ನಲ್ಲಿರುಳಿನ ಮೌನ ಗಾನ..
--------------------------
ದೂರದಲ್ಲಿ ಒಂಟಿ ಶ್ವಾನದ ಗೋಳು..
ಸಂಗಾತಿಯ ಅಗಲಿಕೆಯ ನೋವು
ನಭದಲಿ ಚುಕ್ಕಿಗಳೂ ಮಂಕು..
ಶಶಿಯನಾವರಿಸಿದೆ ಪರದೆ ಕರಿಕಪ್ಪು
ಅಂಗಣದಲಿನ್ನೂ ಉರಿಯುತಿದೆ ದೀಪ..
ಮನೆಯೊಡೆಯನಿನ್ನೂ ಮರಳಿಲ್ಲದ ಸಂಕೇತ
ಕಿಟಿಕಿಗೊರಗಿದ ಹಸಿರು ಕಂಕಣಗಳಿಗಿಲ್ಲ
ಮೆಚ್ಚಿಸುವ ಕಿಂಕಿಣಿ ಭಾಗ್ಯವಿಲ್ಲ
ನಿಟ್ಟುಸಿರಿಗೆ ಕರಗುತಿದೆ ಮಂಜು..
ಅಳಲು ಹರಿದು ಒದ್ದೆಗಣ್ಣು
ನಲ್ಲಿರುಳಿಗೂ ಅವನದೇ ಧ್ಯಾನ
ಹಾಡುತಿದೆ ಮೌನ ಗಾನ!
--------------------------
ದೂರದಲ್ಲಿ ಒಂಟಿ ಶ್ವಾನದ ಗೋಳು..
ಸಂಗಾತಿಯ ಅಗಲಿಕೆಯ ನೋವು
ನಭದಲಿ ಚುಕ್ಕಿಗಳೂ ಮಂಕು..
ಶಶಿಯನಾವರಿಸಿದೆ ಪರದೆ ಕರಿಕಪ್ಪು
ಅಂಗಣದಲಿನ್ನೂ ಉರಿಯುತಿದೆ ದೀಪ..
ಮನೆಯೊಡೆಯನಿನ್ನೂ ಮರಳಿಲ್ಲದ ಸಂಕೇತ
ಕಿಟಿಕಿಗೊರಗಿದ ಹಸಿರು ಕಂಕಣಗಳಿಗಿಲ್ಲ
ಮೆಚ್ಚಿಸುವ ಕಿಂಕಿಣಿ ಭಾಗ್ಯವಿಲ್ಲ
ನಿಟ್ಟುಸಿರಿಗೆ ಕರಗುತಿದೆ ಮಂಜು..
ಅಳಲು ಹರಿದು ಒದ್ದೆಗಣ್ಣು
ನಲ್ಲಿರುಳಿಗೂ ಅವನದೇ ಧ್ಯಾನ
ಹಾಡುತಿದೆ ಮೌನ ಗಾನ!
1 comment:
ಮೌನಗಾನ ಚೆನ್ನಾಗಿದೆ ಮೇಡಂ
Post a Comment