ಒಲವೇ,
ನೀನಿರೆ
ಬಳಿಯಲಿ ಬದುಕಿನ ಭಾರವು ಹಗುರ!
ನೀನಿರೆ
ಬಳಿಯಲಿ ಸುಡುವ ಬಿಸಿಲೂ ಬೆಳದಿಂಗಳು!
ನೀನಿರೆ ಬಳಿಯಲಿ
ಚಂದ್ರನಿಲ್ಲದ ಇರುಳೂ ಹುಣ್ಣಿಮೆ!
ನೀನಿರೆ
ಬಳಿಯಲಿ ನಡುಗುವ ದೇಹವೂ ಬೆಚ್ಚಗೆ!
ನೀನಿರೆ
ಬಳಿಯಲಿ ಕಾಡದು ಹಸಿವು ತೃಷೆ!
ನೀನಿರೆ
ಬಳಿಯಲಿ ಬಾರಳು ನಿಶೆ!
ನೀನಿರೆ ಬಳಿಯಲಿ
ನನಗದೇ ನಶೆ!
No comments:
Post a Comment