ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

06 October, 2014

ದಾಸನಾಗು ವಿಶೇಷನಾಗು..

ದಾಸನಾಗು ವಿಶೇಷನಾಗು..




||ದಾಸನಾಗು ವಿಶೇಷನಾಗು||

ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ|
ತಾನಲ್ಲ ತನದಲ್ಲ ಆಸೆ ತರವಲ್ಲ ಮುಂದೆ ಬಾಹೋದಲ್ಲ ದಾಸನಾಗು ವಿಶೇಷನಾಗು||

ಆಶ ಕ್ಲೇಶ ದೋಷವೆಂಬ ಅಬ್ದಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು|
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ ಏಸು ದೇಶ ತಿರುಗಿದರೆ ಬಾಹೋದೇನು ಅಲ್ಲಿಗ್ ಹೋದೇನು |
ದೋಷನಾಶ ಕೃಷ್ಣಾವೇಣಿ ಗಂಗೆ ಗೋದಾವರಿ ಭವ ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ|
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ ಏಸುಬಾರಿ ಮಾಡಿದರು ಫಲವೇನು ಈ ಛಲವೇನು||

ಅಂದಿಗೊ ಇಂದಿಗೊ ಒಮ್ಮೆ ಸಿರಿ ಕಮಲೇಶನನ್ನು ಒಂದು ಬಾರಿಯಾರು ಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ|
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ದ್ವಂದ್ವ ಕಳೆಯಲಿಲ್ಲ|
ಸಂದೇಹ ಮಾಡದಿರು ಅರಿವು ಎಂಬ ದೀಪವಿಟ್ಟು ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ|
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ||

ಮೂರು ಬಾರಿ ಶರಣು ಮಾಡಿ ನೀರ ಮುಳುಗೊಲ್ಯಾಕೆ ಪರನಾರಿಯರ ನೋಟಕೆ ಗುರಿಯ ಮಾಡಿದಿ ಮನಸೆರೆಯ ಮಾಡಿದಿ|
ಸುರೆಯೊಳು ಸುರೆ ತುಂಬಿ ಮೇಲೆ ಹೂವಿನ ಹಾರ ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ|
ಗಾರುಡಿಯ ಮಾತ ಬಿಟ್ಟು ನಾದ ಬ್ರಹ್ಮನ ಪಿಡೀದು ಸಾರಿ ಸುರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ|
ನಾರಾಯಣ ಅಚ್ಯುತ ಅನಂತಾದಿ ಕೇಶವನ... ಆ... SSSS ಸಾರಾಮೃತವನ್ನು ಉಂಡು ಸುಖಿಸೊ ಲಂಡ ಜೀವವೇ ಎಲೊ ಭಂಡ ಜೀವವೇ||
ದಾಸನಾಗು ವಿಶೇಷನಾಗು....


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...