ವಾಗರ್ಥಾವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ|
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ||
-ಕಾಳಿದಾಸ ವಿರಚಿತ ’ರಘುವಂಶ’ದ ಮೊದಲ ಶ್ಲೋಕ..
ಮಾತು ಮತ್ತು ಅರ್ಥದಂತೆ ಬೆರೆತಿರುವ
ಜಗತ್ತಿನ ತಂದೆತಾಯಿಯಂದಿರಾದ ಪಾರ್ವತಿ ಮತ್ತು
ಪರಮೇಶ್ವರರಿಗೆ ನಮಸ್ಕಾರ||
ನನ್ನನ್ನು ಬಲು ಕಾಡಿದ, ಎಲ್ಲಾ ಪತಿ-ಪತ್ನಿಯರಿಗೆ
ಮಾದರಿಯಾಗಿರುವ ಈ ಶ್ಲೋಕ ಮೊತ್ತ ಮೊದಲು ಎಂಟನೆಯ ತರಗತಿಯ ಮೊದಲ ಪಾಠದಲ್ಲಿ ಬಂದ ದಿನದಿಂದಾಗಿನಿಂದ
ಇವತ್ತಿನವರೆಗೂ ನನ್ನೊಳಗೇ ಉಳಿದಿದೆ!
ಬಹಳ ದಿನದ ಕನಸು ಈ ಶಿವ-ಶಕ್ತಿ.. ಕೊನೆಗೂ ನನಸಾಗಿದೆ!
(ಕೇರಳ ಶೈಲಿಯ ಮ್ಯೂರಲ್ ಕಲೆ)
No comments:
Post a Comment