ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

23 May, 2013

ಮೃಗಮಾನವ!


ಅದೇನೋ ಮಣ ಮಣವೆಂದು ಆ ಕಲ್ಲು ವಿಗ್ರಹಗಳೆದುರು
ಕುಳಿತವನ ನೋಡಿ ಬಂತೇ ಕೋಪ, ರೋಷ, ದ್ವೇಷ
ಅದೇ ನಸುನಗೆ.. ನಿರ್ಲಿಪ್ತತೆ.. ಕಲ್ಲಾಗಿರುವೆನೇ ನಾನೀಗ
ಊದು ಬತ್ತಿಯ ಹೊಗೆಯಲಿ ಮಸುಕಾದ ಮೂರುತಿಯ ನೋಡಿ
ನೆನಪಾಯ್ತು  ಹೀಗೆ ಅವನಿಗೂ ಆಗಿರಬಹುದೇ ನನ್ನ ಮೇಲಿ
ಕಲ್ಲು ಮೂರುತಿಯಲ್ಲಿರುವವನ ಹೃದಯವೂ ಕಲ್ಲೇ!

ಅಲ್ಲಿಂದ ತಂದೆ ನಿನ್ನನ್ನು, ನೀನಾಗಿರಬೇಕು ಕೃತಜ್ಞಳು
ಪೂರ್ತಿ ಜೀವಮಾನವೀಗ.. ಬಿಸಿಲು ಹೊರಗನ್ನುವಿಯಾ..
ಅವನಿಗೋ ಕೆಲಸವಿಲ್ಲ ಅದಕ್ಕೇ ನೆತ್ತಿಗೇರಿದ್ದಾನೆ... 
ನನಗೋ ನಿಶೆಯ ಗೆಳೆತನ ಮೇಲಿಗ..
ಹೆಣ್ಣೇ, ಅಬಲೆ ನೀ.. ಒಂಟಿಯಾದರೆ ಮುಕ್ಕುವರು ಜನರೀಗ
ಮರುಳೇ, ಏನು ತಿಳಿವಿದೆ ಎಂದು ಹೊರಬರುವೆ..
ನಡೆ ಒಳಗೆ ತಿಕ್ಕಿ ಬೆಳಗಿಸು ಗೋಡೆಯೊಳಗೆ ಉಳಿ..

ಮರೆಯಬೇಡ ಅವೆಲ್ಲವೂ ನಿನ್ನ ಕರ್ತವ್ಯ..
ಕರೆದಾಗ ಓಗೊಡಬೇಕು..  ನಿತ್ಯವೂ ಸಹಕರಿಸಬೇಕು..
ಗಂಡು ನಾನು ನೆನಪಿರಲಿ ದಾಸಿ ನೀನು..
ನನ್ನ ನೆರಳಲಿ ನೀ ನಡೆಯಬೇಕು..
ಬೆರಳು ತೋರಿ ಚುಚ್ಚುವುದು ಸಮಾಜ ನಿನಗೆ ನನಗಲ್ಲ..
ಕುಲಕೆ ಹೊರಗಾದೆ ನೀನೀಗ ನಿನಗಾರಿಲ್ಲ ಅಲ್ಲಿ ಇನ್ನೀಗ..
ಅತ್ತಿತ್ತ ನೋಡಬೇಡ ಅವರೂ ಇವರೂ ನನ್ನ ಪರವೇ!


ದೇಹ ಬೆಚ್ಚಗಿರಿಸದ ನೀನು ಇದ್ದರೂ ಇಲ್ಲದಿದ್ದರೂ ನಡೆಯುವುದು..
ನೀನಿಲ್ಲದಿರೆ ಹಸಿವು ನೀಗಿಸಲು ನನಗೆ ತಿಳಿದಿಲ್ಲವೇನು?
ಕೆಕ್ಕರಿಸಿ ನೋಡುವೆಯಾ.. ಎದುರು ಮಾತನಾಡುವೆಯಾ
ಒಂದು ಘಳಿಗೆಯೂ ಇರಬೇಡವಿಲ್ಲಿ.. ನಾನಾರು ಗೊತ್ತೆ
ಅವನ ಅಪವತಾರ ನಾನು... ಮೃಗಮಾನವ..
ನೆನಪಿಡು ಮೃಗಮಾನವ!!!








3 comments:

Anushanth said...

ವಿಪರ್ಯಾಸವೊಂದು ವ್ಯಂಗ್ಯದ ವೇಷ ತೊಟ್ಟುಕೊಂಡು ಭಾರೀ ಬಿರುಸಾಗಿ ಸಾಗಿಬಂದಿದೆ ಶಬ್ಧಗಳ ಮೂಲಕ...ಚೆನ್ನಾಗಿದೆ ಶೀಲಾ.

Sheela Nayak said...

ಭಾವಗಳು ಶಬ್ದಗಳಾಗಿ ಮೂಡಿಬಂದಿದೆ.. ಖಾಲಿಯಾಗಬೇಕಾಗಿದೆ..
ನಾ ಕವಯತ್ರಿಯಲ್ಲ..
ಚೆನ್ನಾಗಿದೆಯೋ ಇಲ್ಲವೋ ನನಗಿಲ್ಲ ಚಿಂತೆ
ಬರೇ ಖಾಲಿಯಾಗಬೇಕಾಗಿದೆ..
ಆದರೆ ಹೇಳಿದಷ್ಟು ಮತ್ತೆ ಮತ್ತೆ ತುಂಬುತಿದೆ
ಹೇಳು ಅನು, ಮತ್ತೇ ಹೇಗೆ ಖಾಲಿಯಾಗಲಿ???

Anushanth said...

kiviyalli hELidaraShTE oLagiddaddu muMdina taana kaMdukomdeetu, shoonyadalli usuridare serabekaada jaaga kaanade matte ninnolagE bandeetu sheelaa...

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...