“ನಮೋ ತುಲಸೀ ಕಲ್ಯಾಣಿ..
“ ಗುನುಗುನುತ್ತಾ
ತುಲಸಿ ಕಟ್ಟೆಗೆ
ಸುತ್ತು ಹಾಕಿ ನೀರೆರೆಯುತ್ತಾ
ಮನೆ ಮನ ಕುಲ ಬೆಳಗಲಿ
ಎಂದು ಬೇಡುತ್ತಾ
ಕಣ್ಮುಚ್ಚಿ ಕಣ್ಧಾರೆ
ಸುರಿಸುತಿಹಳು ನೀರೆ!
ಅಂಗೈ ತೆರೆದಿಟ್ಟು
ಆಗಸದತ್ತ ಚಾಚಿದವಳ ಬೊಗಸೆಯಲಿ
ತಲೆಗೆ ನೀರೆದು ಬೆನ್ನತುಂಬಾ
ಹರವಿಕೊಂಡು
ಮೆದು ಮುಗಿಲ ದಿಂಬಿಗೊರಗಿ
ಕುಳಿತಿರುವ ಮುಂಜಾವಿನ
ಕಡುಕಪ್ಪು ಜಲಪಾತದಿಂ
ಬಿದ್ದವು ಕೆಲವು ಹನಿಗಳು!
No comments:
Post a Comment