ಬೆನ್ನ ತಟ್ಟಿ ಹುರಿದುಂಬಿಸಿ ನಡೆ ಮುಂದೆ ನಾನಿರುವೆ
ಹಿಂದೆ
ಅಂದ ಕೈಗಳ ಕಿತ್ತೆಸೆದೆಯಲ್ಲ ಅಯ್ಯಾ ವಿಧಿಯೆ
ಮಿಣಿ ಮಿಣಿ ಬೆಳಗುತ್ತಿತ್ತಾ ಹಣತೆ ಬಾಳ ಪಥದೊಳಗೆ
ಒಂದಿಷ್ಟು ಕತ್ತಲ ನುಂಗಿ ಗುರಿಯತ್ತ ಹಾದಿ ತೋರುತಿತ್ತೆ
ಅದ ಕಸಿದು ಏನು ಸಾಧಿಸಿದ ತವಕವೇ ನಿನಗೆ ವಿಧಿಯೇ
ಮತ್ತೇನು ಉಳಿದಿದೆ ಹುಗಿದೆಯಲ್ಲ ಜೀವಂತ ಗೋರಿಯೊಳಗೆ!
No comments:
Post a Comment