ಒಡೆಯ ನಾರಾಯಣ,
ನಿನ್ನ ಮಹಿಮೆ ಎಷ್ಟು ಘನವಯ್ಯಾ!!!
ಇದ್ದಲ್ಲಿಂದಲೇ ನಿತ್ಯವೂ ನಿನ್ನ ಧ್ಯಾನ ಮಾಡುತ್ತಾ,
ಸಂತರ ಕತೆಗಳ ನೆನಪು ಮಾಡಿಕೊಳ್ಳುತ್ತಾ ಪಂಡರಾಪುರಕ್ಕೆ ಹೋದ ಹಾಗಿನ ಭಾವ!
ಇಂದು ಆ ಪುಣ್ಯಾತ್ಮರು ವಾಪಸ್ಸು ಹೊರಟಿರಬಹುದೇನೋ..
ದಾಸವರೇಣ್ಯರಾದ ಪುರಂದರ, ಕನಕ, ವಿಜಯದಾಸ, ತುಕಾರಾಮ,
ನಾಮದೇವ, ಮುಕ್ತಾ ಬಾಯಿ, ಸಖುಬಾಯಿ.. ವಚನಾಗ್ರಣೇರಾದ ಬಸವಣ್ಣ, ಅಕ್ಕ ಮಹಾದೇವಿ.. ಖಂಡಿತ
ಇವರೆಲ್ಲರಂತೆ ನಿನ್ನ ಮಹಿಮೆಯನ್ನು ಮನಸೆಳೆಯುವಂತ
ರಾಗ ತಾಳದಲ್ಲಿ ಹಾಡಲೋ, ಅಕ್ಷರ ರೂಪದಲ್ಲು ಪ್ರಕಟಿಸಲು ತಿಳಿದಿಲ್ಲ ಕಣೋ!
ರವಿವರ್ಮ, ನಮ್ಮ ಬಿ ಜಿ ಮಹಮ್ಮದ್ ಮಾಸ್ಟ್ರರ್ ಅಥವಾ
ವಾಸುದೇವ ಕಾಮತ್ ಅವರಂತೆ ಕುಂಚದಲ್ಲಿ ನಿನ್ನ ಮನೋಹರ ರೂಪವನ್ನು ಚಿತ್ರಿಸಲೂ ಗೊತ್ತಿಲ್ವವಲ್ಲ.
ಮತ್ತೆ ನಂಗೆ ಏನು ಗೊತ್ತಿದೆ ಅನ್ತಿಯಾ!
ಅದೇ ನೀನು ಕರುಣಿಸಿದ್ದು..
ಪ್ರಕೃತಿಯಲ್ಲಿಯ ಚರಾಚರಗಳನ್ನು ಗಾಢವಾಗಿ ಪ್ರೀತಿಸಲು..
ಗೊತ್ತಿದ್ದ ಮಟ್ಟಿಗೆ ಅಕ್ಷರಗಳಲ್ಲಿ ನಿನ್ನೊಲವನ್ನು
ಬಣ್ಣಿಸಲು..
ಹಾ! ಅತೀ ಸುಂದರವಲ್ಲದಿದ್ದರೂ ನಿನ್ನ ರೂಪವನ್ನು
ಗೆರೆಗಳಲ್ಲಿ ಎಳೆಯಲು. ಇದು ನೀನು ಕೊಟ್ಟದ್ದೇ ಅಲ್ವೇನೋ!
ಎಷ್ಟು
ದೊರಕಿದರೂ ಮತ್ತಿಷ್ಟು ಬೇಕೆಂಬ ಕಡು ಆಸೆ, ನಮ್ಮಂತಹ ಹುಲು ಮನುಜರಿಗೆ.
ಆದರೆ ನಂಗಂತೂ ಬಹಳ ತೃಪ್ತಿ ಸಿಕ್ಕಿದೆ. ನೀನು ನನಗೆ
ಬಹಳಷ್ಟು ಕೊಟ್ಟಿದಿಯಾ! ಕೇಳದೇ ಒಲವಿನ ಮಹಾಪೂರವನ್ನೇ ಸಂಜನಾಳ ರೂಪದಲ್ಲಿ ನನ್ನ ಮೇಲೆ ಉಕ್ಕಿ
ಹರಿಸಿದಿಯಾ!
ತಲೆ ಬಗ್ಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ
ರಾಮಚಂದ್ರ!
ಮತ್ತೆ ಮತೆ ನೆನಪಾಯ್ತು ಅಮ್ಮ ಹಾಡುತ್ತಿದ್ದ ಭಜನೆ
ಹಾಡು-
ಇದುವೇ ಪಂಡರಾಪುರ ವಿಠ್ಠಲಾ, ಇದುವೆ ಪಂಡರಾಪುರ..
ಇದ ನಾನರಿಯದೇ ಪೋದೆ, ಮುಕುತಿಯ ಧಾಮ||
ನಾಮದೇವ ಹೇಳಿದಂತೆ,
ತೀರ್ಥ ವಿಠ್ಠಲ ಕ್ಷೇತ್ರ ವಿಠ್ಠಲ
ದೇಹ ವಿಠ್ಠಲ ದೇವ ಪೂಜ ವಿಠ್ಠಲ..||
https://www.youtube.com/watch?v=O0MTxpOQ8RE