ಹೇಗೆ ಕರೆಯಲೆ
ಅವನ, ಹೇಳೇ ಹೇಗೆಂದು?
ನಾ ತಪ್ಪಿರುವೆನೆ,
ಏಕವಚನದಲಿ ಕರೆದು,
ನನ್ನ ಮಿತಿಯ ಮರೆತು.
ಅವನ ಅಭಿಮಾನಿಗಳ
ಪ್ರೇಮದ ಹೊಳೆ
ನೋಡಿ ದಂಗಾಗಿರುವೆ!
ನನ್ನ ಅದೃಷ್ಟವ ನೋಡಿ
ಹೆಮ್ಮೆ ಪಡೆದಿರುವೆ!
ಎಲ್ಲರ ಮನವ
ಗೆದ್ದಿರುವವನ ಹೃದಯದಲಿ
ನನ್ನ ನಿವಾಸ!
ತಿಳಿದಿದೆಯೆ ಇದರ ಮರ್ಮ?
ಹಿಂದಿನ ಜನುಮಗಳ ಸುಕರ್ಮ!
ಹಿಂದಿನ ಜನುಮಗಳ ಸುಕರ್ಮ!
ಕವಿಯ ಸಹವಾಸದಿಂದ
ನಾನಾಗಿರುವೆ ಕವಯತ್ರಿ!
ಯಾವ ಯತ್ನವಿಲ್ಲದೆ
ಮೂಡುತ್ತಿವೆ ಪದಪುಂಜಗಳು
ಬಿಳಿ ಹಾಳೆಯಲಿ!
ಮೂಡುತ್ತಿವೆ ಪದಪುಂಜಗಳು
ಬಿಳಿ ಹಾಳೆಯಲಿ!
ಏನಿರಬಹುದು ಇದರ ಗುಟ್ಟು?
ಮಾಡಲು ಸಾಧ್ಯವೇ ರಟ್ಟು?
ನನ್ನ ಬುದ್ಧಿಗಿಷ್ಟು ಮಣ್ಣು!
ಇತ್ತೆನಲ್ಲವೆ ಅವರ
ಹೃದಯಕ್ಕಿಂದು ನೋವು!
ಪಶ್ಚಾತಾಪದ ಕಾವಿನಲಿ
ಬೆಂದು ನರಳಿಹೆ ನಾನು!
ಮಾತನಾಡಿದರೆ ನೋವು
ಮರುಕಳಿಸದೆ ಆದರೂ
ನಾನೇನು ಮಾಡಲೆ
ಮರುಕಳಿಸದೆ ಆದರೂ
ನಾನೇನು ಮಾಡಲೆ
ಹೇಳದಿರೆ ಕೊರಗುತಾ
ಈ ಇಹವ ನಾನಳಿವೆ!
ಭಾವುಕಳೆಂದು ಹೇಳುತ್ತಾ
ನಾನು ಹೇಗೆ ತಾನೆ
ನೋವನಿತ್ತೆ ಆ ಮೃದು
ಹೃದಯಕೆ ಅದ
ತಣಿಸಲು ಶಕ್ಯಳೇ ನಾ!
ಹೃದಯಕೆ ಅದ
ತಣಿಸಲು ಶಕ್ಯಳೇ ನಾ!
ಹೇಳೆ ಸಖಿ, ಅವನ
ಹೇಗೆ ಸಂಭೋದಿಸಲೆ?
ಹೇಗೆ ಕರಿಯಲೆ?
ಮಂಕಾಗಿಹುವುದು
ಮತಿಯೆನ್ನ ದಾರಿ
ತೋರೆ ಸಖಿ!
ಮತಿಯೆನ್ನ ದಾರಿ
ತೋರೆ ಸಖಿ!
4 comments:
ಚೆನ್ನಾಗಿದೆ ಶೀಲಕ್ಕಾ :) :) ಯಾವ ಸಖಿಗೆ ಈ ಮಾತು /
ನನ್ನ ಕಲ್ಪನಾ ಲೋಕದ ಸಖಿಗೆ ಕಿರಣ್! ಇದೆಲ್ಲಾ ನನ್ನ ಕಲ್ಪನೆಯಲ್ಲಿ ಮೂಡಿರುವುದು..ಓದುತ್ತಿರುವ ಪುಸ್ತಕ ಏನೆಲ್ಲಾ ಕಲ್ಪನೆ ಕೊಡುತ್ತೆ.ನಿಂಗೆ ಇದೆಲ್ಲಾ ಗೊತ್ತು ತಾನೆ..?
:-)))))
wow touching lines Sheila...loved it.
malathi S
"wow touching lines Sheila...loved it."- Touched my heart.....very nice of you..Thanks for the precious comment Malathi!
Post a Comment