ಬೆಳಕು
----------
ಮದ, ಮೋಹ, ಮಾತ್ಸರ್ಯ,
ಮನೋಭಿಲಾಷೆ, ಮಾನವೀಯತೆಯ ಉಲ್ಲಂಘನದ..
ಸುಂಟರಗಾಳಿಯ
ಹೂಂಕಾರಕೆ ಅಳುಕದಿರದಿಲಿ,
ಮನದ
ಗರ್ಭಗುಡಿಯ ಪುಟ್ಟ ಬೆಳಕು ಆರದಿರಲಿ;
ನಿಸ್ವಾರ್ಥ,
ನಿರಹಂಕಾರ, ನಿರ್ಮಲ, ನಿಸ್ಪೃಹ, ನಿರಪೇಕ್ಷತೆ..
ಹಣತೆಯ ಬತ್ತಿಯನು
ಬೆಳಗಿಸುವ ತೈಲವಾಗಲಿ,
ಬತ್ತದಿರಲೆಂದೂ, ನೀಡಲಿ
ಆತ್ಮವನು ಹೊತ್ತ ಕಾಯಕೆ ಕಾಂತಿ, ಶಾಂತಿ;
ಬೆಳಕಿನ ಹಬ್ಬದ
ಶುಭಾಶಯಗಳು!
||ಸರ್ವೇ ಜನಾಃ
ಸುಖಿನೋ ಭವಂತಿ||
1 comment:
ಹಿತಬಯಸೋ ಬಂಧುಬಾಂಧವರ ಆಸರೆಯ ಕೈಗಳು ನಮ್ಮ ಸುತ್ತಲಿದ್ದರೆ ಮನದ ಗುಡಿಯ ದೀಪ ಆರುವುದಿಲ್ಲ. ಶುಭಾಶಯಗಳು.
Post a Comment