ಒಲವೇ,
ನಿನ್ನರಮನೆ ಹೊಳೆಯ ಆ ದಡದಲಿ
ನನ್ನ ಪುಟ್ಟ ಗುಡಿ ಈ ದಡದಲಿ!
ಓಲೆಯನೇ ದೋಣಿಯಾಗಿಸಿ ನಿನ್ನತ್ತ ತೇಲಿಬಿಡುವೆನು
ಮರುಸಂದೇಶದ ದಾರಿ ನಿತ್ಯ ಕಾಯುವೆನು!
ಅದರವಿಲ್ಲದೆ ಉಕ್ಕುವ ಹೊಳೆ ಮುಳುಗಿಸುವುದು
ನನ್ನ ಸಂದೇಶವು ತಳ ಸೇರುವುದು!
ತಂಗಾಳಿಯಲೇ ತೇಲಿಬಿಡುವೆನು ನನ್ನ ನಿಟ್ಟುಸಿರು
ಕಿವಿಯ ಸ್ಪರ್ಶಿಸುವುದೇ ಹೇಳೆನ್ನ ಬಿಸಿಯುಸಿರು!
No comments:
Post a Comment