ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

20 July, 2013

ಮುಸ್ಸಂಜೆ ಹಾಗೂ ಮುಂಜಾವು... ತಂದ ಅನುಭಾವ!!!ಅಂದು ಚಂದ್ರೋದಯವಾಗುವುದೇ ತಡ
ತೆರೆದುಕೊಳ್ಳುತ್ತಿದ್ದವು ಭಾವಗಳು
ದನಿಯೆತ್ತಿ ಹಾಡುವ ರಾಗಕೆ ಚುಕ್ಕಿಗಳ
ಸುಸ್ವರವೂ ಸೇರಿ ಬಾನ ತುಂಬಾ ಮಾರ್ದನಿ
ಗೋಡೆಯ ಮೇಲೆ ಮೂಡುವ ಈ ಹಾಡಿಗೆ
ಹತ್ತು ಹಲವು ಮನಗಳ ಚಿತ್ತಾರಗಳ ಮೋಡಿ
ಶಾಂತ ಮನವು ನಿಶೆಯ ವಶವಾಗುವುದೇ ತಡ
ಬರುವ ಅವನ ಪ್ರೇಮ ಸಿಂಚನದ
ಬೆಚ್ಚನೆಯ ಹೊದಿಕೆ..

ಇಂದು ಎಲ್ಲವೂ ಮರೆಯಾಗಿ
ನಿಶೆಯೂ ಮೌನಿಯಾದಾಗ, ಮನವು ನರಳಿದಾಗ,
ಕಣ್ಣೆವೆಗಳು ತೆರೆದೇ ಉಳಿದಾಗ,
ಸ್ನೇಹ ಹಸ್ತಗಳು ಎದೆಗಾನಿಸಿ,
ಕುಸಿದು ಹೋದ ಸ್ಥೈರ್ಯವನು ಮರಳಿಸಿದವು
ಕತ್ತಲು ಕರಗಿ ಮೂಡಿದ ಮುಂಜಾನೆ
ಹಚ್ಚಿತು ಹಣತೆ ನನ್ನೆದೆಯ ಗುಡಿಯೊಳಗೆ
ಕನಸುಗಳು ಮರಳಿದವು ಗೂಡಿನೊಳಗೆ!

  


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...