ಯಾಕೆ ನಲ್ಲ,
ಯಾಕೆಂದು ಉತ್ತರಿಸು!
ಅದ್ಯಾಕೆ ಈ ಪರಿಯ ಪರೀಕ್ಷೆ,
ಮುಗಿಯುವುದೇ ಇಲ್ಲವೆ,
ಪ್ರೀತಿಗೆ ಅದೆಷ್ಟು
ಅಡ್ಡಿ ಆತಂಕಗಳು!
ಅಲೆಅಲೆಯಾಗಿ ಎದ್ದು,
ಮತ್ತೆ ಸುನಾಮಿಯ ರೂಪ ತಾಳುವ
ನನ್ನ ಭಾವಗಳ
ನಿಯಂತ್ರಿಸಲಿ ಹೇಗೆ!
ಹೇಗೆ ನಲ್ಲ,
ಹೇಗೆಂದು ಉತ್ತರಿಸು!
ಪ್ರತಿಯೊಂದು ಬಡಿತ
ಮಿಡಿತವೂ ಒಯ್ಯುತಿದೆ
ನನ್ನ ಎದೆಯ ಸಂದೇಶವ,
ಕೇಳಿಸದು ಸುತ್ತ ಮುತ್ತ
ಇರುವವರಿಗೆ,
ಕೇಳು ನಲ್ಲ,
ಕೇಳಿತೆಂದು ಉತ್ತರಿಸು!
2 comments:
ಕೇಳಿತೆಂದೇ ಉತ್ತರಿಸಬೇಕಲ್ಲಾ ! ಚೆನ್ನಾಗಿದೆ ಶೀಲಕ್ಕ:)
ಮೆಚ್ಚುಗೆಗಾಗಿ ಧನ್ಯವಾದ ಕಿರಣ್:-)
Post a Comment