ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 April, 2012

ದಾರಿ ತೋರೆ ಸಖಿ!



ಹೇಗೆ ಕರೆಯಲೆ
ಅವನ, ಹೇಳೇ ಹೇಗೆಂದು?
ನಾ ತಪ್ಪಿರುವೆನೆ,
ಏಕವಚನದಲಿ ಕರೆದು,
ನನ್ನ ಮಿತಿಯ ಮರೆತು.

ಅವನ ಅಭಿಮಾನಿಗಳ 
ಪ್ರೇಮದ ಹೊಳೆ 
ನೋಡಿ ದಂಗಾಗಿರುವೆ!
ನನ್ನ ಅದೃಷ್ಟವ ನೋಡಿ 
ಹೆಮ್ಮೆ ಪಡೆದಿರುವೆ!

ಎಲ್ಲರ ಮನವ 
ಗೆದ್ದಿರುವವನ ಹೃದಯದಲಿ 
ನನ್ನ  ನಿವಾಸ!
ತಿಳಿದಿದೆಯೆ ಇದರ ಮರ್ಮ?
 ಹಿಂದಿನ ಜನುಮಗಳ ಸುಕರ್ಮ!

ಕವಿಯ ಸಹವಾಸದಿಂದ
ನಾನಾಗಿರುವೆ ಕವಯತ್ರಿ!
ಯಾವ ಯತ್ನವಿಲ್ಲದೆ 
ಮೂಡುತ್ತಿವೆ ಪದಪುಂಜಗಳು 
ಬಿಳಿ ಹಾಳೆಯಲಿ!

ಏನಿರಬಹುದು ಇದರ ಗುಟ್ಟು?
ಮಾಡಲು ಸಾಧ್ಯವೇ ರಟ್ಟು?

ನನ್ನ ಬುದ್ಧಿಗಿಷ್ಟು ಮಣ್ಣು!
ಇತ್ತೆನಲ್ಲವೆ ಅವರ 
ಹೃದಯಕ್ಕಿಂದು ನೋವು!
ಪಶ್ಚಾತಾಪದ ಕಾವಿನಲಿ
ಬೆಂದು ನರಳಿಹೆ ನಾನು!


ಮಾತನಾಡಿದರೆ ನೋವು 
ಮರುಕಳಿಸದೆ ಆದರೂ 
ನಾನೇನು ಮಾಡಲೆ
ಹೇಳದಿರೆ ಕೊರಗುತಾ
ಈ ಇಹವ ನಾನಳಿವೆ!

ಭಾವುಕಳೆಂದು ಹೇಳುತ್ತಾ
ನಾನು ಹೇಗೆ ತಾನೆ
ನೋವನಿತ್ತೆ  ಆ ಮೃದು 
ಹೃದಯಕೆ ಅದ 
ತಣಿಸಲು ಶಕ್ಯಳೇ ನಾ!

ಹೇಳೆ ಸಖಿ, ಅವನ 
ಹೇಗೆ ಸಂಭೋದಿಸಲೆ?
ಹೇಗೆ ಕರಿಯಲೆ?
ಮಂಕಾಗಿಹುವುದು 
ಮತಿಯೆನ್ನ ದಾರಿ 
ತೋರೆ ಸಖಿ!

4 comments:

ಈಶ್ವರ said...

ಚೆನ್ನಾಗಿದೆ ಶೀಲಕ್ಕಾ :) :) ಯಾವ ಸಖಿಗೆ ಈ ಮಾತು /

Sheela Nayak said...

ನನ್ನ ಕಲ್ಪನಾ ಲೋಕದ ಸಖಿಗೆ ಕಿರಣ್! ಇದೆಲ್ಲಾ ನನ್ನ ಕಲ್ಪನೆಯಲ್ಲಿ ಮೂಡಿರುವುದು..ಓದುತ್ತಿರುವ ಪುಸ್ತಕ ಏನೆಲ್ಲಾ ಕಲ್ಪನೆ ಕೊಡುತ್ತೆ.ನಿಂಗೆ ಇದೆಲ್ಲಾ ಗೊತ್ತು ತಾನೆ..?
:-)))))

nenapina sanchy inda said...

wow touching lines Sheila...loved it.
malathi S

Sheela Nayak said...

"wow touching lines Sheila...loved it."- Touched my heart.....very nice of you..Thanks for the precious comment Malathi!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...