ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 May, 2014

ಶಾಯರಿ..

ಬಿರಿಯುವ ತುಟಿಗಳಲೆಲ್ಲ ನಗೆ ಹೊಮ್ಮುವುದಿಲ್ಲ
ಪ್ರೀತಿ ದ್ವೇಷ ಎರಡೂ ಸುಲಭವಲ್ಲ
ನೋವು ನಲಿವಿನ ಕಂಬನಿಗೆ ಬಣ್ಣದ ಗುರುತಿಲ್ಲ
ನೋಡುಗರಿಗೆ ಭಾವಗಳ ಅರಿವಾಗುವುದೂ ಸಾಧ್ಯವಿಲ್ಲ!

Har Ek Muskuruhat Muskan Nahi Hoti,
Nafrat ho ya Mohabbat Aasan Nahi Hoti,
Aansu Gam ke Aur Khushi ke Ek Jaise Hote Hai,

inki Pehchan Aasan Nahi Hoti…

28 May, 2014

ಒಲವಿನ ಶಾಯರಿ..

ಭಾವವಿಲ್ಲದ ಕಣ್ಣುಗಳಿಂದ ಹೊರ ಧುಮುಕಿ ಬರುವುದು ಬರೇ ನೀರು
ಹರಸಾಹಸ ಮಾಡಿ ಕಣ್ಣಲ್ಲೇ ಅಣೆಕಟ್ಟು ಕಟ್ಟಿ ಉಳಿಸಿದ್ದೇ ಕಣ್ಣೀರು!
ಬರೇ ಪದಗಳಲ್ಲಿ ವ್ಯಕ್ತಗೊಳಿಸಿದನ್ನು ಒಲವೆನ್ನಲು ಸಾಧ್ಯವೇ
ಮೈಮನಗಳನ್ನು ಬೆಳಗಿಸಿ ಕಣ್ಣಲ್ಲಿ ಬಿಂಬ ಸ್ಥಾಪಿಸುವುದೇ ಒಲವು!


Woh to paani he jo aankho se beh jaye,
Aansu to woh he jo tadapke aankho me hi reh jaye,
Woh pyar hi kya jo lafzo me baya ho,
Pyar to woh he jo aankho me nazar aaye...

27 May, 2014

ಪ್ರೀತಿ ಪ್ರೇಮ.. ಹ್ಮ್!

ಮನವು ಮೆಚ್ಚಿತೆಂಬ ಮಾತ್ರಕೆ ಪ್ರೀತಿಸಬೇಡ
ಮೆಚ್ಚಿಗೆಯಾದವರಿಗಾಗಿ ನಿದ್ದೆ ಊಟ ತ್ಯಜಿಸಬೇಡ
ಎರಡು ದಿನ ಖುಷಿಯಲಿ ಮಾತುಕತೆ ನಡೆಸುವರು
ಮೂರನೆಯ ದಿನ ನನಗೆ ಪುರುಸೊತ್ತಿಲ್ಲ ಅನ್ನುವರು!



Koi achha lage to usse pyar mat karna, 
Uske liye neendein bekaar mat karna, Do din to aayenge khushi se milne, 
Teesre din kahenge mera intezar mat karna... 

-Unknown.

ಜತೆ ಕೊಡದೆ ಹೋದವನ ನೆನಪು..

ನಿನ್ನ ಜೊತೆಯೊಂದನ್ನೇ ನಾ ಬೇಡಿದ್ದೆನಲ್ಲ
ಅಗಲಿಕೆಯ ನೋವನ್ನೇ ಕೊಟ್ಟು ಮರೆಯಾದೆ
ಮಧುರ ನೆನಪಲ್ಲೇ ಕಲಿತೆ ಬದುಕಲು
ಮರೆಯಬೇಕೆಂಬ ವಾಗ್ದಾನವನ್ನೇ ನೀ ಬಯಸುವೆಯಲ್ಲ!

-ಭಾವಾನುವಾದ


Humne manga tha saath unka,
Woh judai ka gam de gaye,
Hum unki yado ke sahare ji lete,
Par woh bhul jaane ki Kasam de gaye...!!
-Unknown.

ಧೂಳು ಮುಸುಕಿದ ಮನಸಿನ ಕನ್ನಡಿ..

ಎಲ್ಲರಲ್ಲೂ ಎಲ್ಲದರಲ್ಲೂ ಹುಳುಕು ಹುಡುಕುವವನ/ಳ ಕನ್ನಡಿಗೆ ಧೂಳು ಮುಸುಕಿದೆ!

26 May, 2014

ಮಂಕುತಿಮ್ಮ..

ಬಹು ರಹಸ್ಯವೋ ಸೃಷ್ಟಿ, ಬಹು ರಹಸ್ಯವೋ ಜೀವ |
ಅಹುದದಲ್ಲವಿದೆಂಬ ವಾದ ಬರಿ ಹರಟೆ ||
ಗುಹೆಯೊಳಿಹುದೆಲ್ಲ ತತ್ವಗಳ ತತ್ವದ ಮೂಲ |
ಬಹಿರಂತರ ರಹಸ್ಯ, ಮಂಕುತಿಮ್ಮ ||

21 May, 2014

ನಿನಗಿಲ್ಲ ನೀತಿ, ನಿಯಮ, ನಿಯತ್ತು ಒಲವೇ..

ಒಲವೇ,

ನಿನಗೆ ಎಳ್ಳು ಕಾಳಿನಷ್ಟೂ ನಿಷ್ಠೆಯಿಲ್ಲ
ನನಗದು ತಿಳಿದಿದೆ..
ಋತು, ದಿನ, ತಿಂಗಳು, ವರ್ಷಗಳಿಗಿಂತಲೂ ಕಡೆ ನೀನು
ಅವಕ್ಕಾದರೂ ನೀತಿ, ನಿಯಮ, ನಿಯತ್ತು ಇವೆ
ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ
ನೀ ಅವರಿವರ ಸೊತ್ತು..
ಆದರೂ ನನಗಿಲ್ಲ ವಿಪತ್ತು
ನಿನ್ನ ನೆರಳೀಗ ನನ್ನ ಸೊತ್ತು!

15 May, 2014

ಒಲವೇ, ಸುಳ್ಳಾಡಿಲ್ಲ ನಿನ್ನ ಜತೆ ನಾನೆಂದೂ!


ಒಲವೇ,

ನಾ ನಿನ್ನ ಅರೆಸುತ್ತ ಹುಡುಕಾಡಿದ್ದು ನಿಜ..
ನೀ ಎದುರಿಗಿದ್ದೂ ಕಾಣಿಸದೇ ಮರೆಯಾಗಿದ್ದದೂ ನಿಜ..
ಪರಿತಾಪಕೆ, ಓಲೈಕೆಗೆ ನೀ ಮಣಿದದ್ದೂ  ನಿಜ..
ಮತ್ತೆ ಕಣ್ಮುಚ್ಚಾಲೆ ಆಟವಾಡಿ ಮರೆಯಾದದ್ದೂ ನಿಜ..
ಮುನಿದು ನೀ ಮೌನದಿ  ಬಹಳಷ್ಟು ನುಡಿದದ್ದೂ ನಿಜ..
ಬೆದರಿ ನಾ ಹಾದಿಯಿಂದ ಸರಿದು ಮರೆಯಾದದ್ದೂ ನಿಜ..
ಉಸಿರಾಟ ಸ್ತಂಭವಾದದ್ದೂ ನಿಜ..
ಕೊನೆಗೆ ನಿನ್ನ ನೆರಳನೇ ನಾ ಕದ್ದದ್ದೂ ನಿಜ..
ಸಾಕು ನನಗದು,
ನಿನ್ನ ನೆರಳನೇ ಬಿಗಿದಪ್ಪಿ ಮತ್ತೆ ಉಸಿರಾಡಿದೆ ಎಂದರೆ ನಂಬುವೆ ತಾನೇ,
ಏಕೆಂದರೆ ನಾನೆಂದೂ ನಿನ್ನ ಜತೆ ಸುಳ್ಳಾಡಿಲ್ಲ ಎಂಬುದೂ ನಿಜ!

13 May, 2014

“ನಿನ್ನೊಲುಮೆಯನು ಸಂಪಾದಿಸಲು ನಿಯಮಗಳೇನು, ಒಲವೇ?”

ಮುಗುಳ್ನಕ್ಕಿತು ಒಲವು,
“ಸಹಿಷ್ಣುತೆಯ ಭಾವದ ಶ್ರೋತ್ರಿಯನಾಗಬಲ್ಲೆಯಾ
ಕಕ್ಕುಲತೆಯ ಸುರಿಸಿ ಕಪ್ಪು ಅಕ್ಷಿಗಳನ್ನು ಆರ್ದ್ರಗೊಳಿಸಬಲ್ಲೆಯಾ
ವಾಣಿಯಲಿ ಒಲುಮೆಯ ಮಕರಂದ ಹರಿಸಬಲ್ಲೆಯಾ!”

-      ಪ್ರೇರಣೆ ರೂಮಿ



12 May, 2014

ಸುಭಾಷಿತ

ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯಃ ಸ್ವಯಮ್|
ಮೂರ್ಖಾಗ್ರೇಖಪಿ ಚ ನ ಬ್ರೂಯಾತ್ ಬುಧಃ ಪ್ರೋಕ್ತಂ ನ ವೇತ್ತಿ ಚ||

ವಿವೇಕಿಗೆ ನಮ್ಮರಿವಿನ ಹಿರಿಮೆಯನು ಬಣ್ಣಿಸುವ ಅಗತ್ಯವಿಲ್ಲ,
ಪರರ ಅರಿವನು ಹೇಳದೆ ಅರಿವನು ಅವನು|
ಅವಿವೇಕಿಗೂ ನಮ್ಮರಿವಿನ ಹಿರಿಮೆಯನು ಹೇಳುವ ಅಗತ್ಯವಿಲ್ಲ,
ಹೇಳಿದರೂ ಅರಿಯದ ಮರುವ ಅವನು||


ಮರುವ=ಮೂರ್ಖ
“ಒಲುಮೆ” ಗಾಗಿ ಹಂಬಲಿಸುವ ಮನವೇ,
ಕಲುಷ ಮಾಡಿಕೊಳ್ಳಬೇಡ ಪೆಡಸು ನುಡಿಗೆ ಮನವನಿತ್ತು!

-ಪ್ರೇರಣೆ ರೂಮಿ

ಒಲವಿನ ದನಿ.. ಸದ್ದಿಲ್ಲವದಕೆ!

ಸದ್ದಿಲ್ಲದ ದನಿಯೊಂದು ಎದೆಯಾಳದಲಿ ಅವಿತಿದೆ,
ಶರಣಾಗುವ ತನಕ ಅದರ ಭಾವ ಕೇಳಿಸಲೊಲ್ಲದು!

-          - ರೂಮಿ

10 May, 2014

ಅಂದು ನೀನಂದಿದ್ದು ನಿಜ ಒಲವೇ,
“ಈ ವ್ಯರ್ಥ ಅಲೆದಾಟ ಬಿಡು...
ಕಲ್ಲು ಮುಳ್ಳು ಕೆಸರು ಕೊಚ್ಚೆಗಳ ಹಾದಿಯಲಿ ನನ್ನರಸಬೇಡ...
ನಿನ್ನೀ ಕುಟೀರದ ಮೂಲೆ ಮೂಲೆಗಳ ಬಲೆಗಡೆಯಲೇ ನನ್ನ ವಾಸ

ಒಮ್ಮೆ ಝಾಡಿಸಿ ನೋಡಂತೆ, ಆಗದೇ ಉಳಿದಿತೇ ನಮ್ಮ ಸಮಾವೇಶ!”

09 May, 2014

ಪಾರ್ಕ್ ಪಾಠ..

ಸ್ವೀಟಿ, ಎಷ್ಟು ಟೈಮ್ ನಂತರ ನಿನ್ ವಾಯ್ಸ್ ಕೇಳ್ತಿದ್ದೇನೆ.. ಆಹ್! ಈಗ ನೋಡು ನಿನ್ನೆಯಿಂದ ಸುರಿದ ಮುಂಗಾರು ಮಳೆ ಇಫೆಕ್ಟ್ ಗೊತ್ತಾಗ್ತಿದೆ! ಡ್ರೈ ಅಂತ ಅನಿಸ್ತಿತ್ತು..  I am feeling better now! “

ನಮ್ಮೆದುರು ಟಿಪ್ ಟಾಪ್ ಡ್ರೆಸ್ ಮಾಡಿಕೊಂಡಿರುವ ಯುವಕನ ಉವಾಚ!

’ಏ ಹುಡುಗಿ, ಕೇರ್‌ಫುಲ್ ಕಣೇ! ಇನ್ನು ಒಂದು ತಿಂಗಳೊಳಗಾಗಿ ಅವನಿಗೆ ನಿನ್ ವಾಯ್ಸ್ ಕರ್ಕಶ ಅನಿಸಿಲ್ಲದಿದ್ದರೆ ನನ್ ಹೆಸರೇ ಬದಲಾಯಿಸಿಬಿಡ್ತೇನೆ! ಕರ್ಕಶ ಬಿಡು, ನಿನ್ ಫೋನೇ ಅವಾಯ್ಡ್ ಮಾಡ್ತಾನೆ ಆಯಪ್ಪ!’

ನನ್ನ ಜತೆ ವಾಕ್ ಬರ್ತಿದ್ದ ನನ್ನ ಗೆಳತಿ ನನ್ನ ಕಿವಿಯಲ್ಲಿ ಪಿಸುಗುಟ್ಟಿದಳು!

“ಯಾಕೆ ಹಾಗ್ನಿತಿಯಾ! “

ನಾನು ಕೇಳಿದಕ್ಕೆ ನನ್ನನ್ನೇ ಗುರಾಯಿಸಿಬಿಟ್ಟಳು ನನ್ನಮ್ಮ!

“ಮತ್ತೇನೇ! ಎಲ್ಲಾ ಹಾಗೆ! ಈ ಎಲ್ಲಾ ಲವ್ ಸ್ಟೋರಿ ಕೆಲವು ತಿಂಗಳುಗಳ ಆಟ.. ಮತ್ತೆ ಆ ಹುಡುಗಿ ಮಾನಸಿಕ ಹಿಂಸೆ ಅನುಭವಿಸುವುದನ್ನು ನಾನೀಗಲೇ ಇಮೇಜಿನ್ ಮಾಡ್ಕೊಳ್ತಿದ್ದೇನೆ!”


ಮತ್ತೆ ನಾವಳೊಟ್ಟಿಗೆ ಚರ್ಚೆ ಮಾಡ್ಲಿಕ್ಕೆ ಹೋಗ್ಲಿಲ್ಲ.. ಸುಮ್ನೆ ಅವಳನ್ನು ಎಳಕೊಂಡು ಪಾರ್ಕಿನ ಐದು ಸುತ್ತಿನ ನಡಿಗೆ ಮುಗಿಸಿ ಮನೆಗೆ ಮರಳಿದೆ. ಆದರೆ ಅದೇ ಮಾತು ಕಿವಿಯಲ್ಲಿ ಗುಯ್ ಗುಡುತ್ತಿದೆ!

07 May, 2014

ಒಲವಿನ ಬಿಂಬ..

ಒಲವೇ,
ನಿನ್ನದೊಂದು ಗಾಢ ಅಪ್ಪುಗೆಯೇ ಸಾಕಾಯ್ತು ನೋಡು...
ಎಲ್ಲವೂ ಉರಿದು ಬೂದಿ
ಇಷ್ಟು ವರುಷಗಳ ಪಾಂಡಿತ್ಯ, ಮೋಹ, ಅಹಂ, ಕನಸು.. ಎಲ್ಲವೂ
ಬೆಳಗುವ ಬಿಂಬ ಮಾತ್ರ ಗರ್ಭ ಗುಡಿಯಲಿ!


ಒಲವೇ,

ನಿನ್ನದೊಂದು ಗಾಢ ಅಪ್ಪುಗೆಯೇ ಸಾಕಾಯ್ತು ನೋಡು...
ಎಲ್ಲವೂ ಉರಿದು ಬೂದಿ
ಇಷ್ಟು ವರುಷಗಳ ಪಾಂಡಿತ್ಯ, ಮೋಹ, ಅಹಂ, ಕನಸು.. ಎಲ್ಲವೂ
ಬೆಳಗುವ ಒಲವಿನ ಹಣತೆ ಮಾತ್ರ ಗರ್ಭ ಗುಡಿಯಲಿ!

ಒಲವಿನ ಸೆರೆಮನೆ!

ಒಲವೇ,

ನಿನ್ನೀ ಸೆರೆಮನೆಗೆ ಗೋಡೆ ಬಾಗಿಲು ಕಿಟಿಕಿಗಳಿಲ್ಲ...
ನೀ ನನ್ನ ಸಂಕೋಲೆಗಳಿಂದ ಬಂಧಿಸಿಲ್ಲ..
ಆದರೂ ನಾನಿಲ್ಲಿಂದ ತಪ್ಪಿಸಿಕೊಳ್ಳಲು ಬಯಸಲಾರೆ!

-ಪ್ರೇರಣೆ ರೂಮಿ

06 May, 2014

ಬೆಳಗು ಒಲವಿನ ಹಣತೆ

ಒಲವಿನ ಹಣತೆ ಹಚ್ಚಿದರೆ,
ಮುಕುತಿಯ ಹಾದಿ ಬೆಳಗುತ್ತದೆ!

A lesson..



Severing a relationship is often difficult, especially if one person is more emotionally invested than the other and is usually a recipient of neglect. However, in almost all cases, those who hurt the most will probably end up happier because in hindsight, when the healing begins and they learn the painful lessons of being taken for granted, they discover their true worth. And, hopefully, they will no longer settle for crumbs.
So, if you are currently in a situation where you are hurting because someone broke your heart, please believe me when I tell you: your heart is really unbreakable. You might think it is broken because your thoughts are preoccupied with hurt, but once the dust-clouds of anger and pain dissipate your heart will still be there to tell you, “Hey kiddo, we can only hurt as much as we allow ourselves to and we can be happy the same way.”

05 May, 2014

ಒಲವಿನ ಆಹ್ವಾನ..


ಒಲವೇ,
ನಿನ್ನ ಲೋಕದಲಿ ಜಾತ್ರೆಯೇ ಇಂದು
ಕ್ಷಣಕ್ಕೊಮ್ಮೆ ಮಿಂಚಿ ಗುಡುಗಿ
ನಿದ್ದೆಯಿಂದೆಬ್ಬಿಸುವ ನಿನ್ನ ಡಂಗೂರ
ಪನ್ನೀರ ಸಿಂಚನ ಮೈಮನಕೆ
ಗವಾಕ್ಷಿಯಿಂದಲೇ ತೂರುವ ಮರುತ
ಕಪ್ಪಾಗಸದಿ ತುಂಬಾ ತೇಲುವ
ಬೆಳಕ ತೋರಣದ ರಂಗಮಂಟಪ
ಹೇಳು, ಚುಕ್ಕಿ ಚಂದಿರರ ಗರ್ಬಾ

ನೃತ್ಯಕೆ ಇದು ಇರಬಹುದೇ ಆಹ್ವಾನ!

ಆಕಾಶ ಮಲ್ಲಿಗೆ

ಆಕಾಶಮಲ್ಲಿಗೆಯ ಸ್ವಗತ-
’ಅಂಗಣ ತುಂಬಾ ಕಡಲಲೆಯ ನೊರೆಗಳು..
ಕಾಲಿಗಂಟುವ ಮರಳಿನಲಿ ನಲ್ಮೆಯ ಓಲೆಗಳು,
ಹ್ಮ್.. ಅಮವಾಸ್ಯೆಯೇ ಇಂದು,
ಅದಕ್ಕೆಂದೇ ಕಣ್ಮುಚ್ಚಾಲೆ ಆಡುವ ಚೇತಾವಣಿ...
ಚಂದ್ರಿಕೆಯಿಲ್ಲದೆ ಒಂಟಿತನ ಕಾಡುತಿದೆಯೇನೋ...

ಇನ್ನು ಅವಳು ಮರಳುವ ತನಕ ನಾನೇ ಅವನ ಕಣ್ಮಣಿ!’

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...