ವಿಚಿತ್ರವೆನಿಸುವುದು,
ದಾರವಿಲ್ಲದೆ ಬಂಧಿಸಲ್ಪಟ್ಟಿದ್ದೇವೆ,
ವಿವಿಧ ಬಾಂಧವ್ಯಗಳಲಿ!
ಅಪ್ಪ-ಅಮ್ಮ, ಅಕ್ಕ-ತಮ್ಮ,
ಅಣ್ಣ-ತಂಗಿ, ಗಂಡ-ಹೆಂಡತಿ,
ಇನ್ನೂ ಏನೆಲ್ಲಾ....
ಜೋಡಿಸುತ್ತಲೇ ಸಾಗುವುದು ನಮ್ಮ ಬದುಕು!
ಎಲ್ಲರೂ ನಮ್ಮವರು, ನಮ್ಮವರು
ಸಾರುವೆವು ಹೆಮ್ಮೆಯಲಿ!
ಆದರೆ ಬಾಂಧವ್ಯದ ಬಂಧನವಿಲ್ಲದ
ಹೃದಯವೊಂದು ನಮ್ಮೆದೆಯ
ತಂತಿಯ ಮೀಟಿದಾಗ,
ನೋವಾಗುವುದೇಕೆ?
ಹರುಷವಾಗುವುದೇಕೆ?
2 comments:
ha ha ha, ello hogbitri neevu, wonderful thinking, very nice...njoy'd
ಅರೇ, ಕಿರಣ್, ಎಲ್ಲಿ ಹೋಗಿದ್ದೇನೆ ನಾನು. ಇಲ್ಲೇ ಇದ್ದೇನೆಯಪ್ಪಾ ಸಂಬಂಧಗಳ ಜಾಲದಲ್ಲಿ..ಅಲ್ಲಿಂದ ಬಿಡುಗಡೆ ಇದೆನಾ?
ಓದಿ ನಿಂಗೆ ಕುಶಿಯಾಯ್ತಲ್ಲ..ಅದನ್ನು ಕೇಳಿ ನಂಗೂ ಕುಶಿನೇ....
Post a Comment