ಒಲವೇ,
ಈ ತಿರುವಿನಲೇ ಮುನ್ನಡೆಯೋಣವೇ,
ದಣಿದ
ನಿಧಾನದ ಹೆಜ್ಜೆಯ ಹಾದಿಗಳವು;
ಶೀಘ್ರ
ಸವೆಯುವ ಹೆಜ್ಜೆಯ ಬೀದಿಗಳವು;
ಈ ತಿರುವಿನಲೇ ಮುನ್ನಡೆಯೋಣ||
ಕಲ್ಲಿನ ಭವನದ
ಗಲ್ಲಿಗಳು,
ಗಾಜಿನ ಗೂಡುಗಳ
ಬೀದಿಗಳು,
ಹುಲ್ಲುಕಡ್ಡಿಯ
ಗುಡಿಗಳು,
ಈ ತಿರುವು ಹಾದಿ
ತೋರುತ್ತದೆ
ಈ ತಿರುವಿನಲೇ ಮುನ್ನಡೆಯೋಣವೇ||
ಬೀಸಿ ಹಾರಿ ಬಿರುಗಾಳಿಯಂತೆ
ಹಾಗೇ ಹಾದು ಹೋಗುತ್ತವೆ;
ಲಜ್ಜೆ ತೋರುತ ಹೆಜ್ಜೆಗಳ
ಹಾಗೇ ಹಾದು ಹೋಗುತ್ತವೆ;
ಲಜ್ಜೆ ತೋರುತ ಹೆಜ್ಜೆಗಳ
ಲಯಗಳಿಗೆ ಜತೆ ಕೊಡುತ್ತವೆ;
ಮೃದು ಹಾದಿಗಳಲ್ಲಿ
ಅದೊಂದು ಹಾದಿ
ಇರಬಹುದೇ, ಐಕ್ಯಗೊಳಿಸಬಹುದು
ಈ ತಿರುವಿನಲೇ ಮುನ್ನಡೆಯೋಣವೇ||
ಬಲು ದೂರದಿಂದ
ಬಂದಿರುವುದೆ ಆ ಹಾದಿ
ಕವಲಾಗುತ್ತದೆ ಸಮೀಪಿಸುತ್ತಲೆ
ಒಂಟಿ ಆ ಹಾದಿ,
ಸ್ತಬ್ಧ ಈ ಬೀದಿ
ಮತ್ತು ಇದೇ ಆ ಹಾದಿ
ಇರಬಹುದು
ನನ್ನ ಯೋಚನೆ,
ನಿನ್ನಡೆಗೆ
ತಲುಪಿಸುವುದೇ
ಈ ತಿರುವಿನಲೇ ಮುನ್ನಡೆಯೋಣವೇ
ಒಲವೇ, ನಮ್ಮ ಗಮ್ಯ ಸಾಕಾರವಾಗುವುದು||
ಒಲವೇ, ನಮ್ಮ ಗಮ್ಯ ಸಾಕಾರವಾಗುವುದು||
No comments:
Post a Comment