8. ಯಾರ ಕಣ್ಣಲಿ ಯಾರ ಬಿಂಬ..
ಬಲವಾಗಿ ಅಪ್ಪಿ ಹಿಡಿದ ನೈದಿಲೆಯ ರೆಪ್ಪೆಗಳ ಪುಸಲಾಯಿಸಿ ಮೆಲ್ಲನೆ ತೆರೆದು
ಅಲ್ಲಿ ಮಿಂಚುವ ತನ್ನ ಬಿಂಬ ಕಂಡು ಮೆರೆವ ಆಸೆ ಪೂರ್ಣ ಚಂದಿರನಿಗೆ;
ಕಡುನೀಲಿ ಸೀರೆಗೆ ಅಲ್ಲಲ್ಲಿ ಹೊಳೆವ ಬೆಳ್ಳಿ ಟಿಕಲಿಗಳನಂಟಿಸಿ
’ಘಲ್ ಘಲ್’ ನಾದದೊಂದಿಗೆ ವಯ್ಯಾರದಿ ಬರುವ ನಲ್ಲಿರುಳಿಗೆ
ಪೂರ್ಣ ಚಂದಿರನ ಕಣ್ಣಲ್ಲಿ ತನ್ನ ಕಪ್ಪುಬಿಂಬ ಕಾಣುವಾಸೆ;
ಕಣ್ಮುಚ್ಚಿ ಕಲ್‍ಬೆಂಚಮೇಲೆ ಕಲ್ಪನೆಯ ಲೋಕದಲಿ ಕಳೆದುಹೋದವಳು
ನಲ್ಲಿರುಳು-ಚಂದಿರನ ಒಲವಿನ ಕಣ್ಣಾಟವನು ಕಂಡು ಮುಗುಳುನಗುತ್ತಾ
ಕಣ್ದೆರೆದಾಗ ಲೋಕ ಕಂಡಿತು ಅವಳೊಲವಿನ ಬಿಂಬ ಅವಳ ಕಣ್ಣಲಿ!

No comments:
Post a Comment