ಮುತ್ತುಗಳ ತೇರುಗಳ ಪೊತ್ತು
ಅಂಗಳದಿ ತುಂಬ
ಮೆರೆಯುತಿವೆ ಮಾಮರಗಳು
ಸುತ್ತಲೂ ಮುತ್ತಲೂ ಪಸರಿಹನು
ಮರುತನು ಗಂಧವನು
ಮುತ್ತಿಹ ಕೋಗಿಲೆಗಳ
ಗಾನ ಮೇಳ!
ಕುಹೂ ಕುಹೂ... ಕುಕ್ ಕುಕ್... ಕಿಕ್ ಕಿಕ್...
ನನ್ನಂತರಂಗವ ಮೀಟಿದವು
ಹೊಮ್ಮಿದವು ಸಪ್ತಸ್ವರಗಳು!
ಒಲವೇ, ಹಾಡುವೆ ನಾನೀ
ಭಾವ ಗಾನ
ಕೇವಲ ನಿನಗಾಗಿ
ಒಪ್ಪಿಸಿಕೊಳ್ಳು ನನ್ನನ್ನು ನನಗಾಗಿ!
No comments:
Post a Comment