ್ಲ,
ಒಲವು ||
|| ನೀ ಸಖಿಯಲ್ಲ,
ಒಲವು ||
|| ನೀ ಒಲವಲ್ಲ, ಭಗವಂತ
||
No comments:
Post a Comment