“ಅಮ್ಮಾ, ಹೇಳು ನಾನೀಗ ಏನ್ ಮಾಡ್ಬೇಕು? ಸೈಂಟ್ ಜೋಸೆಫ್ ನಲ್ಲಿ ಇ ಎಂಡ್ ಸಿ ಸೀಟ್
ಇದೆ. ನಿಟ್ಟೆಯಲ್ಲಿ ಐ ಎಸ್ ಮಾತ್ರ ಉಳಿದಿದೆ! “
“ನಿಟ್ಟೆ ಮತ್ತು ಐ ಎಸ್”
4 ವರ್ಷದ ಹಿಂದೆ ಬೆಂಗಳೂರಿನ ಸಿ ಇ ಟಿ ಸೆಂಟರ್
ನಿಂದ ಮಗನ ಫೋನು ಮಂಗಳೂರಿನಲ್ಲಿರುವ ನನಗೆ. ನನಗೆ ತರಗತಿಗಳಿರುವ ಕಾರಣ ನಾನು ಅವನ ಜತೆ ಬೆಂಗಳೂರಿಗೆ
ಅವನ ಅಪ್ಪನವರನ್ನೇ ಕಳುಹಿಸಿದ್ದೆ. ಆದರೆ ಕಾಲೇಜಿನ ಬಗ್ಗೆ ನನ್ನದೇ ನಿರ್ಧಾರ ಕೊನೆಯದಾಗಿರುವುದರಿಂದ
ಅವನು ನನಗಲ್ಲಿಂದ ಫೋನು ಮಾಡಿ ಸೀಟು, ಕಾಲೇಜಿನ ಬಗ್ಗೆ ಮಾಹಿತಿ ಕೊಡುತ್ತಿದ್ದ. ನನ್ನದು ಒಂದೇ
ಮಾತು- autonomous college ಆಗಿದ್ದ ನಿಟ್ಟೆ ಮಾತ್ರ ನನ್ನ ಆಯ್ಕೆ. 3ನೇತರಗತಿಯಲ್ಲೇ
ಅವನ ನಡವಳಿಕೆಯಿಂದ ನಾನು ಅವನ ಆಸಕ್ತಿಯನ್ನು ಕಂಡುಕೊಂಡಿದ್ದೆ. ಅಲ್ಲದೆ ಅವನ ಆಸಕ್ತಿಗೆ
ಪ್ರೋತ್ಸಾಹವನ್ನೂ ಆದಷ್ಟು ಕೊಡುತ್ತಿದ್ದೆ. ಇಲೆಕ್ಟ್ರಿಕಲ್ ಅವನ ಆಸಕ್ತಿಯ ವಿಷಯವಾಗಿತ್ತು.
ಕೊನೆಗೂ ನಿಟ್ಟೆಯಲ್ಲಿ ಅವನ ಇಷ್ಟದ ವಿಷಯದಲ್ಲೇ ಸೀಟು ಸಿಕ್ಕಿತು. ಹೊರಗೆ ಧೈರ್ಯ
ತೋರುತ್ತಿದ್ದೆನಾದರೂ ನನಗೆ ಒಳಗೊಳಗೆ ಸ್ವಲ್ಪ ಹೆದರಿಕೆ ಇದ್ದಿತ್ತು. ಭಂಡ ಧೈರ್ಯ ತೋರಿ ಅವನನ್ನೂ
ಮಗಳನ್ನೂ ಯಾವುದೇ ಕೋಚಿಂಗ್ ತರಗತಿಗೆ ಕಳುಹಿಸಲಿರಲಿಲ್ಲ.
ಕಾಲೇಜಿನಲ್ಲೂ ಒಳ್ಳೆಯ ಪಾಠ ಪ್ರವಚನಗಳಿರಲಿಲ್ಲ, ಕೊನೆಗೂ ಜನವರಿಯಲ್ಲಿ ಪುಸ್ತಕ
ಕೈಗೆತ್ತಿಕೊಂಡದನ್ನು ಕಂಡು ನೆಮ್ಮದಿಯ ಉಸಿರು ಬಿಟ್ಟಿದ್ದೆ. 93% ತೆಗೆದುಕೊಂಡು
ನನ್ನ ಮಾನ ಉಳಿಸಿದ! ಸಿ ಇಟಿಯಲ್ಲೂ 3,000 ಚಿಲ್ಲರೆಯ ರ್ಯಾಂಕು ತೆಗೆದುಕೊಂಡಿದ್ದ. ಇಲ್ಲಿಯ ತನಕ ಪ್ರತೀ ವರ್ಷ 9ಕ್ಕಿಂತ
ಹೆಚ್ಚಿನ ಗ್ರೇಡ್ ತೆಗೆದುಕೊಂಡಿದ್ದಾನೆ. ಅನೇಕ ಪ್ರಾಜೆಕ್ಟ್ ಕೆಲಸದಲ್ಲಿ ಭಾಗಿಯಾಗಿದ್ದಾನೆ.
ಕೆಲವು ಕಂಪೆನಿಗಳ ಕೆಲಸವನ್ನೂ ಮಾಡಿದ್ದಾನೆ. ಲೋಗೋ ಡಿಸೈನ್, ಟಿ ಶರ್ಟ್ ಡಿಸೈನ್... ಹೀಗೆ ಅಮ್ಮ
ಅಪ್ಪನಿಗೆ ಹೆಮ್ಮೆ ತರುವಂತಹ ಕೆಲಸಗಳನ್ನು ಮಾಡಿದ್ದಾನೆ. ನಾಲ್ಕು ವರ್ಷಕ್ಕೆ ಇನ್ನೂ ನಾಲ್ಕು
ತಿಂಗಳು ಬಾಕಿ ಉಳಿದಿದ್ದಂತೆಯೇ ತನ್ನ ಇಂಜಿನಿಯರಿಂಗ್ ಕೋರ್ಸನ್ನು ಮುಗಿಸಿ ಮನೆಗೆ ಮರಳಿದ್ದಾನೆ. ನಿನ್ನೆ
ಎರಡು ವಾರಗಳ ನಂತರ ಬಂದ ಅವನನ್ನು ನೋಡಿ ಆದ ಖುಷಿ ಅಷ್ಟಿಷ್ಟಲ್ಲ, ಜತೆಗೆ ನೆಮ್ಮದಿಯೂ!
No comments:
Post a Comment