ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

11 April, 2012

ನೀಲುಗಳು -3


ಮೌನವೂ, ಏಕಾಂತವೂ
ಬಹಳ ಆಪ್ತವಾಗಿದ್ದವು ಇಲ್ಲಿಯ ತನಕ!
ಇಂದೇನಾಗಿದೆ ಎನಗೆ?
ಸಹಿಸಲಾಗುತ್ತಿಲ್ಲವೆ! 
ಮೌನವನ್ನೂ, ಏಕಾಂತವನ್ನೂ!

*******************


ಮೊಬೈಲ್ ರಿಂಗಿಣಿಸಿದೊಡೆ 
ಪಿತ್ತ ನೆತ್ತಿಗೇರುತಿತ್ತು,
ಕಿರಿಕಿರಿ ಅನಿಸುತಿತ್ತು!
ಉದ್ದುದ್ದ ಮಾತಾಡಿದೊಡನೆ
ಯಾಕಪ್ಪಾ ಎತ್ತಿದೆನೋ ಅನಿಸುತಿತ್ತು!
ಮೆಸೇಜುಗಳ ಬರುವಿಕೆಯೇ ಬೇಡವೆನಿಸುತಿತ್ತು!
ಆದರೆ ಇಂದು ಕಾದು ಸಾಕಾಗಿದೆ,
ಕಾಲೂ ಇಲ್ಲ, ಮೆಸೇಜೂ ಇಲ್ಲ!

*******************

2 comments:

Swarna said...

ಮೊದಲ ಬಾರಿ ತೆರೆದ ಪುಟ ಓದಿದ್ದು ಮೇಡಂ.
ಚೆನ್ನಾಗ್ ಬರೆಯುತ್ತಿರಿ, ಬಿದಿಸುತ್ತಿರಿ.
ಬರೆಯುತ್ತಿರಿ ಬಿಡಿಸುತ್ತಿರಿ
ಸ್ವರ್ಣಾ

ಶೀಲಾ said...

ಸ್ವಾಗತ ತೆರೆದ ಮನಗಳ ಪುಟಗಳಿಗೆ ಸ್ವರ್ಣಾ! ತಮಗೆ ಮೆಚ್ಚಿಯಾದದ್ದು ತಿಳಿದು ಆನಂದವಾಯಿತು! ವಂದನೆಗಳು!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...