ವೈರಸ್ ಸ್ನೇಹ...
------------------
“Do you know me? Why did you send me a virus infected file? “
2004ರಲ್ಲಿ ಅದೇ ತಾನೇ ಕಂಪ್ಯೂಟರ್ ಎ ಬಿ ಕಲಿಯಲು ಆರಂಬಿಸಿದೆನಷ್ಟೇ! ಮೊದಲ ಬಾರಿಗೆ ಹೊಸ ಐಡಿ! ಮೈಲ್ ಅಕೌಂಟ್ ಆರಂಭಿಸಿದ ಹುಮ್ಮಸ್ಸು.. ಹಿಂದಿನ ದಿನ ಏರ್‌ಟೆಲ್ (ಆವಾಗ ಟಚ್ ಟೆಲ್) ಫೋನು ಕನೆಕ್ಷನ್ ಹಾಕಿ, ಅವರದೇ ಫ್ರೀ ಐದು ಮೈಲ್ ಐಡಿ ಕೊಟ್ಟಿದ್ದರು. ಅವರದೇ ಪಾಸ್ವರ್ಡ್.. ಅದೇ 123456!!! ಬದಲಿಸಿ ಅಂತ ಹೇಳಿದ್ದರೂ, ಮತ್ತೆ ಬದಲಿಸೋಣ ಅಂತ ಮಾಡಿರಲಿಲ್ಲ.
ಈ ಮೇಲಿನ ಸಂದೇಶ ಹೊತ್ತ ಮೈಲ್ ಬಂದಾಗ ಎದೆ ಧಸ್ ಅಂದಿತು! ಕ್ಷಣ ಮಾತ್ರಕ್ಕೆ ಅಯ್ಯೋ ಇದೆಲ್ಲಾ ಏನು? ಇನ್ನು ಪೋಲಿಸು ಕೇಸು ಆಗುತ್ತಾ! ಮೊದಲ ಚುಂಬನಕ್ಕೆ ದಂತ ಭಗ್ನ!!!
ಬಹುಶಃ ನಾನು ಕೈಗಳೆರಡನು ಜೋಡಿಸಿ 5’6”ದೇಹವನ್ನು ಹಿಡಿಯನ್ನಷ್ಟಾಗಿ ಮಾಡಿದ್ದು ಅವರಿಗೆ ನನ್ನ ಉತ್ತರದಲ್ಲೇ ಕಾಣಿಸಿರಬೇಕು!
ಅದ್ಯಾರೋ ನನ್ನ ಐಡಿಯಿಂದ ವೈರಸ್ ಕಳಿಸಿದ್ದರು! ಜೋಸ್ಲಿನ್ ನನ್ನ ಮಾತನ್ನು ನಂಬಿದರು. ಮೊದಲು ಪಾಸ್‌ವರ್ಡ್ ಬದಲಾಯಿಸಿದೆ.. ನಂತರ ನಮ್ಮ ಮೈತ್ರಿ ಬೆಳೆಯಿತು. ಆಕೆಗೋ ಅದು ಸಹಜ! ನನಗೋ ನಮ್ಮ ಮೈತ್ರಿ ಒಂದು ಅಚ್ಚರಿ!
ಕಂಪ್ಯೂಟರ್‌ನ್ ತಲೆಬುಡ ತಿಳಿಯದವಳು ನಾನು..
ಆಕೆ ಕಂಪ್ಯೂಟರ್ ಇಂಜಿನಿಯರ್!
ತನ್ನದೇ ಒಂದು ಐಡೆಂಟಿಯಿರದ, ಯಾವುದೇ ಸಾಮಾಜಿಕ ಸ್ಟೇಟಸ್ ಇರದವಳು ನಾನು
ಆಕೆ ಒಂದು ಸಕ್ಸೆಸ್‌ಫುಲ್ ಕಂಪೆನಿಯಲ್ಲಿ ಒಳ್ಳೆಯ ಪದವಿಯಲ್ಲಿರುವವಳು..
ಆದರೂ ನಮ್ಮ ಸ್ನೇಹ ಬೆಳೆಯಿತು.. ಅದೇನೂ ನಿತ್ಯವೂ ಮಾತುಕತೆ ಇರಲಿಲ್ಲ. ಆದರೂ ಹೊಸ ಮಾಹಿತಿ, ಹೊಸ ರುಚಿಯ ಅಡುಗೆ ವಿಧಾನಗಳು..ಹ್ಮ್, ಏನೋ ಒಂದು ನೆವನ ಬೇಕಿತ್ತು!
ನನಗಂತೂ ಈ ಸ್ನೇಹ ಸಿಕ್ಕಿದು ಒಂದು ನಿಧಿ ಸಿಕ್ಕಿದ ಹಾಗೆ ಇತ್ತು. ನನ್ನೆಲ್ಲಾ ಸ್ನೇಹಗಳಿಗೂ ಅವರು ಬೆಲೆ ಕೊಡಲಿ ಕೊಡದಿರಲಿ, ನಾನಂತೂ ನನ್ನ ಅಭ್ಯಾಸದ ಹಾಗೆ ಇದಕ್ಕೂ ಗುಡಿ ಕಟ್ಟಿದ್ದೆ.
ಇವತ್ತು, “ಮಂಗಳೂರಿನಲ್ಲಿದ್ದೇನೆ, ಬರಲಾ?” ಎಂದ ಜೋಸ್ಲಿನ್ ನನಗೆ ಅಚ್ಚರಿಯುಂಟು ಮಾಡಿದಳು!
“ಶೀಲಾ ಬೆಳೆದ ಪರಿ ನನಗೆ ಅಚ್ಚರಿ! ತನ್ನಷ್ಟಕ್ಕೇ ತಂತ್ರಜ್ಞಾನ ಕಲಿತದಷ್ಟೇ ಅಲ್ಲ, ಅದರ ಫಲಿತಾಂಶ ಆಕೆಯ ಮನೆ ಗೋಡೆಯಲ್ಲಿ, ಆಕೆಯ ಚಟುವಟಿಕೆಯಲ್ಲಿ ಎದ್ದು ಕಾಣುತ್ತಿದೆ! I am very much surprised as well as happy to see her growth!”
ನನ್ನ ಪತಿಯ ಬಳಿ ಹೇಳುತ್ತಿದ್ದದನ್ನು ಕೇಳುವಾಗ ಮತ್ತೊಮ್ಮೆ ಆ ದಿನಗಳ ಏಳುಬೀಳುಗಳ ನೆನಪು ಹಸಿರಾಯಿತು. Trial and error... ಸಮಯ ಉಳಿಸಿ, ಹೊಸದನ್ನು ಕಲಿಯುವಾಗ..ಏರುತ್ತಿರುವ ಪ್ರಾಯದಲ್ಲಿ, ನೆನಪು ಕೈಕೊಡುವ ತೊಂದರೆಯಲ್ಲೂ ಕಲಿಯುವ ಹುಮ್ಮಸ್ಸು ಮಾಸಿರಲಿಲ್ಲ! ಕರ್ತವ್ಯಗಳು, ಮನೆಪಾಠ, ಜತೆಗೆ ಆಗಾಗ ಸಿಗುವ ಪೈಂಟಿಂಗ್ ಕೆಲಸಗಳು ಎಲ್ಲವನ್ನೂ ನಿರ್ವಹಿಸುವುದರ ಜತೆಗೆ ಬ್ಲಾಗ ಬರಹ ಹಿಂದಕ್ಕೆ ಬೀಳುತ್ತಿತ್ತು. ಬ್ಲಾಗ್ ಓದು, ಜತೆಗೆ ಫೇಸ್ ಬುಕ್ ನನ್ನ ಬದುಕಿನಲ್ಲಿ ಬರಹ ಮತ್ತು ಫೋಟೊಗ್ರಾಫಿಗೂ ಸ್ಥಾನ ಕೊಟ್ಟಿತು!
“Shiela, I know secret of your beauty! Your inner happiness reflects .. that’s it!”
ಒಪ್ಪಿದೆ ಜೋಸ್ಲಿನ್ ಮಾತನ್ನು!
ಹೀಗೇ ವೈರಸ್ ಒಂದು ಸ್ನೇಹಕ್ಕೆ ಕಾರಣವಾಗುತ್ತದೆ ಅಂತ ಹೇಳಿದ್ರೆ ಯಾರೂ ನಂಬಲಾರರು!
No comments:
Post a Comment