ಒಲವೇ,
ಘಳಿಗೆಗೊಂದು ನಿಲುವು, ಘಳಿಗೆಗೊಂದು ತಿರುವು..
ಮಾಯಾಲೋಕದಲ್ಲಿ ಬದಲಾವಣೆ ನಿರ್ವಿಘ್ನ, ನಿರಾತಂಕ
ಈಗೊಂದು ಮುಖ..
ನೋಡನೋಡುದಿಂದಂತೆ ಮತ್ತೊಂದು ಮಗದೊಂದು..
"ಯಾರಿದು?" ಪ್ರಶ್ನೆಗಳು ಬರೇ ಪ್ರಶ್ನೆಗಳು...
ಕಾಡಿ ಹಿಂಡಿ ಸೋತೆ..
ನಡೆ ನಮ್ಮ ಲೋಕವಿದೆ ಅಲ್ಲಿ, ಬರೇ ನಲಿವಲ್ಲಿ..
ನಮಗಿಬ್ಬರಿಗಾಗಿಯೇ ಕಟ್ಟಿದ ಶಾಶ್ವತ ಸ್ವರ್ಗದಲ್ಲಿ..
ಕಳಚಿಬಿಡು ನಿನ್ನೀ ಹೊಸ ಹಳೆಯ ಮುಖವಾಡಗಳ
ನೀನು ನೀನಾಗಿ ಬಾ..
ನಾ ನಾನಾಗಿ ಕಾದು ನಿಂತಿರುವೆ
ನೀ ನೀನಾಗಿ ಬದಲಾಗಲೆಂದು..
ಘಳಿಗೆಗೊಂದು ನಿಲುವು, ಘಳಿಗೆಗೊಂದು ತಿರುವು..
ಮಾಯಾಲೋಕದಲ್ಲಿ ಬದಲಾವಣೆ ನಿರ್ವಿಘ್ನ, ನಿರಾತಂಕ
ಈಗೊಂದು ಮುಖ..
ನೋಡನೋಡುದಿಂದಂತೆ ಮತ್ತೊಂದು ಮಗದೊಂದು..
"ಯಾರಿದು?" ಪ್ರಶ್ನೆಗಳು ಬರೇ ಪ್ರಶ್ನೆಗಳು...
ಕಾಡಿ ಹಿಂಡಿ ಸೋತೆ..
ನಡೆ ನಮ್ಮ ಲೋಕವಿದೆ ಅಲ್ಲಿ, ಬರೇ ನಲಿವಲ್ಲಿ..
ನಮಗಿಬ್ಬರಿಗಾಗಿಯೇ ಕಟ್ಟಿದ ಶಾಶ್ವತ ಸ್ವರ್ಗದಲ್ಲಿ..
ಕಳಚಿಬಿಡು ನಿನ್ನೀ ಹೊಸ ಹಳೆಯ ಮುಖವಾಡಗಳ
ನೀನು ನೀನಾಗಿ ಬಾ..
ನಾ ನಾನಾಗಿ ಕಾದು ನಿಂತಿರುವೆ
ನೀ ನೀನಾಗಿ ಬದಲಾಗಲೆಂದು..
No comments:
Post a Comment