ಕಾಲನ ಆರ್ಭಟಕೆ ಸ್ತಬ್ಧವಾದ ಕೋಗಿಲೆಯ ಸುಪ್ರಭಾತ
ರಾಗ ಕೇಳಿಸದೇ ತಾವು ತೆರೆಯಲೊಲ್ಲೆವೆನುವ ಚಕ್ಷುಗಳು
ಕನಸಲ್ಲಾದರೂ ಒಲವ ಜತೆಗೂಡಿ ಹಾಡುವ ಭ್ರಮೆಯಲಿ ಮನಸು
ಅದಕೆ ತಕ್ಕ ತಾಳ ಹಾಕುತ ಬೆಚ್ಚಗೆ ಮಲಗಿದ ದೇಹ
ಕರ್ತವ್ಯ ಪಟ್ಟಿಯ ಪಾಠ ಮಾಡಿ ಬೆಚ್ಚಿಸಿ ಗದರಿಸಿ
ಹುಕುಂ ಮಾಡಿ ಹಾಸಿಗೆಯಿಂದತ್ತ ನೂಕಿದ ಒದ್ದೆ ಮುಂಜಾವು!
No comments:
Post a Comment