ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

21 April, 2014

ಭಾಸ್ಕರ ಒಲುಮೆಯ ನೋಟಕೆ ಒಲಿಯದವಳು ಅರಳಲು ಒಲ್ಲಳು!
ಕೆಲವೇ ಕ್ಷಣಗಳಲಿ ಮೂಡುವ ಚುಕ್ಕಿಗಳೊಡೆಯನಿಗಾಗಿ ಕಾದಿಹಳು
ಇಂದುವಿನ ದರುಶನವಾಗುತ್ತಲೇ ನಸುನಕ್ಕು ಸಂಭ್ರಮಿಸುವಳು!




20 April, 2014

ಕಾಲ ಮಹಿಮೆ!

ಒಲವೇ,

ಶಿಶಿರನ ಶುಷ್ಕ ನೋಟಕೆ ಒಣಗಿ ಬತ್ತಲಾಯಿತು ತರು..
ನಂಬಿಕೆ, ಭರವಸೆ ಎದೆಯ ಗೂಡಲಿ ಭದ್ರ
ಕಾಲನ ನಿಯಮದಂತೆ ಮರಳಿದನೇನು ಸರಿ,
ವಸಂತನ ಒಲುಮೆಯ ನೋಟಕೆ ಧರಿಸಿ
ಹಸಿರು ಪತ್ತಲ ಚಿಮ್ಮಿಸಿತು ಗೆಲುವಿನ ನಗೆ..
ಕಾಲನಾಣತಿಯಂತೆ ಮತ್ತೆ ತೆರಳುವನೆಂಬುದನು ಮರೆತು!

-ಪ್ರೇರಣೆ ರೂಮಿ

19 April, 2014

ಪರಿಪೂರ್ಣ ಪ್ರೀತಿಯನ್ನು ಸೃಷ್ಟಿಸುವ ಬದಲಿಗೆ, ನಾವು ಪರಿಪೂರ್ಣವಾಗಿ ಪ್ರೀತಿಸುವವರ ಹುಡುಕಾಟದಲ್ಲಿ ಕಾಲಹರಣ ಮಾಡುತ್ತೇವೆ
- ಟಾಮ್ ರಾಬಿನ್ಸ್

17 April, 2014

ಆಕಾಶ ಮಲ್ಲಿಗೆ ಕವಿತೆ!

ಅವಳ ಮಡಿಲಲಿದ್ದವನು ಅದ್ಯಾವ ಮೋಹದ ಸೆಳೆತದಲಿ ಬಾನಿಗೆ ನೆಗೆದನೋ..
ಸಿಂಗಾರಿ ಚಂದ್ರಿಕೆಯ ನೀಳ ತೋಳಿನಲಿ ಸೆರೆಯಾದನೋ..
ಮುಗಿಲ ಮರೆಯಲಿ ಮರೆಯಾದ ಇಂದುವಿಗೀಗ ಲಜ್ಜೆ
ಬಿಕ್ಕಳಿಸುತಿಹ ಆಕಾಶಮಲ್ಲಿಗೆಯನು ಸಂತೈಸಿ ಹಾಸಿದಳು ವಸುಂಧರೆ ಸಜ್ಜೆ!

15 April, 2014

ಎಲ್ಲವೂ ಸ್ಪಷ್ಟ.. ಸತ್ಯ!


ನಮ್ಮೊಳಗಿನ ಕಸ ಕಲ್ಮಷ ಗುಡಿಸುತ್ತಾ ಒಳಹೋದಂತೆ..


ಸುರಂಗದಲ್ಲಿ ತನ್ನಿಂದ ತಾನೇ ಉರಿಯುವ ಹಣತೆಗಳು ಅಲ್ಲಲ್ಲಿ..


ಹಣತೆ ಚೆಲ್ಲುವ ಬೆಳಕಿನಲಿ ಸುಟ್ಟುಕೊಳ್ಳುತ್ತಾ ತೆರೆದುಕೊಳ್ಳುತ್ತದೆ ಸತ್ಯದ ಹಾದಿ..


ಬದುಕನು ಬದುಕುವ ಕಲೆಯ ಪಾಠ..


ಮನದಲಿ ಘರ್ಷಣೆ, ಮಂಥನ ಎಲ್ಲಾ ಮುಕ್ತಾಯ


ಜ್ಞಾನೋದಯ..


ಇದೀಗ ಎಲ್ಲವೂ ಸ್ಪಟಿಕದಂತೆ ಸ್ಪಷ್ಟ!

14 April, 2014

ಲೋಕಾ ಸಮಸ್ತ ಸುಖಿನೋ ಭವಂತು!


ಒಲವೇ,

ಅರಿತವರು ಹೇಳುತ್ತಾರೆ..
ಜಗತ್ತೊಂದು ಮಾರ್ದನಿಸುವ ಗುಹೆಯಂತೆ..
ನಮ್ಮ ಮಾತು ನಮಗೆ ಮತ್ತೆ ತಲುಪುತ್ತದೆ.. ಮತ್ತೆ ಮತ್ತೆ ಪ್ರತಿಧ್ವನಿಸುತ್ತದೆ.
ಒಳ್ಳೆಯ ಮಾತು ಮತ್ತೆ ಕೇಳಲು ಖುಷಿಯಾದರೆ,
ಕೆಟ್ಟ ಶಬ್ದಗಳ ಮಾತು ಅಸಹ್ಯವಾಗುತ್ತದೆ.

ಬುದ್ಧನು ಅನ್ನುತ್ತಾನೆ,
ನಾ ಬೈಗುಳನ್ನು ಸ್ವೀಕರಿಸಿಲ್ಲ..
ಅದು ಮತ್ತೆ ಬೈದವನಿಗೇ ಸೇರುತ್ತದೆ!
ಹಾಗಾಗಿ,

ಹೊಸ ಮುಂಜಾವಿನ ಬೆಳಕಿನಿಂದ ಜಗತ್ತನ್ನು ಬೆಳಗಲು ತರಲು ಮೊದಲು ನಮ್ಮ ಯೋಚನೆಗಳಲ್ಲಿ, ಯೋಜನೆಗಳಲ್ಲಿ ಬದಲಾವಣೆಗಳನ್ನು ತರಲು ಯತ್ನಿಸೋಣ!

Lets change our thoughts to change the world!

#sarve_janaH_sukhino_bhavantu

#loka_samasta_sukhino_bhavantu

ಎಲ್ಲವೂ ನೀನೇ ಒಲವೇ.. ನನಗೆಲ್ಲವೂ!

ಒಲವೇ,
ಗಾನದೊಳಗಿನ ರಾಗ ನೀನು..
ಮಾತಿನೊಳಗಿನ ಮೌನ ನೀನು..
ದೇಹದೊಳಗಿನ ಪ್ರಾಣ ನೀನು..
ಆಹಾರದೊಳಗಿನ ಹಸಿವು ನೀನು..
ಪ್ರಕೃತಿಯ ಆತ್ಮ ನೀನು..
ಹೂವಿನೊಳಗಿನ ಜೇನು ನೀನು..
ಬುವಿಯ ಸ್ವರ್ಗ ನೀನು..
ನನ್ನೊಳಗಿನ ನಾನು ನಿನ್ನಿಂದಲೇ..

ನಿನ್ನ ಹೊರತು ಬದುಕೆಲ್ಲಿ ನನಗೆ!

12 April, 2014

ಒಲವಿನ ಅನುಭೂತಿ

ಒಲವೇ,
ಅಂದೆಂದೋ  ನೀ ಹೇಳಿದು ನೆನಪಾಯ್ತು..
ಮತ್ತದು ಇದೀಗ ಅರ್ಥವೂ ಆಯ್ತು..
“ಗೋಚರವಾದುದೆಲ್ಲವೂ ಸ್ಪಷ್ಟವಲ್ಲ..
ಅಗೋಚರವಾದರೂ ನೀ ಕಾಣುವಿ ನನ್ನಿರವನ್ನು
ಅನುಭೂತಿಗೆ ದಕ್ಕುವುದು ಒಳ ಇಂದ್ರಿಯಗಳ ತೆರೆದಿಡುವಿಕೆಯಿಂದ!”

ಕಾವು-ಆವಿ!

ಒಲವೇ,

ನಿನ್ನೊಲುಮೆಯ ಕಾವು
ನನ್ನೊಳು ತುಂಬಿರಲು
ಕ್ಷಣ ಮಾತ್ರದಲಿ ಆದಿತು
ದುಃಖ-ದುಮ್ಮಾನ ಆವಿ!

-ಪ್ರೇರಣೆ ರೂಮಿ

09 April, 2014

ವೈರಸ್ ಸ್ನೇಹ!



ವೈರಸ್ ಸ್ನೇಹ...
------------------

“Do you know me? Why did you send me a virus infected file? “

 2004ರಲ್ಲಿ ಅದೇ ತಾನೇ ಕಂಪ್ಯೂಟರ್ ಎ ಬಿ ಕಲಿಯಲು ಆರಂಬಿಸಿದೆನಷ್ಟೇ! ಮೊದಲ ಬಾರಿಗೆ ಹೊಸ ಐಡಿ! ಮೈಲ್ ಅಕೌಂಟ್ ಆರಂಭಿಸಿದ ಹುಮ್ಮಸ್ಸು.. ಹಿಂದಿನ ದಿನ ಏರ್‌ಟೆಲ್ (ಆವಾಗ ಟಚ್ ಟೆಲ್) ಫೋನು ಕನೆಕ್ಷನ್ ಹಾಕಿ, ಅವರದೇ ಫ್ರೀ ಐದು ಮೈಲ್ ಐಡಿ ಕೊಟ್ಟಿದ್ದರು. ಅವರದೇ ಪಾಸ್ವರ್ಡ್.. ಅದೇ 123456!!! ಬದಲಿಸಿ ಅಂತ ಹೇಳಿದ್ದರೂ, ಮತ್ತೆ ಬದಲಿಸೋಣ ಅಂತ ಮಾಡಿರಲಿಲ್ಲ.

ಈ ಮೇಲಿನ ಸಂದೇಶ ಹೊತ್ತ ಮೈಲ್ ಬಂದಾಗ ಎದೆ ಧಸ್ ಅಂದಿತು! ಕ್ಷಣ ಮಾತ್ರಕ್ಕೆ ಅಯ್ಯೋ ಇದೆಲ್ಲಾ ಏನು? ಇನ್ನು ಪೋಲಿಸು ಕೇಸು ಆಗುತ್ತಾ! ಮೊದಲ ಚುಂಬನಕ್ಕೆ ದಂತ ಭಗ್ನ!!!

ಬಹುಶಃ ನಾನು ಕೈಗಳೆರಡನು ಜೋಡಿಸಿ 5’6”ದೇಹವನ್ನು ಹಿಡಿಯನ್ನಷ್ಟಾಗಿ ಮಾಡಿದ್ದು ಅವರಿಗೆ ನನ್ನ ಉತ್ತರದಲ್ಲೇ ಕಾಣಿಸಿರಬೇಕು!

ಅದ್ಯಾರೋ ನನ್ನ ಐಡಿಯಿಂದ ವೈರಸ್ ಕಳಿಸಿದ್ದರು! ಜೋಸ್ಲಿನ್ ನನ್ನ ಮಾತನ್ನು ನಂಬಿದರು. ಮೊದಲು ಪಾಸ್‌ವರ್ಡ್ ಬದಲಾಯಿಸಿದೆ.. ನಂತರ ನಮ್ಮ ಮೈತ್ರಿ ಬೆಳೆಯಿತು. ಆಕೆಗೋ ಅದು ಸಹಜ! ನನಗೋ ನಮ್ಮ ಮೈತ್ರಿ ಒಂದು ಅಚ್ಚರಿ!

ಕಂಪ್ಯೂಟರ್‌ನ್ ತಲೆಬುಡ ತಿಳಿಯದವಳು ನಾನು..

ಆಕೆ ಕಂಪ್ಯೂಟರ್ ಇಂಜಿನಿಯರ್!

ತನ್ನದೇ ಒಂದು ಐಡೆಂಟಿಯಿರದ, ಯಾವುದೇ ಸಾಮಾಜಿಕ ಸ್ಟೇಟಸ್ ಇರದವಳು ನಾನು

ಆಕೆ ಒಂದು ಸಕ್ಸೆಸ್‌ಫುಲ್ ಕಂಪೆನಿಯಲ್ಲಿ ಒಳ್ಳೆಯ ಪದವಿಯಲ್ಲಿರುವವಳು..

ಆದರೂ ನಮ್ಮ ಸ್ನೇಹ ಬೆಳೆಯಿತು.. ಅದೇನೂ ನಿತ್ಯವೂ ಮಾತುಕತೆ ಇರಲಿಲ್ಲ. ಆದರೂ ಹೊಸ ಮಾಹಿತಿ, ಹೊಸ ರುಚಿಯ ಅಡುಗೆ ವಿಧಾನಗಳು..ಹ್ಮ್, ಏನೋ ಒಂದು ನೆವನ ಬೇಕಿತ್ತು!

ನನಗಂತೂ ಈ ಸ್ನೇಹ ಸಿಕ್ಕಿದು ಒಂದು ನಿಧಿ ಸಿಕ್ಕಿದ ಹಾಗೆ ಇತ್ತು.  ನನ್ನೆಲ್ಲಾ ಸ್ನೇಹಗಳಿಗೂ ಅವರು ಬೆಲೆ ಕೊಡಲಿ ಕೊಡದಿರಲಿ, ನಾನಂತೂ ನನ್ನ ಅಭ್ಯಾಸದ ಹಾಗೆ ಇದಕ್ಕೂ ಗುಡಿ ಕಟ್ಟಿದ್ದೆ.

ಇವತ್ತು, “ಮಂಗಳೂರಿನಲ್ಲಿದ್ದೇನೆ, ಬರಲಾ?” ಎಂದ ಜೋಸ್ಲಿನ್ ನನಗೆ ಅಚ್ಚರಿಯುಂಟು ಮಾಡಿದಳು!

“ಶೀಲಾ ಬೆಳೆದ ಪರಿ ನನಗೆ ಅಚ್ಚರಿ! ತನ್ನಷ್ಟಕ್ಕೇ ತಂತ್ರಜ್ಞಾನ ಕಲಿತದಷ್ಟೇ ಅಲ್ಲ, ಅದರ ಫಲಿತಾಂಶ ಆಕೆಯ ಮನೆ ಗೋಡೆಯಲ್ಲಿ, ಆಕೆಯ ಚಟುವಟಿಕೆಯಲ್ಲಿ ಎದ್ದು ಕಾಣುತ್ತಿದೆ! I am very much surprised as well as happy to see her growth!”

ನನ್ನ ಪತಿಯ ಬಳಿ ಹೇಳುತ್ತಿದ್ದದನ್ನು ಕೇಳುವಾಗ ಮತ್ತೊಮ್ಮೆ ಆ ದಿನಗಳ ಏಳುಬೀಳುಗಳ ನೆನಪು ಹಸಿರಾಯಿತು. Trial and error... ಸಮಯ ಉಳಿಸಿ, ಹೊಸದನ್ನು ಕಲಿಯುವಾಗ..ಏರುತ್ತಿರುವ ಪ್ರಾಯದಲ್ಲಿ, ನೆನಪು ಕೈಕೊಡುವ ತೊಂದರೆಯಲ್ಲೂ ಕಲಿಯುವ ಹುಮ್ಮಸ್ಸು ಮಾಸಿರಲಿಲ್ಲ! ಕರ್ತವ್ಯಗಳು, ಮನೆಪಾಠ, ಜತೆಗೆ ಆಗಾಗ ಸಿಗುವ ಪೈಂಟಿಂಗ್ ಕೆಲಸಗಳು ಎಲ್ಲವನ್ನೂ ನಿರ್ವಹಿಸುವುದರ ಜತೆಗೆ ಬ್ಲಾಗ ಬರಹ ಹಿಂದಕ್ಕೆ ಬೀಳುತ್ತಿತ್ತು. ಬ್ಲಾಗ್ ಓದು, ಜತೆಗೆ ಫೇಸ್ ಬುಕ್ ನನ್ನ ಬದುಕಿನಲ್ಲಿ ಬರಹ ಮತ್ತು ಫೋಟೊಗ್ರಾಫಿಗೂ ಸ್ಥಾನ ಕೊಟ್ಟಿತು!

“Shiela, I know secret of your beauty! Your inner happiness reflects .. that’s it!”

ಒಪ್ಪಿದೆ ಜೋಸ್ಲಿನ್ ಮಾತನ್ನು!

ಹೀಗೇ ವೈರಸ್ ಒಂದು ಸ್ನೇಹಕ್ಕೆ ಕಾರಣವಾಗುತ್ತದೆ ಅಂತ ಹೇಳಿದ್ರೆ ಯಾರೂ ನಂಬಲಾರರು!

08 April, 2014

ರಾಮ ರಾಮ..

ಜಿನಕೆ ಹೃದಯ ಶ್ರೀರಾಮ ಬಸೆ
ಉನ  ಔರಕ ನಾಮ ಲಿಯೆ ನಾ ಲಿಯೆ
ಜಿಸ ಲೋಕ ಮೆ ರಾಮಕ ಧ್ಯಾನ ಧರೆ
ಪರ ಲೋಕ ಕಾ ಧ್ಯಾನ ಕಿಯೇ ನಾ ಕಿಯೇ|| ಶ್ರೀ ರಾಮ ಸಿಯ ರಾಮ||

ಶಬರಿ ಕೆ ಆಪ ಉದ್ಧಾರಕ ರಾಮ
ರಘುಕುಲ ಮರ್ಯಾದ ಪಾಲಕ ರಾಮ
ಶಿವ ಪೂಜಕ ರಾಮ ವಿಶ್ವ ರೂಪಕ ರಾಮ
ಔರ ಭಯ ಪ್ರಕೋಪ ಸಂಹಾರಕ ರಾಮ
ಜಿನ ರಾಮ ಚರಣ ಶರಣಾಗತ ಹೋ
ಉನ ತೀರಥ ಪೂರ್ಣ ಕಿಯೇ ನಾ ಕಿಯೇ|| ಶ್ರೀರಾಮ ಸಿಯ ರಾಮ||

ಏಕ ಸತ್ಯ ಅಖಂಡ ಪ್ರಚಾರಕ ರಾಮ
ಧರ್ಮ ನ್ಯಾಯ ನೀತಿ ಪರಿವಾಹಕ ರಾಮ
ಸಂತನ ಕಾಹೇ ಉಪದೇಶ ಹೀ
ಮನವಾಂಚ್ಛಿತ ಫಲಕೆ ದಾಯಕ ರಾಮ
ಜಿನ ರಾಮ ಕ ವೈಭವ ಮಾನ ಲಿಯೇ
ಧನ ಸಂಪತ್ತಿ ಮಾನ ದಿಯೇ ನ ದಿಯೇ ||ಶ್ರೀರಾಮ ಸಿಯ ರಾಮ ||

ಜನಹಿತ ಕೆ ಹೇ ತು ರಾಮ ಜನ್ಮೆ
ಖುದ ಕ್ಲೇದ ಕ್ಲೇಷ ಸ್ವೀಕಾರ ಕೀಯ
ರಾವಣ ಕುಲ ಕಾ ಸಂಹಾರ ಕೀಯ
ಔರ ಪತಿತೋ ಕಾ ಉದ್ಧಾರ ಕೀಯ
ಜಿನಕೀ ಜಿವ್ಹಾನ ರಾಮ ಭಜೆ
ವೋ ಮಾನವ ಚಾಹೆ ವೊ ಜಿಯೇ ನಾ ಜಿಯೇ||ಶ್ರೀ ರಾಮ ಸಿಯ ರಾಮ ||

ಜಿನ ರಾಮ ಚರಿತ ಸುನತೆ ಆಯೇ
ಹಾ ಕ್ಲೇಷ ಮಿಠೆ ಉನಕೆ ಮನಕಾ
ಬಾದಾ ವಿಪದಾಯೆ ದೂರ ಹಠೆ
ಸಂಕೋಚ ಹಠೆ ನಶ್ವರ ತನಕಾ
ಕಹೆ ಶ್ಯಾಮ ತಿಹಾರೋ ದಾಸ ಅಮರ
ನರ ವೋ ಅಮೃತ ಪಿಯೆ 

07 April, 2014

ಒಲವಿನ ಪ್ರಭಾವಳಿ!

ಒಲವೇ,

ಅಡ್ಡ ಹಿಡಿದಿವೆ ನನ್ನೀ ದುರ್ಬಲ ಕೈಗಳು ಎದುರಿಸಲಾಗದೇ
ಮೋಡಿ ಮಾಡುವ ನಿನ್ನೀ ಜೋಡಿ ಕಪ್ಪು ಕಂಗಳನು
ಒಲವಿನ ಸಹಜ ಪವಾಡವನು ತಡೆಯಲು ಸಾಧ್ಯವೇ
ಉಜ್ವಲ ಪ್ರಭೆ ಹೊಮ್ಮಿದೆ ನನ್ನ ಅಣು ಅಣುಗಳಿಂದ!

-ರೂಮಿ


So often I put up my hands
To shield my eyes from You
Wild hilarious Miracle!
Your Light shines through my bones.
~Rumi

06 April, 2014

ನಭಾವಗಳ ಸಂಗಮ!


 ಒಲವೇ
ಮುಂಜಾವು ಮುಸ್ಸಂಜೆಗಳ ರಂಗು ಚೆಲ್ಲಾಡಿದೆ
ಮನಬೆಳಗುವ ಬೆಳಕನ್ನು ನಲ್ಲಿರುಳಿನಲ್ಲಿ
ಮೈಮನದಲ್ಲೀಗ ನವಭಾವಗಳ  ಸಂಗಮ!

02 April, 2014

ಅನುಭೂತಿ


ಭಗವಂತನ ನಿಜ ಆರಾಧಕರ ಕಾಣಿರುವಿರೇನು

ಘನತೆ ಮತ್ತು ಸದ್ಗುಣಗಳೇ ಅವರ ಹೆಜ್ಜೆ ಗುರುತುಗಳಂತೆ..

ಕಾಲದ ಹಿಡಿತದಲ್ಲಿಲ್ಲ ನಾನೀಗ!

ಒಲವೇ,
ರಾಗ ಅನುರಾಗಗಳ ಸಂಗಮದ ಕಾಲುವೆಯಲ್ಲಿ ಈಜುತ್ತಾ
ಮುಂದೆ ಮುಂದೆ ಸಾಗುತ್ತಿದ್ದೇನೆ.
ಆಹಾ! ದೂರ, ಬಲು ದೂರ ಸಾಗಿದ್ದೇನೆ..

ಕಾಲನ ಹಿಡಿತದಲ್ಲಿಲ್ಲ ನಾನೀಗ!

ಋತುಗಳಿಗನುಗುಣವಾಗಿ ಬದಲಾಗದು ನನ್ನೊಲವು..

ಒಲವೇ,

ನೀನೊಂದು ಮುಳ್ಳುಗಳಿಲ್ಲದ ಮೆದು ಹಸಿರೆಲೆಯ 
ಗಿಡದಲಿ ನಸುನಗುವ ಕೆಂಬಣ್ಣದ ಗುಲಾಬಿ
ಕುಳಿರ್ಗಾಳಿಯ ಶಿಶಿರದಲೂ ಅರಳುವಿ..
ಸುಡುವ ವೈಶಾಖದಲೂ ತಂಪೆನ್ನೆರೆಯುವಿ
ಧೋ ಸುರಿಯುವ ಶ್ರಾವಣವನೂ ಮೀರಿದೆ ನಿನ್ನ ಮಾರ್ದನಿ
ಬದಲಾಗುವ ಋತುಗಳಿಗೆ ಮಣಿಯದ ಛಲ ನಿನ್ನದು
ನಿನಗೆ ನಿತ್ಯವೂ ವಸಂತ ಮಾಸವೇ..
ಅದೇ ನಾ ನಿನಗೊಲಿದ ಕಾರಣವೇ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...