“ಒಂದೂರಿನಲ್ಲಿ.. “
ಪಾರಿಜಾತದ ಬುಡದಲಿ ತುತ್ತುಣಿಸುತ್ತಾ ಬಿಚ್ಚಿಕೊಳ್ಳುವ
ಚುಕ್ಕಿ ಕತೆ..
ನಡುನಡುವಿನಲಿ ತಲೆದೂಗಿದ ಮರುತನ ಪುಷ್ಪವೃಷ್ಟಿ..
ಘಮಘಮಿಸುವ ಪಾರಿಜಾತಗಳ ಚುಕ್ಕಿ ಮಡಿಲಲಿ..
ಜೀರುಂಡೆಗಳು ಕಿವಿನಿಮಿರಿಸಿ ಆಲಿಸುತ್ತಿರುವವೇನೋ..
ಹಿತವಾದ ತಂಬೂರಿ ಝೇಂಕಾರ...
“ಓಂ ನಮೋ ವಾಸುದೇವಾಯ.. “
ಮುದ್ದುಗೆ ಬಾಲ ದ್ರುವನ ತುತ್ತಿನ ಚಿಂತೆ..
ಕೆಂಪು ಕೊಕ್ಕಿನ ಹಕ್ಕಿಗಳು ಉಣಿಸಿದವೆಂದರೇ ತೃಪ್ತಿ..
“ಅಮ್ಮ ಚಂದಮಾಮಂಗೂ.. “
ಅಡ್ಡದಿಡ್ಡಿಯಾಗಿ ಸಾಗುವ ಕತೆಯೊಂದಿಗೆ
ಒಂದು ತುತ್ತು ಉಂಡ
ನಲ್ಲಿರುಳಿಗೂ ಸವಿಗನಸಿನ ನಿದ್ದೆ!
No comments:
Post a Comment