ಹೇಳೇ
ಹುಚ್ಚು ಹುಡುಗಿ,ಇತ್ತಲ್ಲವೆ ನಿನಗೆ ಬಹಳ ಹಮ್ಮು
ನೀನಾವ
ಸೆಳೆತಕೆ ಸಿಲುಕಲೊಲ್ಲೆಯೆಂದು
ಹೃದಯ
ಮಂದಿರದ ಭದ್ರ ಕೋಟೆಯ ಕದಕ್ಕಿತ್ತ
ಒಲವಿನ ಚುಟುಕು ದನಿಗೆ
ತೆರೆದಿಯಲ್ಲವೆ ಅಗಣಿ, ಮತ್ತೆ ಬಾಗಿಲು ಅಗಲವಾಗಿ
ಕಟ್ಟಿದೆ ಒಲವಿನ ದೇಗುಲವನಲ್ಲಿ,
ನಿತ್ಯಶಂಖ ತಾಳ ಜಾಗಟೆಯ ಜತೆ ಪೂಜೆಯೀಗ ಅಲ್ಲಿ
ಮತ್ಯಾಕೆ ಈ ಪರಿತಾಪ, ಸುಮ್ಮನೆ ಒಪ್ಪಿಕೋ ಒಲವಿನ ಆಟ ಪಾಠಗಳನ್ನೀಗ.
No comments:
Post a Comment