ಮುಂಜಾನೆ: ಏಳೇ, ನೋಡು.. ತಡಮಾಡಬೇಡ,
ಕಾಡುವನು ಶನಿ ಜೀವನ ಪೂರ್ತಿ!
ಗಹಗಹಿಸಿ ನಗದೇ ಇರಲಾಗಲಿಲ್ಲ.
ನಾನು; ಅಮ್ಮ, ಮುಂಜಾನೆ, ಹೀಗೆ ಬೆದರಿಸಿ ನಿನ್ನ ಮಡಿಲಲಿ
ಕಳೆಯುವ ಕೆಲವು ಕ್ಷಣಗಳಿಗೂ ಕುತ್ತು ತರಬೇಡ!
ಶನಿಯೇನು, ಯಾವ ಗ್ರಹವೂ ಕಾಡದು! ಕಾಣುವಿಯೇನು ಶೀರಾಮನ
ಮೂರುತಿ ಹೃದಯ ಗರ್ಭದಲಿ!
ಉಸಿಉಸಿರಲು ಬೆರೆತಿರುವ ಒಲವ ಬಲವಿದೆ! ಧನ ಕನಕಗಳ ಆಸೆ
ಎನಗಿಲ್ಲ.. ಮಾಡಲೇನು ಸಾಧ್ಯ ಗ್ರಹಗಳಿಗೆ
ಆತ್ಮಬಲವಿರುವ ತನಕ!
No comments:
Post a Comment