ಅಂದು ವಸಂತಮಾಸದಲ್ಲಿ ಮದನನು ನನ್ನೆಡೆ ಹೂಬಾಣವ ಹೂಡದೇ
ಇದ್ದಿದ್ದರೆ,
ಒಲುಮೆಯ ನುಡಿಗಳಿಂದ ಅವನು ನನ್ನ ಮನದಂಗಳದಲಿ ಸಗ್ಗ
ಸೃಷ್ಟಿಸದಿರದಿರುತ್ತಿದ್ದರೆ,
ನೋವಿಲ್ಲದ ಅನಿಮಿಷರ ಲೋಕದಲ್ಲೇ ನಾವಿರಬಹುದಿದ್ದರೆ,
ಸ್ಪಷ್ಟವಾಗಿ ಮೂಡುವ ಅನುಭಾವಗಳ ಶಬ್ದಗಳಲಿ ಹೇಳುವ
ಧೈರ್ಯವಿದ್ದಿದ್ದರೆ,
ಅವನ ಮನ ಗೆಲ್ಲುವ ಪಾಂಡಿತ್ಯ ನನ್ನಲ್ಲಿದ್ದಿದ್ದರೆ,
ಹೇಳು ಮುಂಜಾನೆ, ಪ್ರಶ್ನಾವಳಿಗಳೇ ತುಂಬಿರುವ ಬದುಕಿಗೆ
ನೀನುತ್ತರ ನೀಡಬಲ್ಲೆಯಾ?
No comments:
Post a Comment