ಒಲವೇ,
ನೀನೊಂದು
ಮುಳ್ಳುಗಳಿಲ್ಲದ ಮೆದು ಹಸಿರೆಲೆಯ
ಗಿಡದಲಿ ನಸುನಗುವ
ಕೆಂಬಣ್ಣದ ಗುಲಾಬಿ
ಕುಳಿರ್ಗಾಳಿಯ ಶಿಶಿರದಲೂ
ಅರಳುವಿ..
ಸುಡುವ ವೈಶಾಖದಲೂ ತಂಪೆನ್ನೆರೆಯುವಿ
ಧೋ ಸುರಿಯುವ ಶ್ರಾವಣವನೂ
ಮೀರಿದೆ ನಿನ್ನ ಮಾರ್ದನಿ
ಬದಲಾಗುವ ಋತುಗಳಿಗೆ
ಮಣಿಯದ ಛಲ ನಿನ್ನದು
ನಿನಗೆ ನಿತ್ಯವೂ
ವಸಂತ ಮಾಸವೇ..
ಅದೇ ನಾ ನಿನಗೊಲಿದ ಕಾರಣವೇ!
No comments:
Post a Comment