ಒಲವೇ, ನನ್ನೊಲವೇ,
ಮರಳಿನ್ನು ಎಂದು ಹೇಳದಿರು
ನನ್ನ ಮರಳಿನ್ನು
ಎಂದು ಹೇಳದಿರು
ನನ್ನ ಚೇತನವೇ,
ನನ್ನ ಒಲವೇ..
ಹೋಗು ಎನ್ನದಿರು
ಎನ್ನನ್ನು ಅಜ್ಞಾತೆಯಲ್ಲ
ಚೇತನ
ನಿನ್ನೊಳಗಿರಲು ಸದಾ
ಅರಿವಿಲ್ಲ, ಏನ
ಅರಿತೆನೆಂದು
ಅರಿವನ್ನೂ ಅರಿತರೂ
ಏನುಪಯೋಗವೋ
ನನ್ನೊಲವೇ,
ಮರಳಿನ್ನು ಎಂದು
ಹೇಳದಿರು ನನ್ನೊಲವೇ,
ನನ್ನ ಚೇತನವೇ,
ನನ್ನ ಪ್ರಾಣವೇ..
ಶುಷ್ಕವರ್ಷ ಋತು
ಸುರಿಸಿತ್ತಾಗ
ಲೆಕ್ಕವಿಲ್ಲದಷ್ಟು
ಸಲ ನನ್ನೀ ಚಕ್ಷುಗಳಿಂದ
ಹನಿಗಳೆರಡು ಉದುರಲು
ಕೇಳೊಲ್ಲವೀಗ
ಮುಚ್ಚಿದೀ ಆರ್ದ್ರ
ಕಣ್ಣೆವೆಗಳಿಂದ
ನನ್ನೊಲವೇ,
ಮರಳಿನ್ನು ಎಂದು
ಹೇಳದಿರು ನನ್ನೊಲವೇ,
ನನ್ನ ಚೇತನವೇ,
ನನ್ನ ಪ್ರಾಣವೇ..
ತುಟಿಯ ಮೇಲೆ
ತುಟಿಯನೊತ್ತಿ
ಉಸಿರೊಳಗೆ ಉಸಿರು
ಸಿಲುಕಿಸಿ
ಅಗಲಿಸಲಾಗದ ಜೋಡಿ ತುಟಿಗಳ
ಮಾತು
ಹೇಳಂತೆ ನಿನ್ನೀ
ಚಕ್ಷುಗಳಿಂದ
ನನ್ನೊಲವೇ,
ಮರಳಿನ್ನು ಎಂದು
ಹೇಳದಿರು ನನ್ನೊಲವೇ,
ನನ್ನ ಚೇತನವೇ,
ನನ್ನೊಲವೇ
No comments:
Post a Comment