ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

07 March, 2012

ನೀಲುಗಳು-2


        ಸತ್ಯಂ ವದ
         ಅಂದರೆ 
  ಕಡು ವರ್ಣದ ಸೀರೆಯುಟ್ಟ 
  ಕೃಷ್ಣ ಸುಂದರಿ ಸ್ನೇಹಿತೆಗೆ               
 ನಿನ್ನ ನೋಡಲಾಗುವುದಿಲ್ಲವಿಂದು ಎಂದು ಹೇಳುವುದೇ?

       *    *     *    *


      ಧರ್ಮಂ ಚರ
        ಅಂದರೆ
ವಂಶ ಪಾರಂಪರ್ಯವಾಗಿ ಮಾಂಸ 
   ಮಾರುವ ಗೆಳೆಯನಿಗೆ
ನೀನು ಅಧರ್ಮದ ಹಾದಿ ಬಿಡು ಎನ್ನುವುದೇ?

    *    *    *    *


ನಾನು ಕಪ್ಪು ಅವನು ಬಿಳಿ
ಹೀಗೆ ಸಾಗಿತ್ತು ನಮ್ಮ ಚರ್ಚೆ
’ಅಮ್ಮ’ ಕೂಗು ಕೇಳಿ ಹೊರ ಬಂದು ನೋಡಿದರೆ,
ಕೀಚೈನು ತಿರುಗಿಸುತ್ತ 
ಕೇಸರಿ ಸ್ಕೂಟಿಯ ಎದುರು ನಿಂತಿಹಳು ನಮ್ಮ ಕುವರಿ!

             *    *     *    *

 ಇಂಜಿನಿಯರ್, ಡಾಕ್ಟರ್ ಆಗಲಿ 
 ಎನ್ನ ಮುದ್ದು ಕಂದನೆಂದೆಣಿಸುತ್ತ
 ಮಧುರ ಕನಸು ಕಾಣುತ್ತ
 ಹೊರ ಬಂದು ನೋಡಿದರತ್ತ 
 ತನ್ನ ಬಣ್ಣದ ಲೋಕವ ಬಿಡಿಸುತ್ತ 
 ನಸುನಗು ಬೀರಿದ ಪುಟ್ಟ ಪಿಕಾಸು ನನ್ನತ್ತ!

        *    *     *     *

  ಕನಸು ಕಾಣು ಅಂದರು
  ಹೆತ್ತವರು, ಗುರುಗಳು
  ವಿಧೇಯಿ ನಾನು
  ಪಾಲಿಸಿದೆ ಅವರ ಮಾತನ್ನ
  ಕಟ್ಟುತ್ತಲೇ ಹೋದೆ ಕನಸಿನ ಗೋಪುರವನ್ನ;
  ಮಾಲುತ್ತಿತ್ತು ಅದು ಆಗಾಗ...ಆದರೂ
  ಅದಕ್ಕಿಷ್ಟು ಇಟ್ಟಿಗೆಯ ಪೇರಿಸುವುದು   ಬಿಡಲಿಲ್ಲ;
  ಆದರೆ ಅದೊಂದು ದಿನ 
  ಯಮನ ದರುಶನವಾದದ್ದೇ ತಡ
  ಕನಸಿನ ಗೋಪುರ ನುಚ್ಚು ನೂರಾಯಿತು!


14 comments:

kiran said...

ನೀಲುಗಳು ಅಂದ್ರೆ ಏನು?

Sheela Nayak said...

ನನಗೂ ನೀಲು ಬಗ್ಗೆ ಏನೂ ಗೊತ್ತಿಲ್ಲ...ಆದರೆ ಬಹಳಷ್ಟು ನೀಲುಗಳನ್ನು ಓದಿದ್ದೇನೆ...ಇಲ್ಲಿರುವ ನೀಲುಗಳು ತಲೆಯನ್ನು ಹೊಕ್ಕಿ ಕೊರೆಯುತ್ತಿತ್ತು..ಕಾಟತಾಳಲಾಗದೆ ಬರೆದು ನಿರಾಳವಾಗಿ ಬಿಟ್ಟೆ!
ಇಲ್ಲಿರುವ ಕೊಂಡಿಗೆ ಹೋಗಿ ಒಂದಿಷ್ಟು ನೀಲುಗಳ ಬಗ್ಗೆ ತಿಳಿದುಕೊಳ್ಳಿ..

http://kannada-nudi.blogspot.in/2007/06/blog-post_01.html

kiran said...

ನನ್ನದೊಂದು ನೀಲು ಪ್ರಯತ್ನ ..........ರೀ ರೀ ನಗ್ಬೇಡ್ರಿ

ತಿಳಿಯುತಿಲ್ಲ ನನಗೆ ಪ್ರಿಯೆ, ತಿಳಿಯುತಿಲ್ಲ ನನಗೆ
ಆಕರ್ಶಿತಳಾಗಿರುವಳು ಆ ಶಶಿ ಇಂದೇಕೋ ನನ್ನೆಡೆಗೆ
ಬಿಟ್ಟರೂ ಬಿಡದೆ ಹಿ೦ಬಾಲಿಸುತಿಹಳು ಮನೆಗೆ
ಸ್ವಲ್ಪ ಹೆಚ್ಚೇ ಆಯಿತೇನೋ ಸಲಿಗೆ
ಏಕೋ ನನ್ನ ಮನ ಜಾರುತಿಹುದು ಅವಳ ಕಡೆಗೆ
ಕ್ಷಮಿಸಿಬಿಡು ಪ್ರಿಯೆ
ಕಾರಣ ಇರಬಹುದೇ ಕೂಗಿ ಕೂಗಿ ಹೇಳುತಿಹಳು
ಬರುವೆನು ಬದುಕಿರುವವರೆಗೂ ನಿನ್ನ ಜೊತೆಗೆ...ನಿನ್ನ ಜೊತೆಗೆ...

Sheela Nayak said...

ರೀ ಕಿರಣ್,
ನೀವ್ಯಾಕೆ ನಿಮ್ಮ ಬ್ಲಾಗಿನಲ್ಲಿ ಬರಿಬಾರ್ದು? ನಿಮ್ಮ ಬ್ಲಾಗಿಗೆ ಹೋಗಿ ಇಣಿಕಿ ಬಂದ್ರೆ ಎಲ್ಲಾ ಖಾಲಿ ಖಾಲಿ!! ನೋಡಿ ನನಗೂ ಹೆಚ್ಚೆನೂ ತಿಳಿದಿಲ್ಲ ಆದರೆ ನಮ್ಮ ನಮ್ಮ ಬ್ಲಾಗಲ್ಲಿ ನಮ್ಮ ಮನಸಿಗೆ ಬಂದುದನ್ನು ಬರಿಲಿಕ್ಕೆ ಯಾರಪ್ಪಣೆನೂ ಬೇಕಿಲ್ಲ...ನೀವು ಶುರು ಮಾಡಿ..ಶುಭವಾಗಲಿ!

kiran said...

:)
will try...

kiran said...

ಮಹಿಳಾ ದಿನದ ಹಾರ್ಧಿಕ ಶುಭಾಶಯಗಳು :)

Sheela Nayak said...

Thankq!

kiran said...

ರೀ, ವಾರ ಪತ್ರಿಕೆ ಥರ ವಾರಕ್ಕೊಂದೆ article is it ?
Your fans are waiting, keep writing :) :)

Sheela Nayak said...

ಅಯ್ಯೋ ರಾಮಚಂದ್ರ! ನನ್ನ ಪೋಸ್ಟಿಗೆ ಕಾಯುವವರೂ ಇದ್ದಾರೆಯೇ? ಬಹುಶಃ ನಿಮಗಿನ್ನು ಬ್ಲಾಗ್ ಲೋಕದ ಅದ್ಭುತ ಬರಹಗಾರರ ಪರಿಚಯವಾಗಿಲ್ಲವೆಂದು ಕಾಣುತ್ತದೆ...ನನ್ನ ಬ್ಲಾಗಿನಲ್ಲಿ ಕೆಲವೊಂದು ಲಿಂಕುಗಳಿವೆ ನೋಡಿಯಪ್ಪಾ...ಮತ್ತಿನ್ನು ತೆರೆದ ಮನಸಿನ ಪುಟಗಳ ದರುಶನ ಮಾಡಲಿಕ್ಕೆ ಸಹ ಪುರುಸೊತ್ತು ಸಿಗಲಿಕ್ಕಿಲ್ಲ..ಹ ಹ ಹ....

BTW, thanks for the encouragement...in fact I was preparing an article abt the women's day celebration I had participated...hope to complete it soon...:-)

kiran said...

Hi sheelakka, gud evening
... try this link when you are free
http://www.youtube.com/watch?v=zdqLWeiy5LE

Sheela Nayak said...

Hey Kiran...very heart touching...
thank u for considering me as ur sis...as well as for that link too.

may god bless u!

kiran said...

Hi ಅಕ್ಕ how u ? Seems very busy...

Sheela Nayak said...

Hello Kiran tamma,

Busy!!! well, u can say that...U may now know that I work as a tutor..& its exam time..so busy with preparing Q...and corrections. any new nIlu?

kiran said...

yochne madtidre ondonde neelu huttathe(no), lemme try :)

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...