ಒಲವು,
“ನಾ
ನಿನ್ನ ಕನಯ್ಯ. ನೀ ಎನ್ನ
ರಾಧೆ”
ನಾನು,
“ಬೇಡವೋ
ನಾ ಆಗಲಾರೆ
ರಾಧೆ,
ಕನಯ್ಯ
ನೀ ಆಗಲೇ
ಬೇಡ
ಅವನೋ
ಬಲು ಮೋಸಗಾರ
ಬೆಣ್ಣೆ ಕೊಟ್ಟರೆ ಸಾಕವಗೆ
ಬೆಣ್ಣೆ ಕೊಟ್ಟರೆ ಸಾಕವಗೆ
ಆಗುವನು ಅವರಿವರ ದಾಸ
ನೀನಾಗು ಎನ್ನ ಪರಮೇಶ
ನಾನಾಗುವೆ ನಿನ್ನ ಪರಾಶಕ್ತಿ
ಮಾತು ಮತ್ತು ಅರ್ಥಗಳಂತೆ
ಸದಾ ಜತೆಯಲಿ ಬಾಳೋಣ!"
ಮಾತು ಮತ್ತು ಅರ್ಥಗಳಂತೆ
ಸದಾ ಜತೆಯಲಿ ಬಾಳೋಣ!"
No comments:
Post a Comment