ಒಲವೇ,
ನಿನ್ನ ಲೋಕದಲಿ ಜಾತ್ರೆಯೇ ಇಂದು
ಕ್ಷಣಕ್ಕೊಮ್ಮೆ ಮಿಂಚಿ ಗುಡುಗಿ
ನಿದ್ದೆಯಿಂದೆಬ್ಬಿಸುವ ನಿನ್ನ ಡಂಗೂರ
ಪನ್ನೀರ ಸಿಂಚನ ಮೈಮನಕೆ
ಗವಾಕ್ಷಿಯಿಂದಲೇ ತೂರುವ ಮರುತ
ಕಪ್ಪಾಗಸದಿ ತುಂಬಾ ತೇಲುವ
ಬೆಳಕ ತೋರಣದ ರಂಗಮಂಟಪ
ಹೇಳು, ಚುಕ್ಕಿ ಚಂದಿರರ ಗರ್ಬಾ
ನೃತ್ಯಕೆ ಇದು ಇರಬಹುದೇ ಆಹ್ವಾನ!
2 comments:
ತುಂಬಾ ಚನ್ನಾಗಿದೆ ನಿಮ್ಮ ಬರವಣಿಗೆ..!! ಇಸ್ಟೊಂದು ಚೆಂದನೆಯ ಸಾಲುಗಳನ್ನು ಹುಡುಕಿ, ನೆನೆದು, ರೂಪಿಸಿ ಬರೆಯುವುದು ನಿಜವಾಗಿಯೂ ಒಂದು ಸಹಸ. ನಿಮ್ಮ ಈ ಕುಶಲ ಕ್ರಿಯೆ'ಗೆ ನನ್ನ ಕಡೆ'ಇಂದ Hats' off !!
ವರುಷಗಳ ಹಿಂದೆ ನಾ ಬರೆದ ಕೆಲವು ಪುಟಗಳು, ನಿಮ್ಮ ಒಲವಿನ ಸಾಲುಗಳಿಂದ ನೆನಪಾಗುತಿದೆ..!! ಧನ್ಯವಾದಗಳು..!!
- ಅವಿನಾಶ್
:-) ನಮಸ್ತೆ ಅವಿನಾಶ್ ಅಗ್ನಿಹೋತ್ರಿ. ಇಂತಹ ಮೆಚ್ಚಿಗೆಗಳೆ ಮುಂದಿನ ಬರವಣಿಗೆಗೆ ಸ್ಫೂರ್ತಿ! ಮನಪೂರ್ವಕ ಧನ್ಯವಾದ!
Post a Comment