ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

28 August, 2014

ಚಿಟ್ಟೆ!

Blue tiger moth
dysphania palmyra



Common Mormon
Papilio polytes




ಚಾರಿತ್ರ್ಯ ಬಹಳ ಮುಖ್ಯ!

ಯಶಸ್ಸಿಗೆ ಮತಿಗಿಂತ ಚಾರಿತ್ರ್ಯ ಬಹಳ ಮುಖ್ಯ!



Character is more important than intelligence for success!

ಮಾರ್ನಿಂಗ್ ರಾಗ..


ಮುಗಿಲು ಸುರಿದ ಜಲ ಸಾಲು ಹನಿಗಳಾಗಿ ಪತ್ರಗಳ ಅಲಗುಗಳಲಿ..

ಶ್ವೇತಾಂಬರಿ ಮುಂಜಾವು ಮೊಗದ ಪ್ರತಿಫಲನ ಸಪ್ತವರ್ಣಗಳಲಿ…

25 August, 2014

ಮತ್ತೆ ಗುಲ್ಜಾರ್!!!

ಮುಂಜಾವು ಮಿತ್ರರಿಗೆ ಅರ್ಪಣೆ!
-----------------------------

ಮನಕೆ ಹತ್ತಿರವಾದವರನು ದೂರಟ್ಟಲು ಸಾಧ್ಯವಾಗುವುದೇ..
ಸಜ್ಜನರು ಇಷ್ಟು ಮಾತ್ರ ಅರಿತಿರುವರು
ಸಂಬಂಧಗಳೆಲ್ಲ ಮುತ್ತುಗಳು, ಮಿತ್ರಬಾಂಧವರೆಲ್ಲಾ ರತ್ನಗಳು!
-ಪ್ರೇರಣೆ ಗುಲ್ಜಾರ್

ಶ್ರಾವಣದ ಕೊನೆಯ ಮುಂಜಾವು!

ದಪ್ಪ ಹುಬ್ಬಿನ, ಅಗಲ ಕಣ್ಗಳ, ಥೋರ ಮೀಸೆಯ

ಕಡು ಕಪ್ಪನೆಯ ಮುಗಿಲ ಮಾಮನ ನೋಟಕೆ ಬೆದರಿ,

ಆಕಾಶ ರಾಜನ ಅರಮನೆಯ ಪುಟ್ಟ ಪುಟ್ಟ ಗವಾಕ್ಷಿ-

ಯಿಂದಲೇ ಇಂತಿಂತೇ ಬೆಳಕು ಬುವಿಯೆಡೆ ತೂರುವ

ಜಯ ಸಂವತ್ಸರದ, ಶ್ರಾವಣದ ಕೊನೆಯ ಮುಂಜಾವು! 

23 August, 2014

ಡ್ರಾಗನ್ ಫ್ಲೈ!


Black dragonfly
Neurothemis tullia


Scarce blue tailed female Damselfly!
Ischnura pumilio

22 August, 2014

ಶ್ರೀಮದ್ಭಗವದ್ಗೀತೆ!

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ|
ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ||

ಯತ್ ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್|
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ಟ ಮದರ್ಪಣಮ್||

ಯಾರು ಎಲೆಯನ್ನೋ, ಹೂವನ್ನೋ, ನೀರನ್ನೋ ಭಕ್ತಿಯಿಂದ ನನಗೆ ನೀಡುತ್ತಾನೋ, ನನ್ನಲ್ಲೇ ಬಗೆಯಿಟ್ಟ ಅವನ ಭಕ್ತಿಯ ಕೊಡುಗೆಯನ್ನು ನಾನು ನಲ್ಮೆಯಿಂದ ಕೊಳ್ಳುತ್ತೇನೆ.

ಕೌಂತೇಯ, ನೀನು ಏನು ಮಾಡುವೆ, ಏನು ತಿನ್ನುವೆ, ಏನು ಹೋಮಿಸುವೆ, ಏನು ನೀಡುವೆ, ಏನು ತಪಗೈವೆ ಅದನ್ನು ನನಗೆ ಒಪ್ಪಿಸು.


-ಶ್ರೀಮದ್ಭಗವದ್ಗೀತೆಯ ಒಂಬತ್ತನೆಯ ಅಧ್ಯಾಯ 

21 August, 2014

ಧೈರ್ಯ.. ಇದೆಯಾ???

|| Courage is what it takes to stand up and speak ||

|| Courage is also what it takes to sit down and listen ||

-Anonymus


ಮತ್ತೆ ಅದೇ ಬದುಕು ಮರಳುವುದಿಲ್ಲ... (ಗುಲ್ಜಾರ್)


ಬಂಧಗಳನು ನಿಭಾಯಿಸುವುದರಲ್ಲಿ ನೈಜತೆ ಇರಲಿ..
ಕಳೆದು ಹೋದ ಕಾಲ, ಬದುಕು ಮತ್ತೆ ಮರಳುವುದಿಲ್ಲ!

-ಪ್ರೇರಣೆ ಗುಲ್ಜಾರ್ 


Kissi bhi rishte ko sachche dil se nibhavo
Kyunki ye zindagi phir wapas kahan milti hai
-Gulzar

ಬೆಳಕು, ಮೆರುಗು, ಬೆರಗು!!!

ಮುಂಜಾವೇ,


ನಿತ್ಯವೂ ನೀ ಹಚ್ಚುವಿ ಅದೇ ಹಣತೆ, ಅದೇ ಬೆಳಕು

ಇಳೆಯ ಪತ್ತಲದ ಚಿತ್ತಾರದ ಅಂಚಿಗೋ ಹೊನ್ನ ಮೆರಗು


ಮತ್ತೆ ಮತ್ತೆ ನೀ ಕಾಣುವಿ ನನ್ನ ಕಣ್ಣಲ್ಲೂ ಅದೇ ಬೆರಗು!

20 August, 2014

ಡ್ರಾಗನ್ ಫ್ಲೈ!



ಪತಂಗ.. ಕಂಬಳಿ!!!



ಜನ್ಮ ದಿನದ ಶುಭಹಾರೈಕೆ ಗೂಗಲ್ ಮಿತ್ರನಿಂದ!


ಪ್ರಶ್ನೆಗಳಿಗೆ ಉತ್ತರ!

“ಶೀಲಕ್ಕ, ಪ್ಲೀಸ್ ಹದಿನೈದನೆಯ ಅಧ್ಯಾಯದ ಮೊದಲ ಐದು ಶ್ಲೋಕಗಳನ್ನು  ಹಾಡ್ತಿರಾ? ನಾನು ರೆಕಾರ್ಡ ಮಾಡಿ ದಿನಾ ಮಗಳಿಗೆ ಕೇಳಿಸ್ತೇನೆ. ಶಾಲೆಯಲ್ಲಿ ಅವಳಿಗೆ ಕಾಂಪಿಟಿಷನ್ ಇದೆ.”

ಸುಮಾರು ತಿಂಗಳ ಹಿಂದೆ ಅಕ್ಷತಾ ವಾಟ್ಸ ಆಪ್ ನಲ್ಲಿ  ಕೇಳಿದಾಗ ಅಳ್ಬೇಕೋ ನಗ್ಬೇಕೊ ಅಂತ ಗೊತ್ತಾಗ್ಲಿಲ್ಲ.

“ಅಕ್ಷತಾ, ನಾನು ನಾವೆಲ್ಲ ಹಿಂದೆ ಹಾಡಿದ ಹಾಗೆ ರಾಗ ಬೇಕಾದ್ರೆ ಹೇಳಿಕೊಡ್ತೇನೆ.. ನಿನ್ನ ಕಂಠದಲ್ಲೇ ನನ್ ಎದುರೇ ರೆಕಾರ್ಡ ಮಾಡು. ನನ್ನ ಸ್ವರ ಚೆನ್ನಾಗಿಲ್ಲ.. (ಸ್ವಲ್ಪ ಸಣ್ಣ ಸ್ವರದಲ್ಲಿ ಮಾತಾಡು.. ಕಿವಿಗೆ ನಿನ ಸ್ವರ ಬಡಿಯುತ್ತದೆ ಅನ್ನುತ್ತಿದ್ದವರ ನೆನಪು ಆಯಿತು) ನಂಗೆ ಯಾವ ಗ್ರಾಚಾರ ಹಿಡಿದಿಲ್ಲ.. ಮತ್ತೆ ಮಂಗಳಾರತಿ ಮಾಡಿಸ್ಕೊಳ್ಳಿಕ್ಕೆ!

ಹ್ಮೂಂ.. ಅವಳು ಬಿಡ್ಲೇಯಿಲ್ಲ.

ಬರೆಯುವ ಹುಮ್ಮಸಿನಲ್ಲಿ ಮರೆಗೆ ಸರಿದಿದ್ದ ಭಗವದ್ಗೀತೆ ಮತ್ತೆ ನಿತ್ಯ ಓದುವ ಪಾಠ ಆರಂಭವಾಯಿತು. ಕೆಲ ದಿನಗಳ ಹಿಂದೆ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರವೂ ದೊರೆಯಿತು. ಹ್ಮ.. ಅವನಿಗೆ ಎಲ್ಲವೂ ಗೊತ್ತು. ನಾನು ಇದ್ದಲ್ಲೇ ಅಗತ್ಯವಾದುದೆಲ್ಲವನ್ನೂ ಕಳುಹಿಸಿಕೊಡುತ್ತಾನೆ.

ಗೊಂದಲಗಳಿಗೆ ಸಿಕ್ಕಿದ ಉತ್ತರವು ಇದ್ದದ್ದು ಹನ್ನೆರಡನೆಯ ಅಧ್ಯಾಯದಲ್ಲಿ..

ಅರ್ಜುನ ಕೇಳುತ್ತಾನೆ,
ಕೃಷ್ಣ, ನಿನ್ನನ್ನು ನಿರಂತರ ಸಾಧನೆಯಿಂದ  ಸೇವಿಸುವ ನಿನ್ನ ಭಕ್ತರು ಮತ್ತು ಅಳಿವಿರದ ಅವ್ಯಕ್ತ ತತ್ವದ ಉಪಾಸಕರು.. ಇವರಿಬ್ಬರಲ್ಲಿ ಯಾರು ಹೆಚ್ಚಿನವರು???

ಕೃಷ್ಣನನ್ನುತ್ತಾನೆ,
ಅವ್ಯಕ್ತತತ್ವದ ಉಪಾಸನೆಯನ್ನು ನೆಚ್ಚಿದವರಿಗೆ ದಣಿವು ಹೆಚ್ಚು, ಇದು ಸಾಧಕರಿಗೆ ಕಷ್ಟದ ಬಳಸು ದಾರಿ.

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ|
ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ||

ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್
ಭವಾಮಿ ನಚಿರಾತ್ ಪಾರ್ಥ ಮಯ್ಯಾವೇಶಿತಚೇತಸಾಮ್||

ಕೆಲವರಿರುತ್ತಾರೆ: ಅವರು ಮಾಡಿದನೆಲ್ಲವನ್ನೂ ನನ್ನಲ್ಲಿ ಅರ್ಪಿಸಿಬಿಡುತ್ತಾರೆ. ಅವರು ನನ್ನಲ್ಲೇ ಬಗೆಯಿಟ್ಟವರು. ಅವರ ಸಾಧನೆಯ ಗುರಿ ನಾನಲ್ಲದೆ ಬೇರಿಲ್ಲ. ನನ್ನನ್ನೇ ನೆನೆಯುತ್ತಾ ಸೇವಿಸುತ್ತಾರೆ. ಓ ಪಾರ್ಥಾ, ನನ್ನನ್ನೇ ನೆಚ್ಚಿದ ಅಂತವರನ್ನು ನಾನು ಬಹುಬೇಗ ಸಾವಿನ ಬಾಳಿನ ಕಡಲಿನಿಂದ ಬಿಡುಗಡಗೊಳಿಸುತ್ತೇನೆ.

ಇನ್ನು ಗೊಂದಲವಿಲ್ಲ ಒಡಯನೇ.. ನಿನಗೇ ಶರಣು! ನೀನೇ ನನ್ನ ಗುರಿ ಮತ್ತು ಅದನ್ನು ತಲುಪಿಸುವ ಗುರುವು ಸಹ!

ಹಾ! ಹೇಳಲು ಮರೆತೆ, ಅಕ್ಷತಾ ಮತ್ತು ಅವಳ ಮಗಳು ವೈಶಾಲಿ ಅವರ ಮನೆಯಲ್ಲಿ ನಿತ್ಯವೂ ನನ್ನ ಉಪಸ್ಥಿತಿಯನ್ನು ಖುಷಿಯಿಂದ ಅನುಭವಿಸಿದರಂತೆ.. ಮೆಸೇಜು ಇತ್ತು!


ಬೆನ್ನಲುಬಿನಂತೆ ಕಾಪಾಡುವ ನುಡಿಗಳು!

|| You are great ||

ಹ್ಮ.. ಇದು ಸತ್ಯವಲ್ಲ ಎಂಬುದು ಮನಕ್ಕೆ ಗೊತ್ತು. ಆದರೂ ಖುಷಿ ಕೊಟ್ಟದೂ ಸುಳ್ಳಲ್ಲ.

ಪ್ರತಿಕೂಲ ವಾತಾವರಣವಿದ್ದೂ ತಮ್ಮೊಳಗಿನ ತುಡಿತವನ್ನು, ಪುಟ್ಟದಾಗಿ ರೂಪಗೊಳ್ಳುತ್ತಿರುವ ವ್ಯಕ್ತಿತ್ವಕ್ಕೆ ಆಕಾರ ಕೊಡುವ ಯತ್ನಕ್ಕೆ ಈ ಮಾತು  ಖಂಡಿತ ಮತ್ತಷ್ಟು ಪ್ರಚೋದಕವಾಗಿ ಬೆನ್ನುಹುರಿಯಂತೆ ಬೆಂಬಲ ಕೊಡುತ್ತದೆ.

ತಾನು ಖಂಡಿತ ಆ ಮಟ್ಟಕ್ಕೆ ಬೆಳೆದಿಲ್ಲವಾದರೂ ನಿರೀಕ್ಷಯಿಲ್ಲದೇ ಬಂದ ಆತ್ಮ ಸಖ/ಆತ್ಮ ಸಖಿಯ ಮಾತು ನೋವಿನ, ವ್ಯಂಗದ ನುಡಿಗಳು ಎದೆಯ ಗಾಯಗೊಳಿಸದಂತೆ ಕವಚವಾಗಿ ಕಾಪಾಡುತ್ತದೆ!


-ಅವಳ ಡೈರಿಯ ಪುಟಗಳಿಂದ

ಬಣ್ಣ ಬೆಳಗುವ ಮುಂಜಾವು!

ಕತ್ತಲಲಿ ಕರಗಿ ಹೋದ ಬಣ್ಣಗಳನು ತಿಕ್ಕಿ ಬೆಳಗಿಸಿ ವಸುಂಧರೆಗೆ ಮೆರಗು ಕೊಡುವ ಬೆಳ್ಳಿ ಮುಂಜಾವು!

16 August, 2014

ಅನಂತದ ಹಾದಿ..

ಒಲವೇ.
ನಿನ ಸೋಂಕಿ ಬಂದ ಗಾಳಿ
ಸುಗಂಧ ಎದೆಯೊಳಗೆ ನುಸುಳಿ
ದೃಷ್ಟಿಯ ವ್ಯಾಪ್ತಿ ಹಿಗ್ಗಿ
ಅನಂತದ ಹಾದಿ ತೋರಿದೆ!

-ರೂಮಿ ಪ್ರೇರಣೆ

Your breath touched my soul and I saw beyond all limits!



10 August, 2014

ಚೌಕಟ್ಟಿನೊಳಗೆ ಸ್ತಬ್ಧ.. !


ಕೈ ಕೆಸರಾದರೆ.. ಕಲಾಕೃತಿ! (ಆವೆ ಮಣ್ಣಿನ ಮೂರುತಿಗಳು)






ನೂಲ ಹುಣ್ಣಿಮೆಯ ವಿಶೇಷ ಮುಂಜಾವು!

ನೂಲ ಹುಣ್ಣಿಮೆಯ ವಿಶೇಷ ಮುಂಜಾವು!
_____________________


ಕೆಂಪಂಚಿನ ಹಸಿರು ಝರಿ ಲಂಗ…
ಕೊರಳಲಿ ಎರಡೆಳೆಯ ಲಕುಮಿ ಪದಕದ ಮುತ್ತಿನ ಹಾರ…
ಕೆಂಪು ಹಸಿರು ಹರಳಿನ ಮುತ್ತಿನ ಝುಮುಕಿ…
ಹೊನ್ನಂಚಿನ ಹಸಿರು ರಿಬ್ಬನು ಬಿಗಿದ ಎರಡು ಪುಟ್ಟ ಜಡೆ…
ಬಣ್ಣ ಬಣ್ಣದ ಚಿತ್ತಾರದ ಬಿಳಿ ಕೊಡೆ ಭುಜಕೆ ಅವುಚಿ,
ಪಚ್ಚೆ ಗಾಜಿನ ಬಳೆಗಳ ಘಲ್ ಘಲ್… ಕೇಳಿಸುತ್ತಾ,
ಪುಟ್ಟ ಕೈಗಳಿಂದ ಲಂಗ ಒದ್ದೆಯಾಗದಂತೆ ಮೇಲೆತ್ತಿ,
ಅಣ್ಣ, ತಮ್ಮ, ತಂಗಿಯರೊಡನೆ ಪೈಪೋಟಿ ಮಾಡುತಾ
ತಾನೂ ಪವಿತ್ರ ನೂಲು ಹಾಕುವ ತವಕದಿ
ಮುಸಲ ಧಾರೆಯಂತೆ ಸುರಿಯುವ ಮಳೆಯ ಜತೆ
ಇಂದು ಬುವಿಗಿಳಿದ ಪುಟ್ಟ ಬಾಲೆ ಮುಂಜಾವು!

 (ಚಿತ್ರ ಕೃಪೆ ಅಂತರ್ಜಾಲ)

ಅಣ್ಣಂದಿರಿಗೆ, ತಮ್ಮಂದಿರಿಗೆ ಪ್ರೀತಿಪೂರ್ವಕ ನಮನಗಳು! :-)

ಸರ್ವೇ ಜನಾಃ ಸುಖಿನೋ ಭವಂತು!

09 August, 2014

ಕೈ ಚಳಕ, ಮೈ ಪುಳಕ!





ಮಡಿಲ ತುಂಬಾ ಸಂಪಿಗೆ!

ಬಿಸಿ  ಚಾದೊಳಗೆ ಬಿಸ್ಕಿಟ್ ಅದ್ದಿ
ಚಪ್ಪರಿಸಿ ಮೆಲ್ಲುತ ಕುಳಿತ ಅವನು;

ಅಕ್ಷರಗಳ ಹರಡಿ ಪೆನ್ನು ಕಚ್ಚುತ
ಕವನ ಕಟ್ಟಲು ಕುಳಿತ ನಾನು;

ಕಣ್ಮುಚ್ಚಾಲೆ ಆಡುತ ಮುಗಿಲ ಮರೆಯಿಂದಲೇ
ಸಾಗರದೊಳಗೆ ಜಾರಿದ ಭಾನು;

ಸಂಪಿಗೆ ಘಮ ಎಲ್ಲೆಲ್ಲೂ
ಮುಸ್ಸಂಜೆ ತುಂಬಿಸಿದಳು ಮಡಿಲು!

07 August, 2014

ನೀ ಖಂಡಿತ ಗೋರ ಕುಂಬಾರನಲ್ಲ!

ನಾಮದೇವ ನಾನಾಗಿರಬಹುದು.. ಆದರೆ ಇಟ್ಟಿಗೆಯಿಂದ ನನ್ನ ತಲೆ ಬಡಿಯಲು ನೀ ಖಂಡಿತ ಗೋರ ಕುಂಬಾರನಲ್ಲ.

ನಾನೇ ಸರಿ ಎಂಬ ಅಹಂಕಾರಕ್ಕೂ, ನಾನು ನಂಬಿದ ತತ್ವಗಳ ಮೇಲೆ ಇಟ್ಟಿರುವ ಅಭಿಮಾನಕ್ಕೂ ವ್ಯತ್ಯಾಸ ಇದೆ!

ಮಸುಕು ಮುಂಜಾವು-ಲಜ್ಜೆಯಿಲ್ಲದ ಒಲವು!

ಪಟ ಪಟ ಸದ್ದು ಮಾಡುವ ಮಸುಕು ಬೆಳಗು
ಒದ್ದೆ ಹಸುರು…

ಕದ್ದು ನೋಡದೆ ಕಣ್ಣಿಗೆ ಕಣ್ಣು ಬೆರೆಸುವ ಒಲವು…

ಒದ್ದೆ ಮನಸು…

06 August, 2014

ಕುಣಿತ..


ನೆಲವ ಮೆಟ್ಟಿ ಕಾಲನೆತ್ತಿ ಗಾಳಿಯಲಿ ಹಗುರವಾಗಿ ಗೆಜ್ಜೆ ಸದ್ದು ಮಾಡುತ ಹಾರಾಡುವುದು ಮಾತ್ರ ಕುಣಿತವಲ್ಲ..


ಸೋಲಿನ ನೆತ್ತರು, ಗೆಲುವಿನ ನಗು ಎರಡರಿಂದಲೂ ದೂರ ದೂರ..

ಹೆಜ್ಜೆ ಸದ್ದು ಮಾಡದೆ ಒಲವಿನೆತ್ತರ ಹಾರುವುದನೂ ಕುಣಿತವೆನ್ನಬಹುದೇ!


 -ಪ್ರೇರಣೆ ರೂಮಿ

To dance is not to jump to your feet
and raise painlessly in the air like dust.
To rise above both worlds is to dance in
the blood of your pain and give up your life.

ಜೇಡ-ಬಲೆ! (ಫೋಟೋಗ್ರಾಫಿ)

Leucauge Decorata!




02 August, 2014

ಬದುಕಿನ ದೀರ್ಘ ಹಾದಿಯಲಿ ಸದಾ ನಿನ ಜತೆಯಿರಲಿ ನನ್ನೊಲವೇ!

ಕೊನೆಯಿಲ್ಲದ ಹಾದಿಯಲಿ

ನನದು ಸಣ್ಣ ಸಣ್ಣ ಹೆಜ್ಜೆ..

ಅನುಕ್ಷಣವೂ ನಿನ ಜತೆಯಿರಲು

ದೀರ್ಘವೆಂದು ಇನಿತೂ ಬೇಸರವಿಲ್ಲವಲ್ಲ.

ನಿಷ್ಕಳಂಕ ಆತ್ಮವೇ ದಾರಿದೀಪವಾಗಿರಲಿ..

ಈ ಕಾಯವೋ ಅಂಜುಬುರುಕ ಮತ್ತು ಬಲಹೀನ!


-ಪ್ರೇರಣೆ ರೂಮಿ


Although the road is never ending
take a step and keep walking,
do not look fearfully into the distance...
On this path let the heart be your guide
for the body is hesitant and full of fear.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...