-
ನಾನು: ಬಿಸಿಲು ಸುಡುವದೆಂದು ಮರದಡಿ ನಾ ಪೋದೆ, ಮರ
ಬಗ್ಗಿ ಶಿರದ ಮೇಲೊರಗಿತು ಹರಿಯೆ.
ಯಾರಿಗೆ ಯಾರುಂಟು ಎರವಿನ ಸಂಸಾರ ನೀರಮೆಲಣಗುಳ್ಳೆ
ನಿಜವಲ್ಲ ಹರಿಯೇ||
ಮುಂಜಾವು: ಗೊಂಬೆಯಾಟವಯ್ಯ ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆಯಾಟವಯ್ಯ
ಅಂಬುಜನಾಭನ ಅಂತ್ಯವಿಲ್ಲದ ಧಾತನ ತುಂಬು ಮಾಯವಯ್ಯಾ ಈ
ಲೀಲೆಯು
ಬೊಂಬೆಯಾಟವಯ್ಯ ಬ್ರಹ್ಮಾಂಡವೇ ಆ ದೇವನಾಡುವ
ಬೊಂಬೆಯಾಟವಯ್ಯ||
ಜಗವ ಸೃಜಿಸಿ, ಗತಿ ಸೂತ್ರವನಾಡಿಸಿ
ನಗುನಗುತಾ ಕುಣಿಸಿ ಮಾಯೆ ಬೀಸಿ
ರಾಗದ ಭೋಗದ ಉರಿಯೊಳು ನಿಲ್ಲಿಸಿ
ಆಗೊಮ್ಮೆ ಈಗೊಮ್ಮೆ ತಾನಾಡಿ ತಾನಲಿವ... “
ನಸುನಗುತಾ ಅನ್ನುತ್ತಾಳೆ ಮುಂಜಾನೆ, “ ಅವನನ್ನೇ ಕೇಳು,
“ತಿಳಿ ಹೇಳಯ್ಯಾ ಒಳಮರ್ಮ ತೋರಯ್ಯಾ, ನಳಿನಾಕ್ಷ ನಿನ್ನಯ
ಸಂಕಲ್ಪವೇನಯ್ಯ?”
No comments:
Post a Comment