ಇರುಳಿನ ಆಲಸ್ಯವನು
ಒದ್ದೋಡಿಸಿ
ಇಬ್ಬನಿ ಹನಿಗಳನು
ಚಿಮುಕಿಸಿ
ಮನೆ ಮನದ ಕಲ್ಮಶನವನು
ಗುಡಿಸಿ
ಅಂಗಣದಲಿ ಮಂಜಿನ
ರಂಗೋಲಿಯನು ಬಿಡಿಸಿ
ಹೊನ್ನಝರಿಯಂಚಿನ
ಪೀತಾಂಬರ ಧರಿಸಿ
ಮುಗಿಲ ತೇರನೇರಿ
ಬರಲಣಿಯಾಗುವ
ತೇಜ ವದನ ದಿನಕರನ
ಪಥದ ಹಾದಿಯ ಶೃಂಗರಿಸಿ
ಕಾದಿಹಳು ಕಪ್ಪು
ಕಜ್ಜಳ ಲೇಪಿಸಿದ ನೀಲಗಣ್ಣ ಚೆಲುವೆ
ನಮ್ಮ ಮುಂಜಾವು!
No comments:
Post a Comment