ಪ್ರತಿ ಮುಂಜಾನೆ ಕುಹೂ ಕುಹೂ ಎಂದು ನನಗಾಗಿಯೇ ಹಾಡುತ್ತಿದ್ದ ಈ ಗಂಡು ಕೋಗಿಲೆ ಇಂದು ಹೊಸದಾಗಿ ನಮ್ಮ ಅಂಗಳಕ್ಕೆ ಬಂದು ಕಿಕ್ ಕಿಕ್ ಎಂದು ಆ ಹೆಣ್ಣು ಕೋಗಿಲೆ ಕರೆದ ಕೂಡಲೇ ಸೀದ ಹಾರಿ ಹೋಯಿತು... ಆಗ ಹುಟ್ಟಿತು ಈ ಬರಹ! ಈ ಕೋಗಿಲೆಯ ಬಗ್ಗೆ ವಿಶೇಷ ಆಕರ್ಷಣೆ, ನಿತ್ಯ ಅದರ ಜತೆ ಮಾತು ಕತೆ, ವಿಪರೀತ ಹಚ್ಚಿಕೊಂಡಿದ್ದೆ. ಅದೂ ಹಾಗೆ ಹಚ್ಚಿಕೊಂಡಿದೆ ಎಂಬ ಭ್ರಮೆ...
ಒಲವೇ,
ನನ್ನದೆಲ್ಲವನ್ನೂ ನಿನಗೇ
ಅರ್ಪಿಸಿದ ಮೇಲೆ
ಮತ್ತಿನ್ನೇನಾದರೂ
ಉಳಿದಿದೆಯೇ ನನ್ನ ಬಳಿ
ನೀ ದೂರ ನಡೆಯುವುದನ್ನು
ನಾ ಕೇವಲ ನೋಡಬಲ್ಲೆ
ನಾ ತಡೆಯಲಾರೆ
ನನ್ನ ಹೇರಲಾರ
ಉಸಿರಿತ್ತವನು ದೂರ
ನಡೆದರೆ ಮತ್ತಿನ್ನೇನು
ಉಳಿಯುವುದು...
****************
ನೀ ಹಂಚಿದ ಹಾಗೆ
ನಾ ಹಂಚಬಲ್ಲೆನೆ
ನನ್ನೊಲವ
ಇನ್ನಾರಿಗಾದರೂ
ಕೇವಲ ನಿನಗೇ
ಅರ್ಪಣೆ ನನ್ನೀ
ಬದುಕು!
*****************
ಒಲವೇ,
ಕೇವಲ ನನ್ನವನೂ
ನೀ ಅಂದುಕೊಂಡೆ
ನನಗರಿವಾಗಲೇ ಇಲ್ಲ
ನೀ ಹಂಚಿದೆ
ನಿನ್ನೊಲವ ಮತ್ತ್ಯಾರಿಗೋ!
*********************
ಒಲವೇ,
ನಾ ಭ್ರಮೆಯಲ್ಲಿದ್ದೆನೆ
ಹೌದಲ್ಲ!
ನಾ ನಿನ್ನೊಲುಮೆಯ
ಮತ್ತಿನಲ್ಲಿ ತೇಲುತ್ತಿದ್ದೆ
ನನ್ನಾತ್ಮವನ್ನೇ ಅರ್ಪಿಸಿದ್ದೆ;
ನೆನಪಿತ್ತೆ ನೀ
ಕಾಲ ಕಳೆದಂತೆ
ಮತ್ತಿಳಿಯುವುದಲ್ಲ
ಆ ಆಕರ್ಷಣೆ
ಇನ್ನುಳಿಯುವುದಿಲ್ಲ...
ಮತ್ತಿನ್ಯಾರೋ ನಿನ್ನೊಲುಮೆ
ಪಡೆಯುವರಲ್ಲ!
***********
No comments:
Post a Comment