ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

27 July, 2013

ಹಳೆಯ ಬರಹಕ್ಕೆ ಮತ್ತಷ್ಟು ಸೇರಿ,, ನೀ ನೀನಲ್ಲ ಮತ್ಯಾರು???


|| ನೀ ಗುಡಿಯಲ್ಲ, ಅರಮನೆ ||

|| ನೀ ಕತ್ತಲೆಯಲ್ಲ, ಅಮವಾಸ್ಯೆ ||

|| ನಾ ಗಾಯಕಿಯಲ್ಲ, ಕೋಗಿಲೆ ||

|| ನೀ ಗಂಧವಲ್ಲ, ಪಾರಿಜಾತ ||

|| ನೀ ಅಪ್ಪಯ್ಯನಲ್ಲ, ನೀಲಕಂಠ ||

|| ನೀ ಪ್ರೇಮವಲ್ಲ, ಪರಮಾತ್ಮ ||

|| ನೀ ಒಲವಲ್ಲ, ಅಮೃತ ||

|| ನೀ ಪುಟ್ಟ ಹಣತೆಯಲ್ಲ, ಸೂರ್ಯ ||

|| ನೀ ಚಿಪ್ಪಲ್ಲ, ಸಾಗರ ||

|| ನೀ ಭಾವವಲ್ಲ, ಕಾವ್ಯ ||

|| ನೀ ಸ್ತ್ರೀಯಲ್ಲ, ಸೃಷ್ಟಿ ||

|| ನೀ ನಲ್ಲೆಯಲ್ಲ, ಬೆಳದಿಂಗಳು ||

|| ನೀ ತಂತಿಯಲ್ಲ, ವೀಣೆ  ||

|| ನೀ ಆಕಾಶ ದೀಪವಲ್ಲ, ಚಂದಿರ ||

|| ನೀ ಪಾತರಗಿತ್ತಿಯಲ್ಲ, ರಂಭೆ ||

|| ನೀ ರತ್ನವಲ್ಲ, ನಕ್ಷತ್ರ ||

|| ನೀ ಕೊಳವಲ್ಲ, ಮಾನಸ ಸರೋವರ ||

|| ನೀ ಕಂದನಲ್ಲ, ಮುತ್ತು ಮಾಣಿಕ್ಯ||

|| ನೀ ವಾತ್ಸಲ್ಯವಲ್ಲ, ಅಮ್ಮ ||

|| ನೀ ಸತಿಯಲ್ಲ, ಶಕ್ತಿ ||

|| ನೀ ಸಖನಲ್ಲ, ಬದುಕು ||

|| ನಾ ನಾನಲ್ಲ, ನೀನು ||

|| ನೀ ಹೆಸರಲ್ಲ, ನನ್ನುಸಿರು ||

|| ನೀ ರಾಗವಲ್ಲ, ಭೈರವಿ ||

|| ನೀ ಗಾಳಿಯಲ್ಲ, ಪ್ರಾಣ ||

|| ನೀ ದಾರವಲ್ಲ, ಆಧಾರ ||

|| ನೀ ಅಂಗಣವಲ್ಲ, ನಂದನವನ ||

|| ನೀ ಮಣ್ಣಲ್ಲ, ಅನ್ನ||

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...