ಬದುಕಿರುವೆನು ನಿನಗಾಗಿ ನಲ್ಲೆ, ಹೊಲೆದು ತುಟಿಗಳನು
ಬದುಕಿರುವೆನು ನಿನಗಾಗಿ ನಲ್ಲ, ನುಂಗಿ ಕಂಬನಿಗಳನು
ಆದರೂ ಅನುರಾಗದ ಹಣತೆಯನು ಬೆಳಗಿ
ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲೆ
ನಿನಗಾಗಿಯೇ ನಿನಗಾಗಿಯೇ||
ಬದುಕಿರುವೆನು ನಿನಗಾಗಿ ನಲ್ಲ, ನುಂಗಿ ಕಂಬನಿಗಳನು
ಬದುಕಿರುವೆನು ನಿನಗಾಗಿ ನಲ್ಲೆ, ಹೊಲೆದು ತುಟಿಗಳನು
ಆದರೂ ಅನುರಾಗದ ಹಣತೆಯನು ಬೆಳಗಿ
ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲ
ನಿನಗಾಗಿಯೇ, ನಿನಗಾಗಿಯೇ||
ಮತ್ತೆ ವಿಧಿ ನಿನ್ನೆಯ ದಿನಗಳ ಹೊತ್ತಗೆ ಮರಳಿಸಿವೆ
ಆಳವಾಗಿವೆ ನಮಗೀಗ ನೆನಪುಗಳ ಲೆಕ್ಕಗಳು
ಎಷ್ಟೊಂದು ಉತ್ತರಗಳು ಪ್ರಶ್ನೆಗಳ ಕೇಳದೆ
ಬಯಸಿದೇನು, ದೊರೆತದೇನು ನೋಡಿ ನಮಗೀಗ
ಆದರೂ ಅನುರಾಗದ ಹಣತೆಯನು ಬೆಳಗಿ
ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲೆ||
ನಿನಗಾಗಿಯೇ, ನಿನಗಾಗಿಯೇ||
ಏನು ಹೇಳಲಿ ಈ ಲೋಕ ಹೇಗೆ ಮೋಸ ಮಾಡಿತು
ಪಾಲಿಸಿದೆನಾನಾ ಅಪ್ಪಣೆ ಜೀವಿಸಿದೆ
ನೀನಿಲ್ಲದೆ
ಮುಗ್ಧರವರು ಅನ್ನುವರಲ್ಲ ನೀ ನನಗೆ ಅಪರಿಚಿತೆ
ಪ್ರಿಯೆ, ಎಷ್ಟೊಂದು ನೋವುಗಳನಿತ್ತರು ಜನರು
ಆದರೂ ಅನುರಾಗದ ಹಣತೆಯನು ಬೆಳಗಿ
ಮನದೊಳಗೆ
ಬದುಕಿರುವೆನು ನಿನಗಾಗಿಯೇ ನಲ್ಲೆ
ನಿನಗಾಗಿಯೇ ನಿನಗಾಗಿಯೇ||
ಬದುಕಿರುವೆನು ನಿನಗಾಗಿ ನಲ್ಲೆ ಹೊಲೆದು ತುಟಿಗಳನು
ಬದುಕಿರುವೆನು ನಿನಗಾಗಿ ನಲ್ಲ, ಇಂಗಿಸಿ ಕಣ್ಣೀರನು
ಆದರೂ ಅನುರಾಗದ ಹಣತೆಯನು ಬೆಳಗಿ
ಮನದೊಳಗೆ
ಬದುಕಿರುವೆನು ಕೇವಲ
ನಿನಗಾಗಿಯೇ, ನಿನಗಾಗಿಯೇ,
ನಿನಗಾಗಿಯೇ, ನಿನಗಾಗಿಯೇ... ||
No comments:
Post a Comment