ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

21 October, 2012

ಬರೆದದ್ದು ಮಗಳು, ಕೋಡು ಮೂಡಿದ್ದು ಅಮ್ಮನಿಗೆ
ಇವತ್ತು ಪವಾಡ ನಡೆಯಿತು ಅಂತಲೇ ಹೇಳಬಹುದು....ನನ್ನ ಮಗಳು ಕವಿತೆ ಬರೆದಳು...ಅಂದರೆ ಹಿಂದೆ ಬರೆದಿಲ್ಲವೆಂದಲ್ಲ...ಎರಡು, ಮೂರು ಸಾಲಿನ ಚುಟುಕುಗಳನ್ನು ಬರೆದಿದ್ದಳಾದರೂ ಅದನ್ನು ರೂಢಿಸಿಕೊಂಡು ಹೋಗುವ ಮನಸಿರಲಿಲ್ಲ...ನಾನಂತು ಹೇಳಿ ಹೇಳಿ ಸೋತಿದ್ದೆ. ಪ್ರತಿಭಾವಂತೆಯಾದರೂ ಮನೆತನದ ಬಳುವಳಿಯಾದ ಆಲಸ್ಯ ಅವಳಿಗೆ ಸ್ವಲ್ಪ ಹೆಚ್ಚೇ ಇತ್ತು...ನೃತ್ಯ(ಚಲನ ಚಿತ್ರ) ಮತ್ತು ಸಂಗೀತ( ಆಂಗ್ಲ, ಹಿಂದಿ ಚಲನಚಿತ್ರ) ಇವೆರಡು ಬಿಟ್ಟು ಮತ್ಯಾವುದರಲ್ಲಿ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ...ಅಂತವಳು ಇಂದು ತಾನಾಗಿಯೇ ಕವನ ಬರೆದು ನನಗೆ ತೋರಿಸಿದಾಗ ನನ್ನ ಆನಂದಕ್ಕೆ ಮಿತಿಯೇ ಇರಲಿಲ್ಲ. 
ಇಲ್ಲಿದೆ ನೋಡಿ ಅವಳ ಕವನ!

Unaware of who I was,

Spending time doing things of loss.

You made the real 'me' come alive,

Bringing within me the motive, the drive.

Now I realise how stupid I was,

Giving opportunities for people to boss.

And now that you've done so much for me,

Its time for me to pay back the same to you.

Do not know the 3W's-where, when and what,

But I assure you I'll make you Proud!

6 comments:

Shivakumar said...

ಕವನ ಚೆನ್ನಾಗಿದೆ. ಆದರೆ ಮಗಳನ್ನು ಕನ್ನಡ ಓದು ಸಂಗೀತ ಸಿನೆಮಾಗಳಿಂದ ದೂರ ಮಾಡಿ(ಅಥವಾ ದೂರ ಆಗುವಂತೆ) ಬೆಳೆಸಿದ್ದೀರೇನೋ ಅನ್ನಿಸಿತು. ತಪ್ಪಾಗಿದ್ರೆ ಕ್ಷಮಿಸಿ.

ಶೀಲಾ said...

ನಮಸ್ಕಾರ ಶಿವಕುಮಾರ ಅವರೇ,
ಖಂಡಿತ ತಪ್ಪು ತಿಳಿಯುವುದಿಲ್ಲ. ನನ್ನ ಮಗಳಿಗೆ ಕನ್ನಡ ಚೆನ್ನಾಗಿ ಬರುತ್ತದೆ...ಆದರೆ ಅವಳು ಕಲಿಯುವ ಮಾಧ್ಯಮ ಆಂಗ್ಲವಾದುದರಿಂದ ಅದನ್ನೇ ಹೆಚ್ಚಾಗಿ ಬಳಸಿ ಕನ್ನಡದಲ್ಲಿ ಶಬ್ದ ಬಳಸುವಾಗ ಹಿಡಿತ ತಪ್ಪುತ್ತದೆ. ಕನ್ನಡ ಪದ್ಯ, ಸಿನೇಮಾ ಹಾಡು, ಹೆಚ್ಚೇಕೆ ಸಿನೇಮಾ ಕೂಡ (ಒಳ್ಳೆಯದಿದ್ದರೆ ಮಾತ್ರ) ನೋಡುತ್ತಾಳೆ. ಬಹುಶಃ ನನ್ನ ಮಗ, ಮಗಳು ನೋಡಿದಷ್ಟು ನಾನು ಕನ್ನಡ ಚಲನಚಿತ್ರ ನೋಡಿಲ್ಲ.ಶಾಸ್ತ್ರೀಯ ಸಂಗೀತ ತರಬೇತಿ ಪಡೆದಿದ್ದಾಳೆ. ಶಾಸ್ತ್ರೀಯ ನೃತ್ಯ ಮಾಡಿದ್ದಾಳೆ..ಆದರೆ ಅವಳ ಆಸಕ್ತಿ ಮಾತ್ರ ನಾನು ಹೇಳಿದ ಹಾಗೆ ಬೇರೆ. ನನ್ನ ಇಷ್ಟವನ್ನು ನಾನು ಮಕ್ಕಳ ಮೇಲೆ ಹೇರಲು ಬಯಸದ ಕಾರಣ ಅವರನ್ನು ಸ್ವತಂತ್ರವಾಗಿ ಬಿಟ್ಟಿದ್ದೇನೆ. ಹಾಗೆ ನೋಡಿದರೆ ನಮ್ಮ ಮನೆತನದಲ್ಲಿ ನನ್ನ ಹಾಗೆ ಸಾಹಿತ್ಯ, ಕಲೆ, ಛಾಯಾಚಿತ್ರಗಳ ಮೇಲೆ ಆಸಕ್ತಿ ಬೇರೆ ಯಾರಿಗೂ ಇಲ್ಲ..ನನಗೆ ಯಾರೂ ಗಾಡಫಾದರ್ ಕೂಡ ಇರಲಿಲ್ಲ..ಆದರೂ ನಾನು ನನ್ನಷ್ಟಕ್ಕೆ ಬೆಳೆಯುತ್ತ ಬಂದಿದ್ದೇನೆ. ಸ್ವಲ್ಪ ಹೆಚ್ಚೇ ಮಾತನಾಡಿದೆ. ಈಗ ಕ್ಷಮೆ ಕೇಳುವ ಸರದಿ ನನ್ನದು.

Shivakumar said...

ಶೀಲಾ ಅವರೇ, ನಿಮ್ಮ ಉತ್ತರಕ್ಕೆ ಧನ್ಯವಾದಗಳು. ನಮ್ಮ ಇಷ್ಟವನ್ನು ಹೇರಿ ಮಕ್ಕಳನ್ನು ಬೆಳೆಸಬೇಕಾಗಿಲ್ಲ ಖರೆ, ಹಾಗಂತ ಅವರನ್ನು ಅವರಿಗಿಷ್ಟವಾದದ್ದು ಮಾಡಿಕೊಳ್ಳಲಿ ಎಂದು ಬಿಟ್ಟರೆ ಈಗಿನ ಕಾಲದಲ್ಲಿ, ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ಹೊರ ಆಕರ್ಷಣೆಗಳೇ ಜಾಸ್ತಿಯಿರುವುದರಿಂದ ಅದರ ಕಡೆಗೆ ವಾಲಿಬಿಡುತ್ತಾರೆ. ಶಾಸ್ತ್ರೀಯ ಸಂಗೀತ, ನೃತ್ಯ ಗೊತ್ತಿರುವ ಎಷ್ಟೋ ಮಕ್ಕಳು ನಾಲ್ಕು ವಾಕ್ಯ ಕನ್ನಡ ಮಾತನಾಡಲು, ಬರೆಯಲು ತಡವರಿಸುವುದನ್ನು ನೋಡಿದ್ದೇನೆ. ಆದ್ದರಿಂದ ಪೋಷಕರು ಪೂರಕ ವಾತಾವರಣ ನಿರ್ಮಿಸಿಕೊಟ್ಟರೆ ಮಕ್ಕಳು ತಾವಾಗೇ ನಮ್ಮ ಭಾಷೆ, ಸಂಸ್ಕೃತಿಯಲ್ಲಿ ಆಸಕ್ತಿ ತಾಳುತ್ತಾರೆ ಎಂದು ಹೇಳುವುದಷ್ಟೇ ನನ್ನ ಉದ್ದೇಶ. ನಿಮ್ಮ ಬ್ಲಾಗಿನ ಲೇಖನಗಳನ್ನು ನೋಡಿದರೆ ಆ ಸಂಸ್ಕಾರಕ್ಕೇನೂ ಕೊರತೆ ಇಲ್ಲ ಅನ್ನಿಸುತ್ತದೆ. ಒಳ್ಳೆಯದಾಗಲಿ. ವಂದನೆಗಳು.

ಶೀಲಾ said...

ಶಿವಕುಮಾರ, ತಮ್ಮ ಕಳಕಳಿಯ ಮಾತುಗಳು ನೇರವಾಗಿ ಹೃದಯವನ್ನು ತಟ್ಟಿತು. ನೀವು ಹೇಳಿದ್ದು ೧೦೦% ನಿಜ...ಅಂತೆಯೇ ನಾನೂ ನನ್ನಿದಾದಷ್ಟು ಪ್ರಯತ್ನನೂ ಮಾಡಿದ್ದೇನೆ....ಆದರೂ ಎಲ್ಲೋ ಏನೋ ತಪ್ಪಾಗಿದೆ...ಏನು ಮಾಡುವುದು. ಹುಲು ಕಡ್ಡಿಯಂತವರು ನಾವು. ಕೊನೆಗೂ ಅವನ ಇಚ್ಛೆಯೇ ನಡೆಯುವುದಲ್ಲವೆ. ಮತ್ತೊಮ್ಮೆ ಧನ್ಯವಾದ!

supreeth s said...

Very sweet poem. I feel language does not matter as long as she has the capability to express which is what you should be proud of. Language is just a choice of expression :)

ಶೀಲಾ said...

Thanks for for those nice words Supreeth. BTW, I visited ur blog...nice! my daughter to read ur kanglish poems...we had good time.
I agree with ur point of view....Yes, .

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...