ಜಿಪುಣಾಗ್ರೇಸರ ಶ್ರೀನಿವಾಸ ನಾಯಕನಿಗೆ ಬದಲಾಗಲು ಸತಿಶಿರೋಮಣಿ ಸರಸ್ವತಿಯ ಮೂಗುತಿಯ ನೆವನ ಸಾಕಾಯ್ತು..
“ನವಕೋಟಿನಾರಾಯಣ”
ಬಿರುದನ್ನು ತ್ಯಾಗ ಮಾಡಿ ಪುರಂದರದಾಸರಾಗಿ ಬದಲಾದರು. ಅವರು ಕೇವಲ ಭಕ್ತಿ ಸಾಹಿತ್ಯ ಮಾತ್ರವಲ್ಲದೆ ಕನಾರ್ಟಕ ಸಂಗೀತದ
ಪಿತಾಮಹರಾಗಿಯೂ ಮರೆಯಲಾರದ ಕೊಡುಗೆ ಇತ್ತು ನಮ್ಮೆಲ್ಲರ ಮನೆ ಮನದಲ್ಲಿ ಅಜರಾಮರಾಗಿ ಉಳಿದಿದ್ದಾರೆ!
ಅಂತಹ ಸಂಗೀತ ಜ್ಞಾನವಿಲ್ಲದ ನನ್ನಂತಹ ಪಾಮರರಿಗೂ
ಸುಲಭದಲಿ ಹರಿಕೀರ್ತನೆಯ ಲಾಭ ದೊರಕಿಸಿಕೊಟ್ಟ ಪುರಂದರದಾಸರ ಆರಾಧನೆಯ ಸುಸಂದರ್ಭದಲ್ಲಿ..
ತಾಳನು ಹರಿ ಕೇಳನೂ |
ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ |
ತಾಳನು ಹರಿ ಕೇಳನೂ ||
ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು |
ಕೊಂಬು ಕೊಳಲು ಶಂಖ ವಾದ್ಯವಿದ್ದು |
ತುಂಬೂರ
ನಾರದರ ಗಾನ ಕೇಳುವ ಹರಿ |
ನಂಬಲಾರ ಈ ಡಂಭನ ಕೂಗಾಟ ||
ನಾನಾ ವಿಧದ ರಾಗ ಭಾವ ತಿಳಿದ ಸ್ವರ |
ಜ್ಞಾನ ಮನೋಧರ್ಮ ಜಾತಿಯಿದ್ದು |
ದಾನವಾರಿಯ ದಿವ್ಯ ನಾಮರಹಿತವಾದ |
ಹೀನನಾ ಸಂಗೀತ ಸಾಹಿತ್ಯಕೆ ಮನವಿತ್ತು ||
ಅಡಿಗಡಿಗಾನಂದ ಭಾಷ್ಪ ಪುಳಕವಾಗಿ |
ನುಡಿ ನುಡಿಗೆ ಶ್ರೀಹರಿ ಎನುತ |
ಧೃಡ ಭಕುತರನು ಕೂಡಿ ಹರಿ ಕೀರ್ತನೆ ಪಾಡಿ |
ಕಡೆಗೆ ಶ್ರೀಪುರಂದರ ವಿಠಲನೆಂದರೆ ಕೇಳ್ವ ||
No comments:
Post a Comment