“ಸ್ವೀಟಿ, ಎಷ್ಟು ಟೈಮ್ ನಂತರ ನಿನ್ ವಾಯ್ಸ್
ಕೇಳ್ತಿದ್ದೇನೆ.. ಆಹ್! ಈಗ ನೋಡು ನಿನ್ನೆಯಿಂದ ಸುರಿದ ಮುಂಗಾರು ಮಳೆ ಇಫೆಕ್ಟ್ ಗೊತ್ತಾಗ್ತಿದೆ!
ಡ್ರೈ ಅಂತ ಅನಿಸ್ತಿತ್ತು.. I am feeling better now! “
ನಮ್ಮೆದುರು ಟಿಪ್ ಟಾಪ್ ಡ್ರೆಸ್ ಮಾಡಿಕೊಂಡಿರುವ ಯುವಕನ
ಉವಾಚ!
’ಏ ಹುಡುಗಿ, ಕೇರ್‌ಫುಲ್ ಕಣೇ! ಇನ್ನು ಒಂದು
ತಿಂಗಳೊಳಗಾಗಿ ಅವನಿಗೆ ನಿನ್ ವಾಯ್ಸ್ ಕರ್ಕಶ ಅನಿಸಿಲ್ಲದಿದ್ದರೆ ನನ್ ಹೆಸರೇ
ಬದಲಾಯಿಸಿಬಿಡ್ತೇನೆ! ಕರ್ಕಶ ಬಿಡು, ನಿನ್ ಫೋನೇ ಅವಾಯ್ಡ್ ಮಾಡ್ತಾನೆ ಆಯಪ್ಪ!’
ನನ್ನ ಜತೆ ವಾಕ್ ಬರ್ತಿದ್ದ ನನ್ನ ಗೆಳತಿ ನನ್ನ
ಕಿವಿಯಲ್ಲಿ ಪಿಸುಗುಟ್ಟಿದಳು!
“ಯಾಕೆ ಹಾಗ್ನಿತಿಯಾ! “
ನಾನು ಕೇಳಿದಕ್ಕೆ ನನ್ನನ್ನೇ ಗುರಾಯಿಸಿಬಿಟ್ಟಳು
ನನ್ನಮ್ಮ!
“ಮತ್ತೇನೇ! ಎಲ್ಲಾ ಹಾಗೆ! ಈ ಎಲ್ಲಾ ಲವ್ ಸ್ಟೋರಿ ಕೆಲವು
ತಿಂಗಳುಗಳ ಆಟ.. ಮತ್ತೆ ಆ ಹುಡುಗಿ ಮಾನಸಿಕ ಹಿಂಸೆ ಅನುಭವಿಸುವುದನ್ನು ನಾನೀಗಲೇ ಇಮೇಜಿನ್
ಮಾಡ್ಕೊಳ್ತಿದ್ದೇನೆ!”
ಮತ್ತೆ ನಾವಳೊಟ್ಟಿಗೆ ಚರ್ಚೆ ಮಾಡ್ಲಿಕ್ಕೆ ಹೋಗ್ಲಿಲ್ಲ..
ಸುಮ್ನೆ ಅವಳನ್ನು ಎಳಕೊಂಡು ಪಾರ್ಕಿನ ಐದು ಸುತ್ತಿನ ನಡಿಗೆ ಮುಗಿಸಿ ಮನೆಗೆ ಮರಳಿದೆ. ಆದರೆ ಅದೇ ಮಾತು
ಕಿವಿಯಲ್ಲಿ ಗುಯ್ ಗುಡುತ್ತಿದೆ!
No comments:
Post a Comment