ಒಲವೇ,
ನಾ ನಿನ್ನ ಅರೆಸುತ್ತ ಹುಡುಕಾಡಿದ್ದು ನಿಜ..
ನೀ ಎದುರಿಗಿದ್ದೂ ಕಾಣಿಸದೇ ಮರೆಯಾಗಿದ್ದದೂ ನಿಜ..
ಪರಿತಾಪಕೆ, ಓಲೈಕೆಗೆ ನೀ ಮಣಿದದ್ದೂ ನಿಜ..
ಮತ್ತೆ ಕಣ್ಮುಚ್ಚಾಲೆ ಆಟವಾಡಿ ಮರೆಯಾದದ್ದೂ ನಿಜ..
ಮುನಿದು ನೀ ಮೌನದಿ ಬಹಳಷ್ಟು ನುಡಿದದ್ದೂ ನಿಜ..
ಬೆದರಿ ನಾ ಹಾದಿಯಿಂದ ಸರಿದು ಮರೆಯಾದದ್ದೂ ನಿಜ..
ಉಸಿರಾಟ ಸ್ತಂಭವಾದದ್ದೂ ನಿಜ..
ಕೊನೆಗೆ ನಿನ್ನ ನೆರಳನೇ ನಾ ಕದ್ದದ್ದೂ ನಿಜ..
ಸಾಕು ನನಗದು,
ನಿನ್ನ ನೆರಳನೇ ಬಿಗಿದಪ್ಪಿ ಮತ್ತೆ ಉಸಿರಾಡಿದೆ ಎಂದರೆ ನಂಬುವೆ ತಾನೇ,
ಏಕೆಂದರೆ ನಾನೆಂದೂ ನಿನ್ನ ಜತೆ ಸುಳ್ಳಾಡಿಲ್ಲ ಎಂಬುದೂ ನಿಜ!
No comments:
Post a Comment