ಬಣ್ಣದ ಓಕುಳಿ ಚೆಲ್ಲಿ
ಮುಗುಳ್ನಗುತ್ತಲೇ ತೆರೆಮರೆಗೆ
ಸರಿಯುತ್ತಿರುವ ರವಿಯ
ಬೀಳ್ಕೊಟ್ಟ
ಹೊಸ ವರುಷದ
ಮೊದಲ ಮುಸ್ಸಂಜೆ!
-01-01-2013
************
ಶಿರದಿ ನವಿಲ ಗರಿಯ ಧರಿಸಿ
"ಗಿಲ್" "ಗಿಲ್" ಗೆಜ್ಜೆ ನಿನಾದದೊಂದಿಗೆ
ಮುರಳಿಯ ಗಾನವನ್ನು ಮೇಳೈಸುತ್ತಾ
ಗೋಧೂಳಿಯ ನಡುವೆ ತನ್ನ ಗೆಳೆಯ
ಗೋವಳರೊಡಗೂಡಿ ಬರುತ್ತಿರುವ
ಗೋಪಾಲನಿಗಾಗಿ ಹೊಸ್ತಿಲ ಬಳಿ
ಕಾದ ಯಶೋಧೆಯು ನಾನಾದಂತೆ
ಕನಸ ತಂದ ಮುಸ್ಸಂಜೆಯಿದು!
-03-01-2013
******************
ನನ್ನೆಲ್ಲ ಮನದ ಮಾತುಗಳ ಆಲಿಸಲೆಂದೇ
ನೀಲಾಗಸದಲ್ಲಿ ಹರಡಿರುವ ಬೆಳ್ಳಿಚುಕ್ಕಿಗಳ
ತೋರುವ ಮುಸ್ಸಂಜೆಗೆ ಸುಸ್ವಾಗತ!
- 04-01-2013
****************************
ಹೊಸ್ತಿಲ ಬಳಿ ನಿಂತು
ನಲ್ಲನ ನೆನಪುಗಳಲ್ಲಿ
ಕಳೆದು ಹೋದವಳಿಗೆ
ಸೊಳ್ಳೆ ಕಚ್ಚಿದಾಗ
ದುರ್ವಾಸ ಮುನಿಗಳ
ನೆನಪು ತಂದ
ಈ ಮುಸ್ಸಂಜೆ!
ಶಕುಂತಲೆ ದುಶ್ಯಂತನ ನೆನಪಿನಲ್ಲಿ ಕಳೆದುಹೋದದುರಿಂದ ತಾನೆ ದುರ್ವಾಸರ ಶಾಪ ಪಡೆದಳು! ಇಲ್ಲಿ ಈ ನಲ್ಲೆ ಶಾಪದ ರೂಪದಲ್ಲಿ ಮಲೇರಿಯಾ ಪಡೆಯುವಳೇನೋ..:-)
೦೮-೦೧-೨೦೧೩
****************************
ಹೊಸ್ತಿಲ ಬಳಿ ನಿಂತು
ನಲ್ಲನ ನೆನಪುಗಳಲ್ಲಿ
ಕಳೆದು ಹೋದವಳಿಗೆ
ಸೊಳ್ಳೆ ಕಚ್ಚಿದಾಗ
ದುರ್ವಾಸ ಮುನಿಗಳ
ನೆನಪು ತಂದ
ಈ ಮುಸ್ಸಂಜೆ!
ಶಕುಂತಲೆ ದುಶ್ಯಂತನ ನೆನಪಿನಲ್ಲಿ ಕಳೆದುಹೋದದುರಿಂದ ತಾನೆ ದುರ್ವಾಸರ ಶಾಪ ಪಡೆದಳು! ಇಲ್ಲಿ ಈ ನಲ್ಲೆ ಶಾಪದ ರೂಪದಲ್ಲಿ ಮಲೇರಿಯಾ ಪಡೆಯುವಳೇನೋ..:-)
೦೮-೦೧-೨೦೧೩
No comments:
Post a Comment